ಖ್ಯಾತ ನಟಿ ಸರಿತಾ ರವರ ಮಗ ಕೂಡ ಖ್ಯಾತ ನಟ , ಆದರೆ ಈ ವಿಷಯ ಯಾರಿಗೂ ತಿಳಿದಿಲ್ಲ. ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನ ವಿಂಟೇಜ್ ಕಾಲದಲ್ಲಿ ನಟಿಸಿದ ಹಲವಾರು ನಟಿಯರು ಇಂದಿಗೂ ಕೂಡ ಕನ್ನಡ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ತಮ್ಮ ನಟನೆಯ ಮೂಲಕ ಅಂದಿನಿಂದ ಇಂದಿನವರೆಗೂ ಸಹ ಕನ್ನಡಿಗರ ಮನದಾಳದಲ್ಲಿ ಉಳಿದಿರುವ ನಟಿಯರು ಬೆರಳೆಣಿಕೆಯಷ್ಟು ಮಾತ್ರ. ಅಂತ ನಟಿಯರಲ್ಲಿ ಇಂದಿಗೂ ಕೂಡ ಒಬ್ಬರು ತಮ್ಮ ವಿಭಿನ್ನ ನಟನೆಯ ಮೂಲಕ ಅದೇ ರೀತಿಯ ವರ್ಚಸ್ಸನ್ನು ಉಳಿಸಿಕೊಂಡು ಬಂದಿದ್ದಾರೆ ಅವರು ಯಾರೆಂದು ನಿಮಗೆ ಸಂಪೂರ್ಣವಾಗಿ ಹೇಳುತ್ತೇವೆ ಬನ್ನಿ.

ಹೌದು ನಾವು ಹೇಳಲು ಹೊರಟಿರುವುದು ಎಂಬತ್ತರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದ ನಟಿ ಸರಿತಾ ರವರ ಬಗ್ಗೆ ಹೇಳಲು ಹೊರಟಿದ್ದೇವೆ. ಆಂಧ್ರಪ್ರದೇಶದ ಗುಂಟಕಲ್ ನಲ್ಲಿ 1960 ರಲ್ಲಿ ಜನಿಸಿದ ಸರಿತಾ ರವರು 1978 ರಲ್ಲಿ ಬಿಡುಗಡೆಯಾದ ಮಂಚಿ ಕಿ ಸ್ಥಾನ ಲೇದು ಎಂಬ ತೆಲುಗು ಚಿತ್ರದ ಮೂಲಕ ಚಿತ್ರ ಜಗತ್ತಿಗೆ ಪದಾರ್ಪಣೆ ಮಾಡಿದರು. ಇದಾದನಂತರ ಮರೋಚರಿತ್ರ ಎಂಬ ತೆಲುಗು ಚಿತ್ರದಲ್ಲಿ ಲೆಜೆಂಡರಿ ನಿರ್ದೇಶಕ ಕೆ ಬಾಲಚಂದರ್ ನಿರ್ದೇಶನದಲ್ಲಿ ಹಾಗೂ ಕಮಲ್ ಹಾಸನ್ ಅವರಿಗೆ ನಾಯಕಿಯಾಗಿ ನಟಿಸಿದರು.

ಇನ್ನು ತೆಲುಗಿನಲ್ಲಿ ಸಾಲು ಸಾಲಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ತೆಲುಗಿನಲ್ಲಿ ಜನಪ್ರಿಯ ನಟಿಯಾಗಿ ಮೂಡಿಬಂದರು. ನಂತರ ಸರಿತಾ ರವರ ಪಯಣ ಬೆಳೆದಿದ್ದು ಕನ್ನಡ ಚಿತ್ರರಂಗದತ್ತ. ಕನ್ನಡದಲ್ಲಿ ಅವರು ಹೆಚ್ಚಾಗಿ ನಟಿಸಿದ್ದು ವರ ನಟ ಡಾಕ್ಟರ್ ರಾಜಕುಮಾರ್ ಅವರೊಂದಿಗೆ. ಈ ಕಾಂಬಿನೇಷನ್ ನಲ್ಲಿ ಮೂಡಿಬಂದ ಮುಖ್ಯ ಚಿತ್ರಗಳೆಂದರೆ ಹೊಸಬೆಳಕು ಕೆರಳಿದಸಿಂಹ ಭಕ್ತ ಪ್ರಹ್ಲಾದ ಚಲಿಸುವ ಮೋಡಗಳು ಕಾಮನಬಿಲ್ಲು ಇತ್ಯಾದಿ. ಕನ್ನಡ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸಿನಲ್ಲಿ ಕನ್ನಡತಿಯಾಗಿ ಉಳಿದು ಬಿಟ್ಟರು.

ಕೇವಲ ತೆಲುಗು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಮಲಯಾಳಂ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡರು ಸರಿತ. 80ರ ದಶಕದಲ್ಲಂತೂ ಸರಿತಾ ರವರ ಜನಪ್ರಿಯತೆ ಮುಗಿಲುಮುಟ್ಟಿತ್ತು. ಬಣ್ಣ ಕೊಂಚ ಕಪ್ಪಗಿದ್ದರೂ ಸಹ ನಟನೆಯ ಮೂಲಕ ತಾನು ಸಾಧಿಸಬಲ್ಲ ಎಂಬುದನ್ನು ಸಂಕುಲಕ್ಕೆ ತೋರಿಸಿದ ಮಹಾನ್ ನಟಿ ಸರಿತಾ ಎಂದು ಹೇಳಬಹುದು. ಕೇವಲ ನಟಿಯಾಗಿ ಮಾತ್ರವಲ್ಲದೆ ಸರಿತ ವಾಯ್ಸ್ ಆರ್ಟಿಸ್ಟ್ ಆಗಿ ಕೂಡ ಕನ್ನಡದಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಹೆಸರಾಂತ ನಟಿಯರಾದ ಮಾಧವಿ ಸೌಂದರ್ಯ ರಮ್ಯಕೃಷ್ಣ ನಗ್ಮ ವಿಜಯಶಾಂತಿ ಸಿಮ್ರನ್ ತಬು ಸುಶ್ಮಿತಾ ಸೇನ್ ಅವರಂತಹ ಖ್ಯಾತ ನಟಿಯರಿಗೆ ವಾಯ್ಸ್ ಆರ್ಟಿಸ್ಟ್ ಆಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಇನ್ನು ಇವರು ವೈವಾಹಿಕ ಜೀವನಕ್ಕೆ ನಾವು ಕಣ್ಣು ಹಾಕುವುದಾದರೆ ಮೊದಲ ಮದುವೆ ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ನಡೆದಿದ್ದು ಹೆಚ್ಚು ತಿಂಗಳುಗಳ ಕಾಲ ಉಳಿಯಲಿಲ್ಲ. ನಂತರ ಮಲಯಾಳಂನ ಖ್ಯಾತ ನಟ ಮುಖೇಶ್ ರವರನ್ನು 1988 ರಲ್ಲಿ ಮದುವೆಯಾದರು. ನಂತರ ಇಬ್ಬರು ಗಂಡು ಮಕ್ಕಳನ್ನು ಪಡೆದರು. 2011 ರಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಪರಸ್ಪರ ವಿವಾಹ ವಿಚ್ಛೇದನವನ್ನು ಪಡೆದರು. ನಂತರ ತಮ್ಮ ಮಕ್ಕಳೊಂದಿಗೆ ದುಬೈಗೆ ಹೋಗಿ ನೆಲೆಸಿದ್ದ ಸರಿತಾ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ ನಿಮಗೆ ಗೊತ್ತಾ ನಟಿ ಸರಿತಾ ರವರ ಒಬ್ಬ ಮಗ ಈಗಾಗಲೇ ಚಿತ್ರರಂಗದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ನಟ.

ಹೌದು ಸ್ನೇಹಿತರೆ ನಟಿ ಸರಿತಾ ರವರ ಮಗ ಶ್ರವಣ್ ಮಲೆಯಾಳಂ ಚಿತ್ರರಂಗದಲ್ಲಿ ಈಗಾಗಲೇ ಚಿತ್ರದಲ್ಲಿ ನಡೆಸುವ ಮೂಲಕ ಸಾಕಷ್ಟು ಹೆಸರನ್ನು ಹೊಂದಿದ್ದಾರೆ. ಹೌದು ಸ್ನೇಹಿತರೆ ಶ್ರವಣ್ ಈಗಾಗಲೇ ಕಲ್ಯಾಣಂ ಎನ್ನುವ ಮಲಯಾಳಂ ಚಿತ್ರದಲ್ಲಿ ಈಗಾಗಲೇ ನಟಿಸಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ ಈ ಚಿತ್ರದಲ್ಲಿ ಅವರೊಂದಿಗೆ ಅವರ ತಂದೆ ಮುಖೇಶ್ ಅವರು ಕೂಡ ನಟಿಸಿದ್ದಾರೆ. ತಾಯಿಯ ಹಾದಿಯಲ್ಲಿ ಅವರ ಮಗ ಶ್ರವಣ್ ಕೂಡ ಈಗಾಗಲೇ ಚಿತ್ರರಂಗದ ಹಾದಿ ತುಳಿದಿದ್ದು ಅದರಲ್ಲಿ ಅವರು ಯಶಸ್ವಿಯಾಗಲೆಂದು ನಾವು ಹಾರೈಸೋಣ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿ ಕೊಳ್ಳಿ.

Comments are closed.