ಒಂದು ಕಾಲದಲ್ಲಿ ಆಟೋ ಓಡಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಸಿರಾಜ್ ರವರ ಇಂದಿನ ಆಸ್ತಿ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ನು ಗಳಿಸಿದವರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅದೇ ರೀತಿ ಹೆಚ್ಚು ರನ್ ನೀಡುವ ಬೌಲರ್ ಗೆ ಟ್ರೋಲ್ ಪೇಜ್ ಗಳು ದಿಂಡಾ ಅಕಾಡೆಮಿ ಹೆಡ್ ಎಂಬ ಅವಾರ್ಡ್ ಸಹ ನೀಡುವುದು ನಿಮ್ಮ ಗಮನಕ್ಕೆ ಬಂದಿರುವುದು. ಹೌದು ಆರ್.ಸಿ.ಬಿ ತಂಡಕ್ಕೆ 2018 ರಲ್ಲಿ ಬಂದ ಹೈದರಾಬಾದ್ ನ ವೇಗಿ ಮಹಮದ್ ಸಿರಾಜ್ ಕೊನೆಯ ಓವರ್ ಗಳಲ್ಲಿ ಹೆಚ್ಚು ರನ್ ನೀಡುವ ಮೂಲಕ , ಅದೆಷ್ಟೋ ಪಂದ್ಯಗಳಲ್ಲಿ ಆರ್.ಸಿ.ಬಿ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದರು.

ಆದರೇ ಸಮಯ ಒಂದೇ ರೀತಿ ಇರುವುದಿಲ್ಲ ಎಂಬಂತೆ ಈಗ ಅದೇ ಸಿರಾಜ್ ಮ್ಯಾಚ್ ವಿನ್ನರ್ ಬೌಲರ್ ಆಗಿದ್ದಾರೆ. ಸಿರಾಜ್ ಕೌಟುಂಬಿಕ ಹಿನ್ನಲೆ ಅಷ್ಟೆನೂ ಉತ್ತಮವಾಗಿರಲಿಲ್ಲ. ತಂದೆ ಮಹಮದ್ ಗೌಸ್ ಹೈದರಾಬಾದ್ ನ ಚಾರ್ ಮಿನಾರ್ ನಲ್ಲಿ ಆಟೋ ಓಡಿಸುತ್ತಿದ್ದರು. ತಾಯಿ ಶಬಾಜಾ ಬೇಗಂ ಗೃಹಿಣಿಯಾಗಿದ್ದರು. ತಂದೆ ಆಟೋದಿಂದ ಬಂದ ಆದಾಯದಿಂದಲೇ ದೊಡ್ಡ ಕುಟುಂಬವನ್ನ ಸಾಕಬೇಕಿತ್ತು. ಹೀಗಾಗಿ ಸಿರಾಜ್ ಬಾಲ್ಯ ಬಹಳ ಕಷ್ಟಗಳಲ್ಲಿ ಸಾಗುತ್ತಿತ್ತು. ಟೆನಿಸ್ ಬಾಲ್ ನಲ್ಲಿ ಕ್ರಿಕೇಟ್ ಆಡುತ್ತಿದ್ದ ಸಿರಾಜ್ ರ ಪ್ರತಿಭೆ ಗುರುತಿಸಿದ್ದು ಹೈದರಾಬಾದ್ ನ ಕಲಾತ್ಮಕ ಬ್ಯಾಟ್ಸ್ ಮನ್ ವಿ.ವಿ.ಎಸ್.ಲಕ್ಷ್ಮಣ್.

ಆದರೇ ಹೈದರಾಬಾದ್ ಪರ ನೀರಿಕ್ಷಿತ ಪ್ರದರ್ಶನ ನೀಡದ ಕಾರಣ ಆ ತಂಡ ಸಿರಾಜ್ ರನ್ನ ಬಿಡುಗಡೆಗೊಳಿಸಿತ್ತು. ಮುಂದೆ ಹರಾಜಿನಲ್ಲಿ ಸಿರಾಜ್ ರನ್ನ ಕೊಂಡುಕೊಂಡ ಆರ್.ಸಿ.ಬಿ ಗೆ ಎರಡು ಸೀಸನ್ ಗಳಲ್ಲಿಯೂ ಸಿರಾಜ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ಆದರೇ 2020 ರಲ್ಲಿ ಕೆಕೆಆರ್ ವಿರುದ್ದ ನೀಡಿದ ಪ್ರದರ್ಶನ ಸಿರಾಜ್ ಪಾಲಿಗೆ ಟರ್ನಿಂಗ್ ಪಾಯಿಂಟ್. ಅಲ್ಲಿಂದಲೇ ಆಸ್ಟ್ರೇಲಿಯಾ ವಿರುದ್ದ ಬಾರ್ಡರ್ – ಗವಾಸ್ಕರ್ ಟೂರ್ನಿಗೂ ಆಯ್ಕೆಯಾಗುತ್ತಾರೆ. ಎರಡನೇ ಟೆಸ್ಟ್ ನಲ್ಲಿ ಪದಾರ್ಪಣೆ ಮಾಡಿದ ಸಿರಾಜ್, ನಾಲ್ಕನೇ ಟೆಸ್ಟ್ ನಲ್ಲಿ ಭಾರತದ ಪ್ರಮುಖ ಬೌಲರ್ ಆಗಿ ತಂಡವನ್ನು ಮುನ್ನಡೆಸುತ್ತಾರೆ. ಅಲ್ಲದೇ ತಮ್ಮ ವೃತ್ತಿ ಜೀವನದ ಮೊದಲ ಐದು ವಿಕೆಟ್ ಗೊಂಚಲನ್ನು ಸಹ ಪಡೆಯುತ್ತಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಸಿರಾಜ್ ತಂದೆ ಇಹಲೋಕ ತ್ಯಜಿಸುತ್ತಾರೆ. ಆದರೇ ಉತ್ತಮ ಪ್ರದರ್ಶನ ನೀಡುವ ಮೂಲಕ ಸಿರಾಜ್ ತಂದೆಗೆ ಗೌರವ ಸಲ್ಲಿಸುತ್ತಾರೆ.

ಸದ್ಯ ಸಿರಾಜ್ ಬಳಿ ಬಿಎಂಡಬ್ಲು, ಆಡಿಯಂತಹ ದುಬಾರಿ ಕಾರುಗಳಿವೆ. ಜಾಹೀರಾತು ಕಂಪನಿಗಳು ಸಹ ಇವರೊಡನೆ ಒಡಂಬಡಿಕೆ ಮಾಡಿಕೊಂಡಿವೆ. ಶೀಘ್ರದಲ್ಲಿಯೇ ಹೈದರಾಬಾದ್ ನಲ್ಲಿ ಸಿರಾಜ್ ದೊಡ್ಡ ಮನೆ ಖರೀದಿಸುವ ಆಸೆ ಇಟ್ಟುಕೊಂಡಿದ್ದಾರೆ. ಸದ್ಯ ಮಹಮದ್ ಸಿರಾಜ್ ರವರ ಒಟ್ಟು ಆಸ್ತಿ 35 ಕೋಟಿ ರೂಪಾಯಿಗಿಂತ ಹೆಚ್ಚಂತೆ. ಏಳು ವರ್ಷಗಳ ಹಿಂದೆ 35 ರೂಪಾಯಿಗೆ ಆಟೋ ಓಡಿಸುತ್ತಿದ್ದ ಸಿರಾಜ್ ಇಂದು 35 ಕೋಟಿ ಆಸ್ತಿ ಸಂಪಾದಿಸಿರುವುದು ನಿಜಕ್ಕೂ ಸ್ಪೂರ್ತಿದಾಯಕ.

Comments are closed.