ಸೃಗರ್, ಬಿಪಿ ಹೊಂದಿರುವವರು ಜೀವನ ಪೂರ್ತಿ ಮಾತ್ರೆಗಳ ಮೊರೆಹೋಗುವ ಬದಲು ಈ 3 ಎಲೆಗಳಲ್ಲಿ ಒಂದನ್ನು ನಾವು ಹೇಳಿದ ಹಾಗೆ ಸೇವಿಸಿ ಸಾಕು.

ನಮಸ್ಕಾರ ಸ್ನೇಹಿತರೇ ಇಂದು ಜನರನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಯೇ ಮಧುಮೇಹ ಮತ್ತು ರಕ್ತದೊತ್ತಡದ ಸಮಸ್ಯೆ. ಇದು ಕೇವಲ ವಯಸ್ಸಾದವರಿಗೆ ಮಾತ್ರವಲ್ಲ, ಚಿಕ್ಕ ಮಯಸ್ಸಿನಲ್ಲಿಯೇ ನಮ್ಮ ದೇಹ ಸೇರಿಕೊಳ್ಳುತ್ತವೆ ಈ ಖಾಯಿಲೆಗಳು. ಶುಗರ್ ಆಗಲಿ, ಬಿಪಿ ಯಾಗಲಿ ನಮ್ಮ ನಿಯಂತ್ರಣದಲ್ಲಿದ್ದರೆ ಅಪಾಯವಿಲ್ಲ. ಆದರೆ ನಿಯಂತ್ರಣ ತಪ್ಪಿದರೆ ಅಥವಾ ಮಾತ್ರೆ ತೆಗೆದುಕೊಳ್ಳುವವರು ಮಾತ್ರೆ ನಿಲ್ಲಿಸಿದರೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಈ ಎರಡೂ ಖಾಯಿಲೆಗಳು ಒಮ್ಮೆ ಮನುಷ್ಯನ ದೇಹವನ್ನು ಪ್ರವೇಶಿಸಿದರೆ ಮತ್ತೆ ಹೊರಹೋಗುವ ಮಾತೇ ಇಲ್ಲ. ಜೀವನ ಪರ್ಯಂತ ಜೊತೆಯಲ್ಲಿಯೇ ಇರುತ್ತವೆ. ಹಾಗಾಗಿ ಇವುಗಳ ನಿರಂತ್ರಣ ಅತೀ ಮುಖ್ಯ. ಹಾಗಾದರೆ ಇವುಗಳ ನಿಯಂತ್ರಣವಾದರೂ ಹೇಗೆ?

ಮಧುಮೇಹ ಅಥವಾ ಬಿಪಿ ಖಾಯಿಲೆಗಳು ಬಂದಾಗ ಆಯುರ್ವೇದಿಕ ಜೌಷಧೋಪಚಾರಗಳು ಸಾಮಾನ್ಯ. ಜೊತೆಗೆ ಮನೆಮದ್ದುಗಳನ್ನು ಮಾಡಿಕೊಳ್ಳುವುದರ ಮೂಲಕ ಸಾಕಷ್ಟು ರೋಗಗಳ ಉಪಶಮನ ಮಾಡಬಹುದು. ಹಾಗೆಯೇ ಮನೆ ಅಂಗಳದಲ್ಲಿಯೇ ಸಿಗುವ ಎಲೆ, ಬೇರುಗಳೂ ಕೂಡ ಪ್ರಯೋಜನಕಾರಿ. ನಾವಿಲ್ಲಿ ಮಧುಮೇಹ ಹಾಗೂ ಬಿಪಿ ಖಾಯಿಲೆಯನ್ನು ನಿಯಂತ್ರಣ ಮಾಡಬಲ್ಲಂಥ ಮೂರು ಎಲೆಗಳ ಬಗ್ಗೆ ಮಾಹಿತಿ ನೀಡುತ್ತೇವೆ.

ತುಳಸಿ ಎಲೆಗಳು: ತುಳಸಿಯನ್ನು ದೇವರು ಎಂದು ಪೂಜಿಸಲಾಗುತ್ತದೆ. ಹಾಗೆಯೇ ವೈದ್ಯಕೀಯ ಜಗತ್ತಿನಲ್ಲಿಯೂ ಕೂಡ ಇದಕ್ಕೆ ಮಹತ್ವದ ಸ್ಥಾನವಿದೆ. ದಿನವು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇನ್ನು ತುಳಸಿ ಎಲೆಗಳನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿಕೊಂಡು ಕೂಡ ಸೇವಿಸಬಹುದು.

ಕರಿಬೇವಿನ ಎಲೆಗಳು: ಕರಿಬೇವನ್ನು ಸಾಮಾನ್ಯವಾಗಿ ಅಡುಗೆಗಳಲ್ಲಿ ಬಳಸಿಯೇ ಬಳಸುತ್ತಾರೆ. ಒಗ್ಗರಣೆ ಸೊಪ್ಪು ಎಂದೂ ಕರೆಯಲ್ಪಡುವ ಈ ಎಲೆಗಳಲ್ಲಿ ಅಗಾಧವಾದ ಔಷಧಿಯ ಗುಣಗಳಿವೆ. ಪ್ರತಿದಿನ ಕರಿಬೇವು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ದಾದನೆಯಾಗಿ ಅದು ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಕಹಿ ಬೇವಿನ ಎಲೆಗಳು: ಯುಗಾದಿಗೆ ಕಹಿ ಬೇವು ಬೆಲ್ಲ ವನ್ನು ತಿನ್ನುವುದು ವಾಡಿಕೆ. ಇದಕ್ಕೆ ಕಾರಣವೂ ವೈಜ್ಞಾನಿಕವಾಗಿಯೇ ಇದೆ. ಯಾಕೆಂದರೆ ಬೇವು ಕಹಿಯಾಗಿದ್ದು ದೇಹದಲ್ಲಿನ ಜಂತುಗಳನ್ನು ಸಾಯಿಸಲು ಸಹಾಯ ಮಾಡುತ್ತದೆ. ಬೇವಿನ ಎಲೆಗಳಲ್ಲಿರುವ ಆಂಟಿಹಿಸ್ಟಮೈನ್ ಅಂಶ ರಕ್ತನಾಳಗಳನ್ನು ಕುಗ್ಗಿಸುತ್ತವೆ. ಇದು ಮಧುಮೇಹ ನಿಯಂತ್ರಣಕ್ಕೆ ಸಹಾಯಕ. ಇನ್ನು ಈ ಬೇವಿನ ಎಲೆಗಳನ್ನು ಹಾಗೆಯೇ ಸೇವಿಸಬಹುದು. ಆದರೆ ಇದು ಬಹಳ ಕಹಿಯಾಗಿರುವುದರಿಂದ ಬೇವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ನೀರಿನೊಂದಿಗೆ ಸೇವಿಸಬಹುದು. ಬೇವಿನ ಎಲೆಗಳಿಂದ ತಯಾರಾದ ಮಾತ್ರೆಗಳೂ ಮಾರುಕಟ್ಟೆಯಲ್ಲಿ ಲಬ್ಯವಿದ್ದು, ವೈದ್ಯರ ಸಲಹೆ ಮೇರೆಗೆ ಸೇವಿಸಬಹುದು.

Comments are closed.