ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿಗೆ ಗಲ್ಲಿ ಕಿಚನ್ ಹೋಟೆಲ್ನಲ್ಲಿ ಒಂದು ದಿನಕ್ಕೆ ಬರುತ್ತಿದ್ದ ಗಳಿಕೆ ಎಷ್ಟು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಶೈನ್ ಶೆಟ್ಟಿ ಅವರ ಬಗ್ಗೆ ನಿಮಗೆ ಗೊತ್ತೇ ಇದೆ. ಹಿಂದೆ ಸುವರ್ಣವಾಹಿನಿಯಲ್ಲಿ ಒಂದು ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಖ್ಯಾತ ದಾರವಾಹಿ ಲಕ್ಷ್ಮಿ ಬಾರಮ್ಮ ಧಾರವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಂತಹ ನಟ. ನಂತರ ಸಿನಿಮಾದಲ್ಲಿ ನಟಿಸುವ ಆಸೆಯ ಕಾರಣದಿಂದಾಗಿ ಕಿರುತೆರೆಯ ಧಾರವಾಹಿಯನ್ನು ಬಿಟ್ಟು ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಅಲೆದಾಡತೊಡಗಿದರು.

ಆದರೆ ಸಿನಿಮಾದಲ್ಲಿ ನಟಿಸುವ ಅವಕಾಶವಿಲ್ಲದೆ ನಂತರ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿಕೊಂಡರು. ಅದಾದ ನಂತರ ಪ್ರಾರಂಭಿಸಿದ್ದು ಅವರು ಗಲ್ಲಿ ಕಿಚನ್. ಅದು ಅವರನ್ನು ಆರ್ಥಿಕವಾಗಿ ಕೈಹಿಡಿಯಿತು ಅದೇ ಟೈಮಿಗೆ ಕಲರ್ಸ್ ಕನ್ನಡ ವಾಹಿನಿಯಿಂದ ಬಿಗ್ ಬಾಸ್ ಗೆ ಅವಕಾಶ ದೊರೆಯಿತು. ಬಿಗ್ ಬಾಸ್ ನಂತರದ ಕಹಾನಿ ನಿಮಗೆಲ್ಲ ಗೊತ್ತೇ ಇದೆ. ಎಲ್ಲ ಪ್ರಬಲ ಅಭ್ಯರ್ಥಿಗಳಿಗೂ ಸೆಡ್ಡುಹೊಡೆದು ಬಿಗ್ ಬಾಸ್ ಕನ್ನಡ ಸೀಸನ್ 7 ರ ವಿನ್ನರ್ ಆಗಿ ಮಿಂಚಿದರು.

ಬಿಗ್ ಬಾಸ್ ವಿಜೇತ ಪಟ್ಟದ ಹಣವನ್ನು ಗಲ್ಲಿ ಕಿಚನ್ ವಾಹನವನ್ನು ಇನ್ನಷ್ಟು ದೊಡ್ಡ ಮಟ್ಟಿಗೆ ಹಾಗೂ ಆಧುನೀಕರಣವನ್ನು ಮಾಡಲು ಉಪಯೋಗಿಸಿದರು. ಈಗ ಶೈನ್ ಶೆಟ್ಟಿ ಅವರಿಗೆ ಎಲ್ಲಕಡೆಯಿಂದಲೂ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿರಬಹುದು ಆದರೆ ಒಂದು ಕಾಲದಲ್ಲಿ ಶೆಟ್ಟಿಯವರಿಗೆ ಆರ್ಥಿಕವಾಗಿ ಬಲ ನೀಡಿದ ಉದ್ಯಮವಾಗಿತ್ತು ಗಲ್ಲಿ ಕಿಚನ್ ಟ್ರಕ್. ಇದು ಅವರು ದಿನಕ್ಕೆ ಸಾವಿರಾರು ರೂಪಾಯಿಗಳ ವ್ಯಾಪಾರವನ್ನು ಕೊಡುತ್ತಿತ್ತು. ಇಂದು ಅಥವಾ ಮುಂದೆ ಶೈನ್ ಶೆಟ್ಟಿ ಅವರು ಎಷ್ಟು ದೊಡ್ಡ ಸ್ಟಾರ್ ಆದರೂ ಕೂಡ ಅವರು ಕಷ್ಟದಲ್ಲಿದ್ದಾಗ ಅವರ ಕೈಹಿಡಿದಿದ್ದು ಈಗಲ್ಲಿ ಕಿಚನ್ ಉದ್ಯಮ ವೆಂಬುದು ಎಂದೆಂದಿಗೂ ನಂಬಲೇಬೇಕು.

Leave a Reply

Your email address will not be published. Required fields are marked *