ಇದ್ದಕ್ಕಿದ್ದ ಹಾಗೆ ಅಪ್ಪು ರವರ ಪುತ್ರಿಯನ್ನು ನೋಡಲು ಬಂದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ನೆಚ್ಚಿನ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಎರಡು ತಿಂಗಳು ಕಳೆದು ಹೋಗಿದೆ. ನೆನ್ನೆ ಮೊನ್ನೆಯಷ್ಟೇ ಅವರನ್ನು ನೋಡಿದ ಹಾಗೆ ಇತ್ತು ಎಂಬ ಭಾವನೆ ಇಂದಿಗೂ ಕೂಡ ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ಆದರೆ ಅವರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು.

ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ದರ್ಶನ ಪಡೆಯಲು ಅವರ ಸಮಾಧಿಯ ಬಳಿ ಕಂಠೀರವ ಸ್ಟುಡಿಯೋಗೆ ದಿನಕ್ಕೆ ಸಾವಿರಾರು ಜನರು ಬಂದೇ ಬರುತ್ತಾರೆ ಎಂಬುದು ಇಂದಿಗೂ ಕೂಡ ಕನ್ನಡಿಗರು ಪುನೀತ್ ರಾಜಕುಮಾರ್ ಅವರನ್ನು ಮರೆತಿಲ್ಲ ಎನ್ನುವುದಕ್ಕೆ ಜೀವಂತ ಸಾಕ್ಷಿ. ನಿಮಗೆಲ್ಲ ತಿಳಿದಿರಬಹುದು ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದ ಸಂದರ್ಭದಲ್ಲಿ ಕೆಲವು ಉತ್ತರಭಾರತದ ಕಿಡಿಗೇಡಿಗಳು ಅವರ ಕುರಿತಂತೆ ಹೀನಾಮಾನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಟೀಕಿಸಿದ್ದರು.

sudeep puneeth | ಇದ್ದಕ್ಕಿದ್ದ ಹಾಗೆ ಅಪ್ಪು ರವರ ಪುತ್ರಿಯನ್ನು ನೋಡಲು ಬಂದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ. ಹೇಳಿದ್ದೇನು ಗೊತ್ತೇ??
ಇದ್ದಕ್ಕಿದ್ದ ಹಾಗೆ ಅಪ್ಪು ರವರ ಪುತ್ರಿಯನ್ನು ನೋಡಲು ಬಂದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ. ಹೇಳಿದ್ದೇನು ಗೊತ್ತೇ?? 2

ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಸ್ನೇಹಿತರಾಗಿರುವ ಹಾಗೂ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಬಿರುದಾಂಕಿತ ಕಿಚ್ಚ ಸುದೀಪ್ ರವರ ಪುತ್ರಿ ಸಾನ್ವಿ ಈ ಕುರಿತಂತೆ ಖಂಡಿಸಿ ಪುನೀತ್ ರಾಜಕುಮಾರ್ ಅವರ ಪರವಾಗಿ ನಿಂತಿದ್ದರು. ಇದಕ್ಕೆ ಎಲ್ಲರಿಂದ ವ್ಯಾಪಕವಾಗಿ ಜನಮನ್ನಣೆ ವ್ಯಕ್ತವಾಗಿತ್ತು. ಇನ್ನು ಈಗ ಪುನೀತ್ ರಾಜಕುಮಾರ್ ಅವರ ಮಗಳಾಗಿರುವ ದೃತಿ ಕೂಡ ಮನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರ ಪುತ್ರಿಯಾಗಿರುವ ಸಾನ್ವಿ ಅವರು ಕೂಡ ಪುನೀತ್ ರಾಜಕುಮಾರ್ ರವರ ಮನೆಗೆ ಭೇಟಿ ನೀಡಿದ್ದರು. ಮನೆಗೆ ಬಂದವರೇ ಪುನೀತ್ ರಾಜಕುಮಾರ್ ಅವರ ಫೋಟೋಗೆ ಮಾಲಾರ್ಪಣೆ ಮಾಡಿ ಪುನೀತ್ ರಾಜಕುಮಾರ್ ಅವರ ಮಕ್ಕಳಿಗೆ ಧೈರ್ಯ ತುಂಬುತ್ತಾರೆ. ನೀವು ಚೆನ್ನಾಗಿ ಓದಿ ನಿಮ್ಮ ತಂದೆಯವರ ಹೆಸರಿಗೆ ಗೌರವವನ್ನು ತರಬೇಕು ಎಂಬುದಾಗಿ ಹೇಳಿ ನಿಮ್ಮ ಹಿಂದೆ ಸದಾಕಾಲ ಒಳ್ಳೆಯ ಗೆಳತಿಯಾಗಿ ನಾನಿದ್ದೇನೆ ಎಂಬುದಾಗಿ ಸಾನ್ವಿ ಅವರು ಹೇಳಿದ್ದಾರೆ. ಈಗ ಈ ಕುರಿತಂತೆ ಸಾನ್ವಿಯವರಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಜನರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Comments are closed.