ಯಾರು ತೋರಿಸದ ನಟಿ ಸೌಂದರ್ಯ ರವರ ಮನೆಯನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ. ಹೇಗಿದೆ ಗೊತ್ತಾ ಹಳ್ಳಿ ಅರಮನೆ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಅದೆಷ್ಟೋ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ಪ್ರತಿಭಾನ್ವಿತ ನಟಿ ಎಂದರೆ ಅದು ಖಂಡಿತವಾಗಿಯೂ ಸೌಂದರ್ಯ. ಅವರು ಇಂದು ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರ ನೆನಪು ಪ್ರತಿಯೊಬ್ಬ ಸಿನಿಮಾ ಪ್ರೇಕ್ಷಕನ ಮನದಾಳದಲ್ಲಿ ಕೂಡ ಇದೆ.ಹೌದು ಸ್ನೇಹಿತರೆ ಸೌಂದರ್ಯ ರವರ ಹುಟ್ಟು ಹೆಸರು ಸೌಮ್ಯ ಎಂದು. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ತಮ್ಮ ಹೆಸರನ್ನು ಸೌಂದರ್ಯ ಎಂಬುದಾಗಿ ಬದಲಾಯಿಸಿಕೊಳ್ಳುತ್ತಾರೆ.

1992 ರಲ್ಲಿ ಬಿಡುಗಡೆಯಾದ ಗಂಧರ್ವ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ನಂತರ ತೆಲುಗು ಚಿತ್ರಗಳಿಗೆ ಪಾದರ್ಪಣೆ ಮಾಡಿದಂತಹ ನಟಿ ಸೌಂದರ್ಯ ರವರು ಒಂದೊಂದಾಗಿ ಚಿತ್ರಗಳಲ್ಲಿ ಯಶಸ್ಸನ್ನು ಕಾಣುತ್ತಾ ತಮಿಳು ಮಲಯಾಳಂ ಹಿಂದಿ ಚಿತ್ರರಂಗಗಳಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಎಲ್ಲಾ ಪ್ರಮುಖ ಸ್ಟಾರ್ ಗಳೊಂದಿಗೆ ನಟಿಸಿದ ಅನುಭವ ಸೌಂದರ್ಯದ ಅವರಿಗಿತ್ತು. 12ವರ್ಷದ ಸಿನಿಮಾ ಜರ್ನಿಯಲ್ಲಿ ಬರೋಬ್ಬರಿ 107 ಅಧಿಕ ಚಿತ್ರಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ನಟಿ ಸೌಂದರ್ಯ ರವರು ಮದುವೆಯಾದ ಒಂದೇ ವರ್ಷಕ್ಕೆ ಹೆಲಿಕಾಪ್ಟರ್ ಆಘಾತದಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋಗಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಇದಕ್ಕಿಂತ ಹೆಚ್ಚಾಗಿ ದುಃಖವಾಗಿ ಸಂಗತಿಯೆಂದರೆ ಅವರು ನಮ್ಮನ್ನೆಲ್ಲ ಬಿಟ್ಟು ಹೋಗುವಾಗ 7ತಿಂಗಳ ಗರ್ಭಿಣಿಯಾಗಿದ್ದರು. ಇನ್ನು ಚಿತ್ರೀಕರಣದ ಬಿಡುವು ಸಿಕ್ಕಿದಾಗಲೆಲ್ಲ ನಟಿ ಸೌಂದರ್ಯ ರವರ ತಮ್ಮ ಊರಾದ ಅಂತಹ ಮುಳಬಾಗಿಲಿಗೆ ಆಗಾಗ ಹೋಗಿ ಬರುತ್ತಿದ್ದರಂತೆ. ಇನ್ನು ಮುಳಬಾಗಿಲಿನಲ್ಲಿ ಒಂದು ಶಾಲೆಯನ್ನು ಕೂಡ ಕಟ್ಟಿಸಿದ್ದಾರೆ. ಯಾರ ಬಳಿಯೂ ಕೂಡ ಹಮ್ಮು-ಬಿಮ್ಮುಗಳನ್ನು ತೋರಿಸದ ಅದ್ಭುತ ವ್ಯಕ್ತಿತ್ವ ನಟಿಸಿದರೆ ಅವರದ್ದು. ಇನ್ನು ನಟಿ ಸೌಂದರ್ಯ ರವರ ಮನೆಯನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.

Comments are closed.