ಶನಿದೇವರ ಕೋಪವನ್ನು ತಣ್ಣಗಾಗಿಸಿ, ಅನುಗ್ರಹ ಪಡೆಯಲು ಈ ಸುಲಭ ಮಂತ್ರವನ್ನು ಪಠಿಸಿ !

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಶನಿ ದೇವರು ನಮ್ಮ ಜೀವನದ ಕರ್ಮ ಫಲಗಳನ್ನು ಅನುಸರಿಸಿ ನಮ್ಮ ಜೀವನದಲ್ಲಿ ಸರಿಯಾದ ಹಾದಿಯಲ್ಲಿ ನಡೆಯುವಂತೆ ದಾರಿ ತೋರುವ ದೇವರು ಎಂದು ಹೆಸರು ಪಡೆದು ಕೊಂಡಿದ್ದಾರೆ. ನೀವು ಮಾಡುವ ಪ್ರತಿಯೊಂದು ಕಾರ್ಯವನ್ನು ಗಣನೆಗೆ ತೆಗೆದುಕೊಂಡು ನಿಮ್ಮ ಮೇಲೆ ದೃಷ್ಟಿ ಹರಿಸಿ ನಿಮ್ಮ ಕಾರ್ಯದ ಫಲಗಳನ್ನು ನೀಡಿರುತ್ತಾರೆ.

ಆದ್ದರಿಂದ ಶನಿ ದೇವರನ್ನು ಸಂತೋಷಪಡಿಸುವ ಮೂಲಕ ನೀವು ನಿಮ್ಮ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು, ಹಾಗೂ ಇದರಿಂದ ನಿಮ್ಮ ಜೀವನದಲ್ಲಿ ಹಣ, ಯಶಸ್ಸು ಮತ್ತು ವೃತ್ತಿಗೆ ಸಂಬಂಧಿಸಿದ ಯಶಸ್ಸುಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಒಂದು ವೇಳೆ ನೀವು ಶನಿ ದೇವರನ್ನು ಆರಾಧಿಸುವುದು ಹೇಗೆ ಎಂದು ತಿಳಿದುಕೊಂಡು ನಿಯಮಗಳನ್ನು ಪಾಲಿಸಿದರೆ ನಿಮಗೆ ತಕ್ಷಣವೇ ಫಲ ಸಿಗುತ್ತದೆ. ಇಂದು ನಾವು ಶನಿದೇವರನ್ನು ಹೇಗೆ ಪೂಜಿಸಬೇಕು ಹಾಗೂ ಯಾವ ಮಂತ್ರ ಪಠಣ ಮೂಲಕ ಶನಿದೇವರನ್ನು ಮೆಚ್ಚಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ ನೋಡಿ.

ಸ್ನೇಹಿತರೇ ನೀವು ಶನಿ ದೇವರನ್ನು ಪೂಜಿಸುವಾಗ ಶನಿ ದೇವರ ವಿಗ್ರಹದ ಮುಂದೆ ನಿಂತು ಪೂಜಿಸಬಾರದು, ಪಕ್ಕಕ್ಕೆ ನಿಂತುಕೊಳ್ಳಿ. ಹಾಗೂ ನೀವು ಶನಿ ದೇವರನ್ನು ದೇವಸ್ಥಾನದಲ್ಲಿ ಮಾತ್ರ ಪೂಜಿಸಬೇಕು, ಅಥವಾ ಅರಳಿ ಮರವನ್ನು ಕೂಡ ನೀವು ಪೂಜಿಸಬಹುದು. ಇನ್ನೂ ಶನಿ ದೇವರ ಮುಂದೆ ಅಥವಾ ದೇವಸ್ಥಾನದಲ್ಲಿ ನೀವು ದೀಪವನ್ನು ಬೆಳಗಿಸುವುದು ಉತ್ತಮ. ಆದರೆ ಎಣ್ಣೆಯನ್ನು ಹೇಗೆಂದರೆ ಹಾಗೆ ಸುರಿದು ವ್ಯರ್ಥ ಮಾಡಬೇಡಿ. ಶನಿ ದೇವರನ್ನು ಪೂಜೆ ಮಾಡುವ ಸಂದರ್ಭದಲ್ಲಿ ನೀವು ಉತ್ತಮ ನಡುವಳಿಕೆಯನ್ನು ಹೊಂದಿರಬೇಕು.

ಇನ್ನು ಅಷ್ಟೇ ಅಲ್ಲದೇ ಶನಿವಾರ ಕೇವಲ ಶನಿ ದೇವನನ್ನು ಅಷ್ಟೇ ಅಲ್ಲದೆ ಶಿವ ಅಥವಾ ವಿಷ್ಣು ಅವತಾರವಾದ ಶ್ರೀ ಕೃಷ್ಣನನ್ನು ಪೂಜಿಸಿ. ಶನಿವಾರ ಸಂಜೆ ನೀವು ಶನಿ ದೇವರ ಮಂತ್ರಗಳನ್ನು ಪಠಿಸಬಹುದಾಗಿದೆ. ಅರಳಿ ಮರಕ್ಕೆ ನೀರನ್ನು ನೀಡಿ, ನಂತರ ಮರದ ಬಳಿ ಸಾಸಿವೆ ದೀಪವನ್ನು ಬೆಳಗಿಸುವುದು. ಸಾಧ್ಯವಾದರೆ ಕೆಲವು ಜನರಿಗೆ ಊಟವನ್ನು ದಾನಮಾಡಿ. ಇನ್ನು ಶನಿ ದೇವರನ್ನು ಮೆಚ್ಚಿಸುವ ಸುಲಭ ಮಂತ್ರ ವೇನೆಂದರೆ ಓಂ ಶಂ ಶನೈಶ್ಚರಾಯ ನಮಃ.

Comments are closed.