ಕೆನಡಾ ಚಿತ್ರರಂಗದ ಹಿರಿಯ ನಟ ಸುಂದರ್ ರಾಜ್ ಅರಸ್ ರವರ ಮಗ ಕೂಡ ಫೇಮಸ್ ನಟ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಎಂಬತ್ತರ ದಶಕದಲ್ಲಿ ಹಲವಾರು ವಿಲನ್ ಗಳು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು ಮಾತ್ರವಲ್ಲದೆ ಆ ಸಮಯದಲ್ಲಿ ವಿಲನ್ ಗಳ ಟ್ರೆಂಡ್ ಕೂಡ ಸ್ಟಾರ್ಟ್ ಆಗಿತ್ತು. ಇನ್ನು ಎಂಬತ್ತರ ದಶಕದಲ್ಲಿ ಜನಪ್ರಿಯವಾಗಿರುವ ವಿಲನ್ ಗಳಲ್ಲಿ ಸುಂದರ ರಾಜ್ ಅರಸ್ ಕೂಡ ಒಬ್ಬರು. ಹೌದು ಸ್ನೇಹಿತರೆ ವಿಲನ್ ಎಂಬ ಅರ್ಥಕ್ಕೆ ಹೊಸ ಭಾಷ್ಯವನ್ನು ಬರೆದಂತಹ ನಟ ಸುಂದರ್ ರಾಜ್ ಅರಸ್ ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೇ ಸುಂದರರಾಜ್ ಅರಸ್ ರವರು ಸಾಕಷ್ಟು ಕನ್ನಡ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡುವುದರ ಮೂಲಕ ತಮ್ಮ ಅಭಿನಯ ಹಾಗೂ ಕಂಚಿನ ಕಂಠದ ಮೂಲಕ ಎಲ್ಲರ ಮನ ಗೆದ್ದಂತಹ ನಟ. ಇನ್ನು ಸುಂದರ್ ರಾಜ್ ಅರಸ್ ರವರು ಕನ್ನಡ ಚಿತ್ರದಲ್ಲಿ ನಡೆಸಿದಂತಹ ಪ್ರಮುಖ ಚಿತ್ರಗಳೆಂದರೆ ಇಬ್ಬನಿ ಕರಗಿತು ಆಟೋರಾಜ ಸೀತಾರಾಮು ಇನ್ನು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಸುಂದರ ರಾಜ್ ಅರಸ್ ರವರು ಬದುಕಿದ್ದು ಕೇವಲ 52 ವರ್ಷವಾದರೂ ಕೂಡ ಬದುಕಿದ್ದಷ್ಟು ದಿನ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಇನ್ನು ಅವರ ಮಗ ಕೂಡ ಫೇಮಸ್ ನಟ ಯಾರು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಸುಂದರ್ ರಾಜ್ ಅರಸ್ ಅವರ ಮಗ ನಾಗೇಂದ್ರ ಅರಸ್ ಕೂಡ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ನಟ ಹಾಗೂ ತಂತ್ರಜ್ಞ. ಹೌದು ಸ್ನೇಹಿತರೆ ನಾಗೇಂದ್ರ ಅರಸ್ ರವರು ದಿನಕರ್ ತೂಗುದೀಪ್ ಶ್ರೀನಿವಾಸ್ ನಿರ್ದೇಶನದ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರು ನಟಿಸಿರುವ ನವಗ್ರಹ ಚಿತ್ರದಲ್ಲಿ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಕನ್ನಡ ಚಿತ್ರಗಳಲ್ಲಿ ರಾಮ ಶಾಮ ಭಾಮ ಹೀಗೆ ಹಲವಾರು ಚಿತ್ರಗಳಿಗೆ ಸಂಕಲನಕಾರರಾಗಿ ಹಾಗೂ ಜಸ್ಟ್ ಲವ್ ನಂತಹ ಚಿತ್ರಗಳಿಗೆ ನಿರ್ದೇಶಕನಾಗಿ ಕೂಡ ಕಾಣಿಸಿಕೊಂಡಿದ್ದಾರೆ.

Comments are closed.