ಶನಿವಾರ ಸಂಜೆ ರಾಶಿಯ ಆಧಾರದ ಮೇರೆ ಈ ಕೆಲಸ ಮಾಡಿ ಶನಿ ದೋಷದಿಂದ ನಿವಾರಣೆ ಪಡಿಯಿರಿ.

ಹಲೋ ಫ್ರೆಂಡ್ಸ್, ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿವಾರ ಸಂಜೆ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಶನಿ ದೋಷವನ್ನು ತಪ್ಪಿಸಬಹುದು ಎಂದು ನಂಬಲಾಗಿದೆ. ಶನಿವಾರ ತೆಗೆದುಕೊಂಡ ಪರಿಹಾರಗಳನ್ನು ಭಗವಾನ್ ಶನಿ ದೇವರಿಗೆ ಅರ್ಪಿಸಲಾಗಿದೆ. ಈ ಪರಿಹಾರಗಳ ಸಹಾಯದಿಂದ ಶನಿ ದೇವರ ಅನುಗ್ರಹವನ್ನು ಪಡೆಯಲು ಸಾಧ್ಯವಾಗುತ್ತದೆ. ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರು ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಲು ಕ್ರಮಗಳನ್ನು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳುತ್ತೇವೆ ಕೇಳಿ.

ಮೇಷ ರಾಶಿ: ಮೇಷ ರಾಶಿಯವರು ಶನಿವಾರದಂದು ಶನಿ ದೇವರನ್ನು ಮೆಚ್ಚಿಸಲು ಪ್ರಾರ್ಥನೆ ಮಾಡಿ ಸಾಸಿವೆ ಎಣ್ಣೆಯನ್ನು ಶನಿ ದೇವರಿಗೆ ಅರ್ಪಿಸಬೇಕು. ಸಾಧ್ಯವಾದರೇ ಕಪ್ಪು ಎಳ್ಳನ್ನು ಕೂಡ ಶನಿ ದೇವರಿಗೆ ಅರ್ಪಿಸಿ.

ವೃಷಭ ರಾಶಿ: ನಿಮ್ಮ ರಾಶಿ ಚಕ್ರದ ಜನರು ಶನಿ ದೇವರ ಸ್ತುತಿ ಯನ್ನು ಪ್ರಾರ್ಥಿಸಬೇಕು. ಸಾಧ್ಯವಾದರೇ ಶನಿವಾರ ಸಂಜೆ ನೀವು ಶನಿ ದೇವರ ಸ್ತುತಿಯನ್ನು ಪಠಿಸಿ, ಈ ಸಮಯದಲ್ಲಿ ಪಠಿಸುವುದು ಬಹಳ ಶ್ರೇಷ್ಟವೆನಿಸಿದೆ.

ಮಿಥುನ: ಈ ರಾಶಿಚಕ್ರದ ಜನರು ಶನಿವಾರದಂದು ಶನಿದೇವನನ್ನು ಪೂಜಿಸಬೇಕು, ಪೂಜಿಸುವ ಸಂದರ್ಭದಲ್ಲಿ ಶನಿ ದೇವನನ್ನು ನಿಮ್ಮ ಗುರು ಎಂದು ಭಾವಿಸಿ ಅವರಿಗೆ ನಿಯಮಿತವಾದ ಪ್ರಾರ್ಥನೆ ಮಾಡಿ.

ಕರ್ಕಾಟಕ: ಈ ರಾಶಿ ಚಕ್ರದ ಜನರು ಶನಿವಾರದಂದು ಶನಿ ದೇವನನ್ನು ಮೆಚ್ಚಿಸಲು ಎರಡುವರೆ ಕಿಲೋ ಕಪ್ಪು ಉದ್ದಿನ ಬೇಳೆಯನ್ನು ಖರೀದಿಸಿ ದೇವಸ್ಥಾನಕ್ಕೆ ದಾನ ನೀಡಿ.

ಸಿಂಹ: ಕಪ್ಪು ಬಟ್ಟೆ ಮತ್ತು ಕಬ್ಬಿಣದ ವಸ್ತುಗಳನ್ನು ಶನಿವಾರದಂದು ದಾನ ಮಾಡಿ ಶನಿವಾರ ಶನಿ ದೇವರಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವ ಮೂಲಕ ಶನಿ ದೋಷದಿಂದ ನೀವು ನಿವಾರಣೆ ಪಡೆಯಬಹುದು.

ಕನ್ಯಾ: ಈ ರಾಶಿ ಚಕ್ರದ ಜನರು ಶನಿ ದೇವರಿಗೆ ಇಷ್ಟವಾದ ಬಣ್ಣ ವಾಗಿರುವ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಶನಿವಾರ ವನ್ನು ಕಳೆಯುವುದರಿಂದ ನೀವು ಶನಿ ದೇವರ ಕೃಪೆಗೆ ಪಾತ್ರರಾಗಿ ನಿಮ್ಮ ದೋಷವನ್ನು ಕಳೆದುಕೊಳ್ಳಬಹುದು.

ತುಲಾ: ಶನಿ ದೇವರ ಮಂತ್ರ ಪಠನೆ ಮಾಡಿ, ನೀವು ಸಾಸಿವೆ ಎಣ್ಣೆಯನ್ನು ದಾನ ಮಾಡುವುದರಿಂದ ನೀವು ನಿಮ್ಮ ಎಲ್ಲಾ ದೋಷಗಳನ್ನು ಪರಿಹಾರ ಮಾಡಿಕೊಳ್ಳ ಬಹುದು.

ವೃಶ್ಚಿಕ: ನೀವು ಶನಿವಾರದಂದು ಶನಿ ದೇವನನ್ನು ಮೆಚ್ಚಿಸಲು ಪಕ್ಷಿಗಳಿಗೆ ಸೇವೆ ಮಾಡಬೇಕಾಗಿದೆ, ಏಳು ವಿವಿಧ ರೀತಿಯ ಧಾನ್ಯಗಳನ್ನು ಪಕ್ಷಿಗಳಿಗೆ ನೀಡಿ ನೀರನ್ನು ವ್ಯವಸ್ಥೆ ಮಾಡಿದರೆ ನಿಮಗೆ ಶನಿ ದೇವರ ಕೃಪೆ ಲಭ್ಯವಾಗುತ್ತದೆ.

ಧನಸ್ಸು: ಶನಿವಾರದಂದು ನೀವು ಶ್ರೀ ಕೃಷ್ಣನನ್ನು ಪೂಜಿಸಿ ನಂತರ ಶನಿ ದೋಷದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಶನಿ ದೇವರಿಗೆ ಪೂಜೆ ಮಾಡಿ. ಇದರಿಂದ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.

ಮಕರ: ಈ ರಾಶಿ ಚಕ್ರದ ಜನರು ಕಪ್ಪು ಎಳ್ಳು, ಕಬ್ಬಿಣ, ಸಾಸಿವೆ ಎಣ್ಣೆ, ಉದ್ದಿನ ಬೇಳೆ ಅಥವಾ ಯಾವುದೇ ಕಪ್ಪು ಪಾನಿಯವನ್ನು ಶನಿ ದೇವರಿಗೆ ಅರ್ಪಿಸುವ ಮೂಲಕ ದೋಷದಿಂದ ಪಾರಾಗಬಹುದು.

ಕುಂಭ: ನೀವು ಶನಿವಾರ ಮಂತ್ರಗಳನ್ನು ಪಠಿಸುವ ಮೂಲಕ ಶನಿ ದೇವರ ಕೃಪೆಗೆ ಪಾತ್ರರಾಗಬಹುದು, ಸಾಧ್ಯವಾದಷ್ಟು ಮಂತ್ರಗಳನ್ನು ಪಠಿಸಿದ ದೇವರ ಕಡೆ ಗಮನ ಕೊಡಿ.

ಮೀನಾ: ನೀವು ಶನಿವಾರ ಶನಿ ದೇವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಇದರಿಂದ ನಿಮ್ಮ ಕಷ್ಟಗಳು ದೂರವಾಗಿ ಶನಿ ದೋಷದಿಂದ ನಿವಾರಣೆ ಪಡೆಯಬಹುದು.

Comments are closed.