ನೀನು ಏನಾಗ್ಬೇಕು ಎಂಬುವ ಟೀಚರ್ ಪ್ರಶ್ನೆಗೆ ಬಾಲಕ ನೀಡಿದ ಉತ್ತರ ಕಂಡು ಟೀಚರ್ ಹಾಗೂ ಪೋಷಕರು ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಮೊದಲೆಲ್ಲಾ ಕೂಡುಕುಟುಂಬ ಇತ್ತು ಕುಟುಂಬ ಎಂಬ ಪದಕ್ಕೆ ಒಂದು ಒಳ್ಳೆಯ ಮೌಲ್ಯವೆಂದು ಹಾಗೂ ಗೌರವ ಇತ್ತು. ಒಂದೇ ಮನೆಯಲ್ಲಿ ಅಥವಾ ಮನೆಗಳ ಸಮೂಹದಲ್ಲಿ ಒಂದು ಕುಟುಂಬದ ಎಲ್ಲಾ ಸದಸ್ಯರು ಜೊತೆಯಾಗಿ ಇರುತ್ತಿದ್ದರು ಹಾಗೂ ಜೊತೆಯಾಗಿ ಜೀವಿಸುತ್ತಿದ್ದರು. ಆಗೆಲ್ಲಾ ಕೂಡುಕುಟುಂಬ ಎಂದರೆ ಸ್ವರ್ಗ ಸುಖ ಎಂಬ ಮಾತಿತ್ತು ಆದರೆ ಇಂದಿನ ಜಗತ್ತಿನಲ್ಲಿ ಕುಟುಂಬ ಕಾಣುವುದಿರಲಿ ಪದಗಳಲ್ಲಿ ಕೂಡ ಸಿಗುತ್ತಿಲ್ಲ. ನಾವ್ ಅನ್ನುತ್ತೇವೆ ಭಾರತ ಈಗ ವೇಗವಾಗಿ ಬೆಳೆಯುತ್ತಿದೆ ಆಧುನಿಕರಣಕ್ಕೆ ತನ್ನನ್ನು ತೆರೆದುಕೊಳ್ಳುತ್ತಿದೆ ಎಂದು ಹೇಳುತ್ತೇವೆ.

ಆದರೆ ಆಧುನೀಕರಣದ ಹಿಂದೆ ಹೋಗುತ್ತಾ ಹೋಗುತ್ತಾ ಕುಟುಂಬ ಎಂಬ ಮೌಲ್ಯವನ್ನು ಹಿಂದೆ ಬಿಟ್ಟಿದ್ದಾರೆ ನಮ್ಮ ಜನರು. ಒಂದು ಮಗು ಸಂಸ್ಕಾರಿ ಆಗಿ ಬೆಳೆಯಲು ಅದರ ಕುಟುಂಬ ವಾತಾವರಣ ಚೆನ್ನಾಗಿರಬೇಕು ಅಂತೆ ಆದರೆ ಈಗಿನ ಜಗತ್ತಿನಲ್ಲಿ ಅಪ್ಪ ಕೆಲಸಕ್ಕೆ ಹೋದರೆ ಅಮ್ಮ ಇನ್ನೊಂದು ಕೆಲಸಕ್ಕೆ ಹೋದರೆ ಮಗು ಮಾತ್ರ ಒಬ್ಬಂಟಿ ಆಗಿಬಿಡುತ್ತದೆ ಇನ್ನು ಸಂಸ್ಕಾರವನ್ನು ಕಲಿಯೋದು ಎಲ್ಲಿಂದ ಬಂತು. ಈಗ ಬಂದಿರೋ ಮೊಬೈಲ್ ಲ್ಯಾಪ್ಟಾಪ್ ಹೀಗೆ ಆಧುನಿಕರಣದ ಮಿಷಿನ್ ಗಳು ಮನುಷ್ಯನ ಸಂಬಂಧಗಳನ್ನು ಕೂಡ ಯಾಂತ್ರಿಕರಣ ಮಾಡಿಬಿಟ್ಟಿದೆ.

ಈಗ ಸಂಬಂಧಗಳು ಹೇಳು ಮಾತಿನಲ್ಲಿ ಬರೆಯೋ ಪುಸ್ತಕದಲ್ಲಿ ಅಷ್ಟೇ ಇರೋದು ನಿಜಜೀವನದಲ್ಲಿ ಸಿಗೋದು ತುಂಬಾ ವಿರಳಾತಿ ವಿರಳ. ಮೊದಲು ಹಳ್ಳಿಗಳಲ್ಲಾದರೂ ಕೂಡು ಕುಟುಂಬದ ಪರಿಕಲ್ಪನೆ ಆದರೆ ಈಗ ಅದು ಕೂಡ ಕಾಲಕ್ರಮೇಣ ಮರೆಯಾಗುತ್ತ ಬಂದಿದೆ. ತಂದೆ ತಾಯಿಯನ್ನು ಬಿಟ್ಟು ಮಕ್ಕಳು ಪಟ್ಟಣದತ್ತ ಕೆಲಸಕ್ಕೆ ಹೋಗಿ ಅಲ್ಲಿ ಸೆಟಲ್ ಆಗಿಬಿಟ್ಟಿದ್ದಾರೆ. ಈಗ ಕುಟುಂಬವೆಂದರೆ ಬೇಸಿಗೆ ರಜೆಗೆ ತಂದೆ-ತಾಯಿಯರನ್ನು ಕಾಣಲು ಊರಿಗೆ ಬರೋದು. ಇದೇ ತರ ಆಗುತ್ತ ಹೋದರೆ ಇನ್ನು ಈ ಭೂಮಿಯಲ್ಲಿ ಕೂಡುಕುಟುಂಬ ಎಂಬ ಪರಿಕಲ್ಪನೆ ಮಾಯವಾಗಿರುತ್ತದೆ. ಇಂದಿನ ವಿಷಯದಲ್ಲಿ ಕೂಡ ಈ ವಿಷಯದ ಕುರಿತಂತೆ ನಾವು ನಿಮಗೆ ಒಂದು ಕಥೆಯ ಮೂಲಕ ಹೇಳಲಿದ್ದೇವೆ.

ಹಿಂದೆ ನಾವು ಚಿಕ್ಕವರು ಇರಬೇಕಾದರೆ ಶಾಲೆಯಲ್ಲಿ ಟೀಚರ್ ಮುಂದೆ ನೀವು ಏನಾಗಬೇಕು ಏನು ಸಾಧಿಸಬೇಕು ಎಂಬುದನ್ನು ಬರೆಯಲು ಹೇಳುತ್ತಾರೆ ನೆನಪಿದೆ ತಾನೇ. ಅವಾಗ ನಾವು ನಮಗೆ ಸಾಧ್ಯವಾಗದ್ದನ್ನು ಕೂಡ ಊಹಿಸಿ ಬರುತ್ತಿದ್ದರು ಆದರೆ ಇಂದಿಗೆ ಆಗಿರೋದು ನಾವು ಬೇರೆ. ಅದನ್ನು ಬಿಡಿ ಈ ಕಥೆಯಲ್ಲಿ ಕೂಡ ಹಾಗೆಯೇ ಟೀಚರ್ ತಮ್ಮ ತರಗತಿಯ ಮಕ್ಕಳಿಗೆ ನೀವೇನಾಗಬೇಕು ಎಂಬುದನ್ನು ಬರೆಯೋದು ನನಗೆ ಕೊಡಿ ಎಂದು ಹೇಳಿದರು.

ತರಗತಿಯ ಮಕ್ಕಳಿಂದ ಅವರು ಮುಂದೆ ಏನ್ ಆಗಬೇಕೆಂಬುದನ್ನು ಬರೆಸಿಕೊಂಡು ಟೀಚರ ಉತ್ತರ ಪತ್ರಿಕೆಯನ್ನು ಮನೆಗೆ ಸರಿಮಾಡಲು ತಂದರು. ಟೀಚರ್ ಉತ್ತರ ಪತ್ರಿಕೆಯನ್ನು ಸರಿ ಮಾಡುತ್ತಿರಬೇಕಾದರೆ ಒಬ್ಬ ಹುಡುಗನ ಉತ್ತರಪತ್ರಿಕೆ ನೋಡಿ ದುಃಖದಿಂದ ಅಳಲಾರಂಭಿಸಿದರು. ಅವರು ಆಳುತ್ತಿದ್ದನು ನೋಡಿ ಆಕೆಯ ಗಂಡ ಮೊಬೈಲ್ನಲ್ಲಿ ಬ್ಯುಸಿ ಇದ್ದವರು ಏನಾಯಿತು ಎಂದು ಕೇಳಿದರು. ಟೀಚರ್ ಉತ್ತರ ಪತ್ರಿಕೆಯನ್ನು ಅವರಿಗೂ ಸಹ ತೋರಿಸಿದರು ಈಗ ಆಕೆಯ ಗಂಡ ಕೂಡ ಅದನ್ನು ನೋಡಿ ದುಃಖ ಭರಿತ ರಾದರು. ಅವರಿಬ್ಬರೂ ಉತ್ತರ ಪತ್ರಿಕೆಯನ್ನು ನೋಡಿ ದುಖಿತ ರಾಗಲು ಕಾರಣ ಏನು ಗೊತ್ತಾ ಸ್ನೇಹಿತರೆ ಹೇಳುತ್ತೇವೆ ಬನ್ನಿ.

ಒಬ್ಬ ಹುಡುಗ ದುಃಖದಿಂದ ತಾನು ಮುಂದೆ ಏನಾಗಬೇಕು ಎಂಬುದರ ಬಗ್ಗೆ ಬರೆದಿದ್ದ. ಅವನೇನು ಬರೆದಿದ್ದ ಗೊತ್ತಾ ಸ್ನೇಹಿತರೆ ನನ್ನ ಮನೆಯಲ್ಲಿ ನನ್ನ ತಂದೆ ತಾಯಿಗಳು ನನಗಿಂತ ಹೆಚ್ಚಾಗಿ ಮೊಬೈಲ್ಗೆ ಬಂದಿಯಾಗಿ ಬಿಟ್ಟಿದ್ದಾರೆ. ನನಗಿಂತ ಹೆಚ್ಚಾಗಿ ಮೊಬೈಲ ಜೊತೆಗೆ ಅವರು ಹೆಚ್ಚಾಗಿ ಮಾತನಾಡುತ್ತಾರೆ. ನನ್ನ ಕಷ್ಟ-ಸುಖದ ಜವಾಬ್ದಾರಿಗಿಂತ ಅವರಿಗೆ ಮೊಬೈಲ್ನ ಪ್ರಪಂಚವೇ ದೊಡ್ಡದಾಗಿ ಬಿಟ್ಟಿದೆ. ಇನ್ನು ನಾನು ಏನಾಗಬೇಕೆಂದು ಯಾರಿಗೆ ಕೇಳಲಿ ಯಾರ ಸಹಾಯ ಕೇಳಲಿ ಎಂದು ಆ ಹುಡುಗ ದುಃಖ ಭರಿತನಾಗಿ ಬರೆದಿದ್ದ.

ಆ ಹುಡುಗ ಇನ್ಯಾರು ಅಲ್ಲ ಸ್ನೇಹಿತರೆ ಟೀಚರ್ ಹಾಗೂ ಪತಿಯ ಸ್ವಂತ ಮಗ. ನೋಡಿದ್ದಲ್ಲ ಸ್ನೇಹಿತರೆ ವರ್ಚುವಲ್ ದುನಿಯಾದಲ್ಲಿ ನಾವು ಕಳೆದು ಹೋಗಿ ನಮ್ಮ ಸುತ್ತಮುತ್ತಲಿರುವ ಸಂಬಂಧವನ್ನು ಮರೆತು ಬಿಟ್ಟಿದ್ದೇವೆ. ಇನ್ನಾದರೂ ನಮ್ಮವರೊಂದಿಗೆ ಹೆಚ್ಚು ಕಾಲವನ್ನು ಕಳೆಯೋಣ ಹಾಗೂ ಅವರ ಕಷ್ಟ ಹಾಗೂ ಸುಖಗಳಲ್ಲಿ ಭಾಗಿಯಾಗಿ ಅವರ ಸಂತೋಷಕ್ಕೆ ಕಾರಣವಾಗೋಣ. ನೀತಿ ಕಥೆಯನ್ನು ಓದುತ್ತಿರುವ ಅದೆಷ್ಟು ಮಂದಿಗೆ ಜೀವನದಲ್ಲಿ ಒಂದು ಬದಲಾವಣೆ ನೀಡಬಹುದು ಎಂಬ ಅನಿಸಿಕೆ ನಮ್ಮದು. ಈ ಕಥೆ ಕೇಳಿ ನಿಮಗೆ ಏನು ಅನಿಸಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ.

Comments are closed.