ಉಡುಗೊರೆಯಲ್ಲೂ ಒಂದಾದ ಪ್ರೇಮ ಪಕ್ಷಿಗಳು, ಒಟ್ಟಾಗಿ ಸುದೀಪ್ ರವರಿಗೆ ಹುಟ್ಟು ಹಬ್ಬಕ್ಕೆ ಅರವಿಂದ್ ದಿವ್ಯ ನೀಡಿದ ಉಡುಗೊರೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಗೆ ಅರವಿಂದ್ ಕೆಪಿ ಹಾಗೂ ದಿವ್ಯ ಇಬ್ಬರೂ ಕೂಡ ಅಪರಿಚಿತರಾಗಿ ಆಗಮಿಸಿದ್ದರು. ಆದರೆ ಈಗ ಅವರು ಎಷ್ಟೊಂದು ಕ್ಲೋಸ್ ಆಗಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಸ್ನೇಹಕ್ಕೂ ಮೀರಿದ ಸಂಬಂಧವನ್ನು ಅರವಿಂದ್ ಹಾಗೂ ದಿವ್ಯ ಅವರು ಹೊಂದಿದ್ದಾರೆ ಎಂಬುದು ಈಗಾಗಲೇ ನಿಮಗೆಲ್ಲ ಗೊತ್ತಿರುವ ಸಂಗತಿ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 8 ಇವರಿಬ್ಬರ ಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ನೆಟ್ಟಿತು ಎಂದರೆ ತಪ್ಪಾಗಲಾರದು. ಅರವಿಂದ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಎರಡನೇ ಸ್ಥಾನವನ್ನು ಹಾಗೂ ದಿವ್ಯ ರವರು ಮೂರನೇ ಸ್ಥಾನವನ್ನು ಪಡೆದಿದ್ದರು.

ಟ್ರೋಫಿಯನ್ನು ಗೆಲ್ಲದಿದ್ದರೂ ಕೂಡ ಲಕ್ಷಾಂತರ ಮಂದಿ ಕನ್ನಡಿಗರ ಮನಗೆಲ್ಲುವಲ್ಲಿ ಜೋಡಿ ಯಶಸ್ವಿಯಾಗಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಇವರಿಬ್ಬರ ಮದುವೆಗೆ ಕುರಿತಂತೆ ಸಾಕಷ್ಟು ಸುದ್ದಿಯಾಗಿತ್ತು. ಇನ್ನು ನಿನ್ನೆಯಷ್ಟೇ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ರವರು ತಮ್ಮ 50ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ವಯಸ್ಸು 50 ಆದರೂ ಕೂಡ 25ರ ಹರೆಯದ ಯುವಕನಂತೆ ಕಿಚ್ಚ ಸುದೀಪ್ ರವರು ಕಾಣುತ್ತಿದ್ದಾರೆ. ಇನ್ನು ಕಿಚ್ಚ ಸುದೀಪ್ ರವರ ಜನುಮದಿನಕ್ಕೆ ಅರವಿಂದ ಕೆಪಿ ಹಾಗೂ ದಿವ್ಯ ರವರು ಇಬ್ಬರು ಕೂಡ ಜೊತೆಯಾಗಿ ಉಡುಗೊರೆಯನ್ನು ನೀಡಿದ್ದಾರೆ.

ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜನುಮದಿನಕ್ಕೆ ಇವರಿಬ್ಬರು ಜೊತೆಯಾಗಿ ಗಿಫ್ಟ್ ನೀಡಿದ್ದಾರೆ ಅದೇನು ಗೊತ್ತಾ ಸ್ನೇಹಿತರೆ ನಾವು ನಿಮಗೆ ವಿವರವಾಗಿ ಹೇಳುತ್ತೇನೆ. ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜನ್ಮದಿನಾಚರಣೆಗೆ ಅರವಿಂದ ದಿವ್ಯ ಇಬ್ಬರೂ ಕೂಡ ಒಂದು ಸುಂದರವಾದ ನಾಯಿಮರಿಯನ್ನು ಹುಡುಗರು ನೀಡಿದ್ದಾರೆ ಹಾಗೂ ಅವರ ಜನ್ಮದಿನಾಚರಣೆ ಸಂಭ್ರಮದಲ್ಲಿ ಕೂಡ ಭಾಗಿಯಾಗಿದ್ದಾರೆ. ಇದರ ಜೊತೆಗೆ ಅರವಿಂದ್ ರವರು ಕಿಚ್ಚ ಸುದೀಪ್ ರವರಿಗೆ ಪತ್ರದ ಮೂಲಕ ನನ್ನ ಜೀವನ ಎತ್ತ ಸಾಗುತ್ತಿದೆ ನನಗೆ ಗೊತ್ತಿರಲಿಲ್ಲ ನೀವು ಬಂದಮೇಲೆ ಬಿಗ್ ಬಾಸ್ ನಲ್ಲಿ ಅವಕಾಶ ಕೊಟ್ಟ ಮೇಲೆ ನನ್ನ ಜೀವನ ಮರಳಿ ಟ್ರ್ಯಾಕ್ ಗೆ ಬಂದಿದೆ ಎಂದು ಭಾವನಾತ್ಮಕವಾಗಿ ಶುಭಾಶಯಗಳನ್ನು ಕೋರಿದ್ದಾರೆ.

Comments are closed.