ಎಕ್ಸ್ ಕ್ಯೂಸ್ ಮಿ ಖ್ಯಾತಿಯ ಸುನಿಲ್ ರಾವ್ ಅವರ ಕುಟುಂಬ ಹೇಗಿದೆ ಗೊತ್ತಾ? ಅವರ ಪತ್ನಿ ಮತ್ತು ಮಗು ಹೇಗಿದೆ ನೀವೇ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರು ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಅವರ ಅದ್ಭುತವಾದ ನಟನೆ ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇನ್ನು ಅಂತಹ ನಟರಲ್ಲಿ ಎಕ್ಸ್ ಕ್ಯೂಸ್ ಮಿ ಸಿನಿಮಾ ಖ್ಯಾತಿಯ ಸುನಿಲ್ ರಾವ್ ಕೂಡ ಒಬ್ಬರು. ಹೌದು ಇವರು ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಎಲ್ಲ ಕನ್ನಡಿಗರಿಗೆ ಚಿರಪರಿಚಿತ.

ಇನ್ನು ಈ ಚಿತ್ರ ಕಾಲೇಜು ಯುವಕ-ಯುವತಿಯರ ಜೀವನ ಹಾಗೂ ಪ್ರೇಮಕಹಾನಿ ಯನ್ನು ಹೊಂದಿದ್ದು ಜನರಿಗೆ ತುಂಬಾ ಇಷ್ಟವಾಗಿತ್ತು. ಇನ್ನು ಈ ಸಿನಿಮಾದಲ್ಲಿ ಸುನಿಲ್ ರಾವ್ ಅವರೊಂದಿಗೆ ನಟ ಅಜಯ್ ರಾವ್ ಹಾಗೂ ನಟಿ ರಮ್ಯಾ ಅವರು ನಾಯಕ-ನಾಯಕಿಯಾಗಿ ಅಭಿನಯಿಸಿದ್ದರು. ಇನ್ನು ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರೇಮ್ ಅವರು ನಿರ್ದೇಶಿಸಿದ್ದರೆ, ಎನ್ ಎಂ ಸುರೇಶ್ ಅವರು ನಿರ್ಮಾಣ ಮಾಡಿದ್ದರು. ಇನ್ನು ಈ ಚಿತ್ರಕ್ಕೆ ಆರ್ ಪಿ ಪಟ್ನಾಯಕ್ ಅವರು ಸಂಗೀತ ನೀಡಿದ್ದರು. ಕೇವಲ ಸಿನಿಮಾ ಅಷ್ಟೇ ಅಲ್ಲದೆ ಸಿನಿಮಾದ ಹಾಡುಗಳು ಕೂಡ ಹಿಟ್ ಆಗಿದ್ದವು.

ಇನ್ನು ನಟ ಸುನಿಲ್ ರಾವ್ ಅವರು ಖ್ಯಾತ ಗಾಯಕಿ ಬಿ ಕೆ ಸುಮಿತ್ರಾ ಅವರ ಸುಪುತ್ರ. ಇವರು ಸಪ್ಟೆಂಬರ್ 4, 1978 ರಲ್ಲಿ ಜನಿಸಿದರು. ಇನ್ನು ಇವರು ಕೇವಲ ಆಟ ರಾಷ್ಟ್ರೀಯ ಅಲ್ಲದೆ ಗಾಯಕರು ಹಾಗೂ ಸಂಗೀತದ ಸಾಹಿತ್ಯ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು ಬಾಲನಟನಾಗಿ ಹಲವಾರು ಸಿನಿಮಾಗಳಲ್ಲಿ ಹಾಗೂ ಕಿರುತೆರೆಯ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರು ಕೇವಲ 9 ವರ್ಷದವರಿದ್ದಾಗ ಕೆಂಡದ ವಿಸಿಲು ಹಾಗೂ ಏಳು ಸುತ್ತಿನ ಕೋಟೆ ಎಂಬ ಸಿನಿಮಾಗಳಲ್ಲಿ ಬಾಲ ನಟನಾಗಿ ಅಭಿನಯಿಸಿದ್ದರು.

ನಂತರ ಇವರು ಕನ್ನಡ ಚಿತ್ರಂಗದಲ್ಲಿ ಚಪ್ಪಾಳೆ, ಮಸಾಲಾ, ಸಖಾ ಸಖಿ, ಪ್ರೀತಿ-ಪ್ರೇಮ-ಪ್ರಣಯ ಹೀಗೆ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. ಆದರೆ ಅವರಿಗೆ ಯಶಸ್ಸನ್ನು ತಂದು ಕೊಟ್ಟಿದ್ದು ಮಾತ್ರ ಎಕ್ಸ್ ಕ್ಯೂಸ್ ಮಿ ಸಿನಿಮಾ. ಇನ್ನು ಅಷ್ಟೇ 2017ರಲ್ಲಿ ಕನ್ನಡದಲ್ಲಿ ಲೂಸ್ ಕನೆಕ್ಷನ್ ಎಂಬ ವೆಬ್ ಸೀರಿಸ್ ನಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನು ಎಕ್ಸ್ ಕ್ಯೂಸ್ ಮಿ ಚಿತ್ರದ ನಂತರ ಅವರಿಗೆ ಹೇಳಿಕೊಳ್ಳುವಂತಹ ಯಾವುದೇ ಒಳ್ಳೆ ಅವಕಾಶಗಳು ಒದಗಿರಲಿಲ್ಲ.

ಹೀಗಾಗಿ ಅವರು ಚಿತ್ರರಂಗದಿಂದ ದೂರ ಉಳಿದರು. ಚಿನ್ನು ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರು ಶ್ರೇಯಾ ಅಯ್ಯರ್ ಎಂಬುವರನ್ನು ಮದುವೆಯಾಗಿದರು. ಹೌದು ಸುನಿಲ್ ರಾವ್ ಅವರು ವೆಬ್ ಸೀರಿಸ್ ನಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿ ಶ್ರೇಯಾ ಅವರ ಪರಿಚಯವಾಯಿತು. ನಂತರ ಈ ಪರಿಚಯ ಸ್ನೇಹಕ್ಕೆ ಹಾಗೂ ಸ್ನೇಹ ಪ್ರೀತಿಗೆ ತಿರುಗಿ ನಂತರ ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ನಿಜಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಶ್ರೇಯ ಅವರು ವೆಬ್ ಡಿಸೈನರ್ ಆಗಿದ್ದು, ಸುನಿಲ್ ಅವರು ನಟಿಸಿದ ವೆಬ್ ಸಿರೀಸ್ ನ ಡಿಸೈನರ್ ಕೂಡ ಆಗಿದ್ದರು.

ಇನ್ನು ಶ್ರೇಯ ಹಾಗೂ ಸುನಿಲ್ ಅವರಿಗೆ ಮುದ್ದಾದ ಹೆಣ್ಣು ಮಗುವಿಗೆ. ಹೌದು ಈ ದಂಪತಿಗೆ ಒಂದು ಹೆಣ್ಣು ಮಗುವಿದ್ದು ಇದೀಗ ಚಿಕ್ಕ ಕುಟುಂಬದೊಂದಿಗೆ ಈ ಜೋಡಿ ತುಂಬಾ ಸಂತೋಷದಿಂದ ಜೀವನ ಕಳೆಯುತ್ತಿದ್ದಾರೆ. ಇನ್ನು ಸುನಿಲ್ ರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಆಗಾಗ ತಮ್ಮ ಕುಟುಂಬದ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು ಅವರ ಪತ್ನಿ ಹಾಗೂ ಮಗುವಿನ ಫೋಟೋವನ್ನು ನೀವು ಇಲ್ಲಿ ವೀಕ್ಷಿಸಬಹುದು. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.