ಮಜಾ ಟಾಕೀಸ್ ನಿಲ್ಲಿಸಿ ಹೊಸ ಉದ್ಯಮ ಆರಂಭಿಸಿದ ಸೃಜನ್, ಇದೇ ಉದ್ಯಮಕ್ಕಾಗಿ ಮಜಾ ಟಾಕೀಸ್ ನಿಲ್ಲಿಸಿದರು, ಯಾವುದು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕಾರ್ಯಕ್ರಮಗಳನ್ನು ನಿರೂಪಿಸಲು ಹಲವಾರು ನಿರೂಪಕರು ಇರಬಹುದು ಆದರೆ ಈ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಎತ್ತಿದ ಕೈ ಎಂದು ಹೇಳುವುದು ಸೃಜನ್ ಲೋಕೇಶ್ ರವರನ್ನು ಮಾತ್ರ ಯಾಕೆಂದರೆ ಅವರ ನಿರೂಪಣಾ ಶೈಲಿ ಪ್ರೇಕ್ಷಕರ ಮನದಾಳ ಹೊಕ್ಕು ಅವರ ಮನವನ್ನು ಗೆಲ್ಲುತ್ತದೆ. ಸ್ಟಾರ್ ನಟನ ಮಗನಾಗಿದ್ದರೂ ಸಹ ಕನ್ನಡ ಚಿತ್ರರಂಗಕ್ಕೆ ಅವರ ಹಾದಿ ಮಾತ್ರ ಬಹಳಷ್ಟು ಕಠಿಣವಾಗಿತ್ತು. ಚಿತ್ರಗಳಲ್ಲಿ ಅವರಿಗೆ ಅವಕಾಶ ಸಿಗದಿದ್ದರೂ ಸಹ ಕಾರ್ಯಕ್ರಮಗಳ ನಿರೂಪಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು ಸೃಜನ್ ಲೋಕೇಶ್.

ಹೀಗೆ ಒಂದರ ಮೇಲೊಂದರಂತೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾ ಸೃಜನ್ ಲೋಕೇಶ್ ರವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರೂಪಕರಾಗಿ ಹೆಸರು ಮಾಡಿಕೊಳ್ಳುತ್ತಾರೆ ನಂತರದ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕೀಸ್ ಎಂಬ ತಮ್ಮ ಸ್ವಂತ ಬ್ಯಾನರ್ ನಿಂದ ಕಾಮಿಡಿ ಶೋ ವನ್ನು ಪ್ರಾರಂಭ ಮಾಡುತ್ತಾರೆ. ಮಜಾ ಟಾಕೀಸ್ ಕಾರ್ಯಕ್ರಮದ ನಂತರ ಸೃಜನ್ ಲೋಕೇಶ್ ಅವರು ಮತ್ತೆ ತಮ್ಮ ವೃತ್ತಿಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ರಾಜ್ಯಾದ್ಯಂತ ಕಿರುತೆರೆ ಪ್ರೇಕ್ಷಕರ ಮನಗೆದ್ದಿತು. ಈಗ ಇತ್ತೀಚಿಗಷ್ಟೇ ಮಜಾ ಟಾಕೀಸ್ ತನ್ನ ಗ್ರಾಂಡ್ ಫಿನಾಲೆ ಎಪಿಸೋಡ್ ಅನ್ನು ಮುಗಿಸಿದೆ. ಇನ್ನು ಮುಂದೆ ಸೃಜನ್ ಲೋಕೇಶ್ ಅವರು ಏನು ಮಾಡುತ್ತಾರಪ್ಪ ಎಂದು ಯೋಚಿಸುತ್ತಿದ್ದ ವರಿಗೆ ಸೃಜನ್ ಲೋಕೇಶ್ ಅವರು ಸರ್ಪ್ರೈಸ್ ನೀಡಿದ್ದಾರೆ.

ಹೌದು ಸ್ನೇಹಿತರೇ ಮಜಾ ಟಾಕೀಸ್ ಮುಗಿದನಂತರ ಈಗ ಸೃಜನ್ ಲೋಕೇಶ್ ಅವರು ಹೊಸ ಕಾರ್ಯಕ್ರಮದ ಮೂಲಕ ವಾಪಸಾಗಿದ್ದಾರೆ. ಹೌದು ಸ್ನೇಹಿತರೆ ಯೂಟ್ಯೂಬ್ನಲ್ಲಿ ಸೃಜನ್ ಅಫಿಶಿಯಲ್ ಎಂಬ ಯುಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಿರುವ ಸೃಜನ್ ಲೋಕೇಶ್ ಮೊದಲಿಗೆ ಗಿರಿಜಾ ಲೋಕೇಶ್ ರವರ ವೃತ್ತಿಜೀವನದ ಕುರಿತಂತೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಟ್ರಾವೆಲ್ ಕುಕಿಂಗ್ ಹೀಗೆ ಮುಂತಾದ ವೈವಿಧ್ಯಮಯ ವಿಚಾರಗಳ ಕುರಿತಂತೆ ಸೃಜನ್ ಲೋಕೇಶ್ ಅವರು ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಪೋಸ್ಟ್ ಮಾಡುವ ಕುರಿತಂತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *