ಕನ್ನಡದ ಟಾಪ್ ನಂತರ ಜೊತೆ ನಟನೆ ಮಾಡಿದ್ದ ನಟಿ ಇಂದು ಚಾಕಲೇಟ್ ಕಂಪನಿ ಮಾಲಿಕೆ, ಯಾರು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಅಂದು ಕನ್ನಡ ಚಿತ್ರರಂಗದ ಸುವರ್ಣ ಯುಗ . ಅತ್ತ ನಟಸಾರ್ವಭೌಮ ಡಾ ರಾಜ್ ಕುಮಾರ್ , ಇತ್ತ ಸಾಹಸಸಿಂಹ ವಿಷ್ಣುವರ್ಧನ್ . ಕನ್ನಡ ಚಿತ್ರರಂಗದಲ್ಲಿ ಇಂಡಸ್ಟ್ರಿ ಹಿಟ್ ಚಿತ್ರಗಳ ಮೆರವಣಿಗೆಯೇ ಆರಂಭವಾಗಿತ್ತು. ಅಂತಹ ಕಾಲದಲ್ಲಿ ಪೋಷಕ ನಟಿಯಾಗಿ ತಮ್ಮ ಛಾಪನ್ನು ಮೂಡಿಸಿದವರು ನಟಿ ಶಾರದಾ. ಅಣ್ಣಾವ್ರು , ದಾದಾ , ಅನಂತ್ ನಾಗ್ ಹೀಗೆ ಹಲವಾರು ನಟರೊಂದಿಗೆ ನಟಿಸಿ ಮಿಂಚಿದ್ದ ನಟಿ ಶಾರದಾ ಇಂದು ಸಹಸ್ರಾರು ಮಹಿಳೆಯರಿಗೆ ಉದ್ಯೋಗ ನೀಡಿರುವ ಚಾಕೋಲೇಟ್ ಕಂಪೆನಿಯ ಮಾಲಿಕೆ.

ಹೌದು ಅಂದಿನ ದಿನಗಳಲ್ಲಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ಶಾರದಾ ರವರಿಗೆ ಬಹುಬೇಡಿಕೆಯಿತ್ತು. ಆ ಕಾಲದಲ್ಲಿ ಅವರ ಅತ್ಯದ್ಭುತ ಮನೋಜ್ಞ ನಟನೆಗೆ ಚಪ್ಪಾಳೆ ತಟ್ಟದವರಿರಲಿಲ್ಲ, ಅವರ ಅಮೋಘ ಕಂಠಸಿರಿಗೆ ಮೈಮರೆತವರಿರಲಿಲ್ಲ. ಸರ್ವ ವಿಧದಲ್ಲೂ ಎಲ್ಲಾ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು.

ನಂತರದ ದಿನಗಳಲ್ಲಿ ನಟಿ ಶಾರದಾ ಆಗಲೇ ವಿವಾಹಿತರಾಗಿ ಮೂರು ಮಕ್ಕಳನ್ನು ಹೊಂದಿದ್ದ ಹಾಸ್ಯ ನಟ ಚೆಲಮ್ ರವರನ್ನು ವಿವಾಹವಾದರು. ಆದರೆ ಚೆಲಮ್ ಪ್ರತಿದಿನ ಶಾರದಾ ರವರು ಚಿತ್ರೀಕರಣ ಮುಗಿಸಿಬರುತ್ತಿದ್ದಂತೆ ಅವರಿಗೆ ಕುಡಿದು ಬಂದು ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು. ಇದನ್ನು ತಾಳಲಾರದೇ ನಟಿ ಅವರಿಂದ ವಿಚ್ಛೇದನ ಪಡೆದು ಇನ್ನೊಂದು ಮದುವೆ ಆದರೂ ಕೂಡ ಅದು ಕೂಡ ಹೆಚ್ಚು ದಿನ ಸಾಗಲಿಲ್ಲ. ಆ 2ನೇ ವಿವಾಹ ಕೂಡ ಡಿವೋರ್ಸ್ ನಲ್ಲೇ ಅಂತ್ಯವಾಯಿತು.

ಈ ಎರಡು ವಿವಾಹ ಸಂಬಂಧಗಳು ಮುರಿದು ಹೋದ ನಂತರ ಶಾರದಾ ರವರು ವಿವಾಹದ ಸಹವಾಸ ಬೇಡವೆಂದು ತನ್ನ ತಮ್ಮನ ಮನೆಗೆ ಹೋಗಿ ಅವರ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕತೊಡಗಿದರು. ನಂತರದ ದಿನಗಳಲ್ಲಿ ಮಹಿಳೆಯರಿಗೆ ಸ್ವಾವಲಂಬಿ ಜೀವನದ ದಾರಿಯನ್ನು ತೋರಿಸುವ ದಿಶೆಯಲ್ಲಿ ಲೋಟಸ್ ಚಾಕಲೇಟ್ ಕಂಪೆನಿಯನ್ನು ಆರಂಭಿಸಿದರು. ಈ ಕಂಪೆನಿ ಎಷ್ಟು ಯಶಸ್ಸನ್ನು ಹೊಂದಿತೆಂದರೆ. ಈ ಚಾಕಲೇಟ್ ಗಳು ಕೇವಲ ಇಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಅತಿಯಾದ ಬೇಡಿಕೆ ಕಂಡು ಅತೀ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗತೊಡಗಿತು.

ಈಗ ಶಾರದಾ ರವರ ಚಾಕೊಲೇಟ್ ಕಂಪೆನಿ ವರ್ಷಕ್ಕೆ ನೂರಾರು ಕೋಟಿ ವ್ಯವಹಾರ ನಡೆಸುತ್ತಿದ್ದು, ಎರಡು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. ಚಿತ್ರಗಳು ಸಿಗಲಿಲ್ಲವೆಂದು ಸುಮ್ಮನೆ ಕೂರದೆ ತನ್ನ ತಾಕತ್ತು ಏನೆಂಬುದನ್ನು ದೊಡ್ಡ ಚಾಕಲೇಟ್ ಕಂಪೆನಿಯನ್ನು ತಲೆಯೆತ್ತಿ ನಿಲ್ಲುವಂತೆ ಮಾಡಿದ ಶಾರದಾ ರವರ ದೃಢ ನಿಶ್ಚಯ ಎಲ್ಲರಿಗೂ ಮಾದರಿಯಾಗುವಂತದ್ದು.

Leave a Reply

Your email address will not be published. Required fields are marked *