ಸೌಂದರ್ಯ ರವರ ಜೀವನಾಧಾರಿತ ಸಿನೆಮಾದಲ್ಲಿ ಖ್ಯಾತ ನಟಿ ನಟಿಸುತ್ತಾರಂತೆ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದ ನಟಿ ಸೌಂದರ್ಯ ರವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ತಾವು ಅಭಿನಯಿಸಿದ ಚಿತ್ರಗಳಲ್ಲಿ ಅದ್ಭುತ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಅಂದಿನ ಕಾಲದಲ್ಲಿ ಸಂಪಾದಿಸಿ, ಕನ್ನಡ, ಮಲಿಯಾಳಂ, ತೆಲುಗು ಚಿತ್ರರಂಗ ಸೇರಿದಂತೆ ತಮಿಳು ಚಿತ್ರರಂಗದಲ್ಲಿಯೂ ಕೂಡ ಉತ್ತಮ ಹೆಸರು ಗಳಿಸಿ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಇರುವಾಗ ದುರಾದೃಷ್ಟವಶಾತ್ ಇಹಲೋಕ ತ್ಯಜಿಸಿದ್ದರು. ಇವರ ಸ್ಥಾನವನ್ನು ಈಗಲೂ ಕೂಡ ಯಾರು ತುಂಬಲು ಸಾಧ್ಯವಾಗಿಲ್ಲ ಎಂಬುದು ಅಭಿಮಾನಿಗಳ ಮಾತು.

ಇನ್ನು ಸೌಂದರ್ಯ ರವರು ಇಹಲೋಕ ತ್ಯಜಿಸಿದ ಕೆಲವು ವರ್ಷಗಳ ನಂತರ ಇದರ ಕುರಿತು ಸಿನಿಮಾ ಬರುತ್ತದೆ, ಸೌಂದರ್ಯ ರವರ ಜೀವನಾಧಾರಿತ ಸಿನಿಮಾ ಬಿಡುಗಡೆಯಾದರೆ ಖಂಡಿತ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅದ್ಯಾಕೋ ತಿಳಿದಿಲ್ಲ ಸೌಂದರ್ಯ ರವರ ಜೀವನಾಧಾರಿತ ಸಿನಿಮಾ ಇದುವರೆಗೂ ಆರಂಭವಾಗಿಲ್ಲ. ಇನ್ನು ಸೌಂದರ್ಯ ರವರ ಜೀವನ ಆಧಾರಿತ ಸಿನಿಮಾದಲ್ಲಿ ಯಾವ ನಟಿ ನಟಿಸುತ್ತಾರೆ ಎಂಬುದರ ಚರ್ಚೆ ಮೊದಲಿನಿಂದಲೂ ನಡೆಯುತ್ತಿದೆ, ಇದೀಗ ದಕ್ಷಿಣ ಭಾರತದ ಖ್ಯಾತ ನಟಿಯರೊಬ್ಬರು ಸೌಂದರ್ಯ ರವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಹೌದು ಸ್ನೇಹಿತರೇ, ಇತ್ತೀಚಿಗೆ ಬಹಳಷ್ಟು ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ತಮ್ಮ ಆಡಂಬರವಿಲ್ಲದ ವ್ಯಕ್ತಿತ್ವದಿಂದ ಮತ್ತು ನಟನೆಯಿಂದ ಕಡಿಮೆ ಅವಧಿಯಲ್ಲಿಯೇ ಉತ್ತಮ ಹೆಸರುಗಳಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿಪಲ್ಲವಿ ರವರು ಸೌಂದರ್ಯ ರವರ ಜೀವನಾಧಾರಿತ ಸಿನಿಮಾದಲ್ಲಿ ಸೌಂದರ್ಯ ರವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅಭಿಮಾನಿಗಳು ಕೂಡ ಸೌಂದರ್ಯ ರವರ ಸ್ಥಾನಕ್ಕೆ ಸಾಯಿ ಪಲ್ಲವಿ ರವರು ಸೂಟ್ ಆಗುತ್ತಾರೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವೇ ಕೆಲವು ದಿನಗಳ ಹಿಂದೆ ರಶ್ಮಿಕ ಮಂದನ್ನ ರವರು ನಾನು ಸೌಂದರ್ಯ ರವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಹೊಂದಿದ್ದೇನೆ ಎಂದು ಹೇಳಿದ್ದರು. ಆದರೆ ಅಷ್ಟರಲ್ಲಾಗಲೇ ಸಾಯಿ ಪಲ್ಲವಿ ರವರು ನಟಿಸುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿದೆ.

Comments are closed.