ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಅವರ ತಂಗಿ ಕೂಡ ಕನ್ನಡದಲ್ಲಿ ಧಾರವಾಹಿ ನಟಿಸಿದ್ದಾರೆ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂದಿನ ಕಾಲದಲ್ಲಿ ಪಂಚ ಭಾಷೆಗಳಲ್ಲಿ ನಾಯಕ ನಟಿಯಾಗಿ ಜನಪ್ರಿಯತೆ ಪಡೆದಂತಹ ನಟಿಯರಲ್ಲಿ ನಟಿಸುವ ಒಬ್ಬರಾಗಿ ಸುಹಾಸಿನಿ ಯವರು ಕೂಡ ಕಾಣಿಸಿಕೊಳ್ಳುತ್ತಾರೆ. ಅಂದಿನ ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಾಯಕ ನಟಿಯಾಗಿ ಸುಹಾಸಿನಿ ಯವರು ಬಹುತೇಕ ಎಲ್ಲ ಸ್ಟಾರ್ ನಟರೊಂದಿಗೆ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸುಹಾಸಿನಿ ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ದಕ್ಷಿಣ ಭಾರತದ ಅದರಲ್ಲೂ ಪ್ರಮುಖವಾಗಿ ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕರಾಗಿದ್ದಂತಹ ಮಣಿರತ್ನಂ ಅವರನ್ನು ಮದುವೆಯಾಗಿದ್ದಾರೆ.

ಮೂಲತಹ ತಮಿಳಿನವರಾದರೂ ಕೂಡ ಸುಹಾಸಿನಿ ಅವರು ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರ ಪ್ರೀತಿಗೆ ಭಾಜನರಾಗಿದ್ದಾರೆ. ಸುಹಾಸಿನಿ ಅವರ ನಟನೆ ಹಾಗೂ ಸೌಂದರ್ಯವನ್ನು ನೋಡುವುದೇ ಒಂದು ಕಾಲದಲ್ಲಿ ಎಲ್ಲರ ಮನಸ್ಸಿಗೆ ಹಿತವನ್ನು ನೀಡುತ್ತಿತ್ತು. ಇಂದಿಗೂ ಕೂಡ ಸುಹಾಸಿನಿ ಯವರು ಪೋಷಕ ಪಾತ್ರದಲ್ಲಿ ಬಹುಭಾಷೆಯಲ್ಲಿ ನಟನೆ ಮಾಡುತ್ತಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಅವರ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಕೂಡ ಕೆಲವು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದರು.

suhasini 2 | ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಅವರ ತಂಗಿ ಕೂಡ ಕನ್ನಡದಲ್ಲಿ ಧಾರವಾಹಿ ನಟಿಸಿದ್ದಾರೆ ಯಾರು ಗೊತ್ತೇ??
ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಅವರ ತಂಗಿ ಕೂಡ ಕನ್ನಡದಲ್ಲಿ ಧಾರವಾಹಿ ನಟಿಸಿದ್ದಾರೆ ಯಾರು ಗೊತ್ತೇ?? 2

ಕನ್ನಡ ಚಿತ್ರರಂಗದ ಕುರಿತಂತೆ ಹೇಳುವುದಾದರೆ ಸುಹಾಸಿನಿ ಅವರು ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಜೋಡಿ ಕನ್ನಡ ಚಿತ್ರರಂಗದ ಸಿನಿರಸಿಕರ ಮೆಚ್ಚುಗೆಗೆ ವ್ಯಾಪಕವಾಗಿ ಕಾರಣವಾಗಿತ್ತು. ಆದರೆ ಇಂದಿನ ಲೇಖನಿಯಲ್ಲಿ ನಿಮಗೆ ಗೊತ್ತಿರದಂತಹ ಒಂದು ವಿಚಾರದ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಅದೇನೆಂದರೆ ಸುಹಾಸಿನಿ ಅವರ ತಂಗಿ ಕೂಡ ಕನ್ನಡದ ಖ್ಯಾತ ದಾರವಾಹಿ ನಟಿ. ಯಾರಪ್ಪ ಅದು ಎಂದು ನೀವು ಗೊಂದಲದಲ್ಲಿ ಇರಬಹುದು. ಗೋಲ್ಮಾಲ್ ಗೌರಮ್ಮ ಎನ್ನುವ ದಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅನು ಹಾಸನ್ ರವರು ಸುಹಾಸಿನಿ ಯವರ ಚಿಕ್ಕಮ್ಮನ ಮಗಳು. ಕನ್ನಡ ಸೇರಿದಂತೆ ಹಲವಾರು ತಮಿಳು ಸಿನಿಮಾ ಹಾಗೂ ಧಾರವಾಹಿಗಳನ್ನು ಕೂಡ ಇವರು ಕಾಣಿಸಿಕೊಂಡಿದ್ದಾರೆ.

Comments are closed.