ಸುಮಲತಾ ರವರು ನಟಿ ಅದು ಎಲ್ಲರಿಗೂ ಗೊತ್ತು, ಆದರೆ ಅವರ ತಂದೆ ಇಡೀ ಭಾರತ ಚಿತ್ರರಂಗವನ್ನು ಆಳಿದ ಏಕೈಕ ಪ್ರತಿಭೆ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಸ್ಟಾರ್ ನಟಿಯರು ಈಗಲೂ ಕೂಡ ಜನ ಮಾನಸದಲ್ಲಿ ಹಾಗೆಯೇ ಉಳಿದಿದ್ದಾರೆ. ಅವರ ನಟನೆಯನ್ನು ಮೆಚ್ಚಿಕೊಂಡ ಅಭಿಮಾನಿಗಳು ಈಗಲೂ ಅವರುಗಳ ನಟನೆಯ ಹಾಡು, ನೃತ್ಯಕ್ಕೆ ಹೆಜ್ಜೆ ಹಾಕುತ್ತಾರೆ. ಹೀಗೆ ತಮ್ಮ ನಟನೆಯ ಮೂಲಕವೇ ಜನರನ್ನು ಹಿಡಿದಿಟ್ಟುಕೊಂಡಿದ್ದ ನಟಿ ಸುಮಲತಾ. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ಒಂದಿಲ್ಲೊಂದು ಹಿಟ್ ಸಿನಿಮಾಗಳನ್ನು ಕೊಡುತ್ತಾ ಬಂದ ನಟಿ ಸುಮಲತಾ ರೆಬಲ್ ಸ್ಟಾರ್ ಅವರ ಜೊತೆಯೇ ಹೆಚ್ಚಾಗಿ ಕಾಣಿಸಿಕೊಂಡರು.

ಸಿನಿಮಾದಲ್ಲಿ ಒಟ್ಟಾದ ಈ ಜೋಡಿ ನಿಜಜೀವನದಲ್ಲಿಯೂ ಒಂದಾಗಿದ್ದು ಕನ್ನಡಾಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ತಂದಿತ್ತು. ನಟಿ ಸುಮಲತಾ ಹುಟ್ಟಿದ್ದು 1963ರಲ್ಲಿ ಚೆನೈನಲ್ಲಿ. ಮದನ ಮೋಹನ್ ಹಾಗೂ ರೂಪಾ ಅವರ ನಾಲ್ಕನೇ ಮಗಳು ಸುಮಲತಾ. ಇನ್ನು ಸುಮಲತಾ ನಟನೆ ಆರಂಭಿಸಿದಾಗಿನಿಂದ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಕನ್ನಡ, ತಮಿಳು, ತೆಲಗು, ಮಲಯಾಳಂ ಹೀಗೆ ಬಹುಭಾಷಾ ನಟಿಯಾಗಿ 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನು ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿದರೂ ಕುಡ ಅವರ ಮಾರ್ಗದರ್ಶನದಲ್ಲಿ ಸಂಸದೆಯಾಗಿ ಮಂಡ್ಯದಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಹಾಗೆಯೇ ಅವರ ಮಗ ಅಭಿಷೇಕ್ ಕೂಡ ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರೆದಿದ್ದಾರೆ. ಇನ್ನು ಸುಮಲತಾ ಅವರ ತಂದೆಯ ವಿಚಾರಕ್ಕೆ ಬರುವುದಾದರೆ, ಸುಮಲತಾ ಅವರ ತಂದೆ ಮದನ ಮೋಹನ್ ಆಗಿನ ಕಾಲದ ಏಕೈಕ ವಿಎಫ್ ಎಕ್ಸ್ ಮೇಕರ್, ದೂರದ ಯು ಕೆ ಯಿಂದ ತಾಂತ್ರಿಕವಾಗಿ ಕಲಿತು ಬಂದು ಇಲ್ಲಿನ ಸಿನಿಮಾಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಹಾಗಾಗಿ ಅವರೊಬ್ಬರೇ ಈ ಕಲೆಯನ್ನು ಬಲ್ಲವರಾಗಿದ್ದರಿಂದ ಅವರು ಆಗಿನ ಕಾಲದ ಸಿನಿಮಾ ಸ್ಟಾರ್ ಎಂದರೆ ತಪ್ಪಾಗಲಾರದು.

Comments are closed.