ಜಗತ್ತಿನ ಅಂತ್ಯಂತ ಪುರಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯ ಮಹತ್ವ ಏನು ಗೊತ್ತಾ?? ಇಲ್ಲಿದೆ ನೀವರಿಯದ ಮಾಹಿತಿ.

ನಮಸ್ಕಾರ ಸ್ನೇಹಿತರೇ ಹಿಂದೂ ಧರ್ಮದಲ್ಲಿ ಸ್ವಸ್ತಿಕ ಚಿಹ್ನೆಗೆ ಅದರದ್ದೇ ಆದ ಮಹತ್ವ ಇದೆ. ಇದು ಕೇವಲ ಇಂದು ನಿನ್ನೆಯ ಬಳಕೆಯಲ್ಲ, ಪುರಾತನ ಕಾಲದಿಂದಲೂ ಸ್ವಸ್ತಿಕ ಚಿಹ್ನೆಯನ್ನು ಕಾಣಬಹುದು. ಸ್ವಸ್ತಿಕ ಚಿಹ್ನೆ ನಾಗರಿಕತೆಯ ಕಾಲದಲ್ಲಿಯೂ ಬಳಸಲ್ಪಡುತ್ತಿತ್ತು ಎಂದು ಪುರಾತತ್ವ ಪುರಾವೆಗಳು ಹೇಳುತ್ತವೆ ಕೇವಲ ಸಿಂಧೂ ನಾಗರಿಕತೆಯಲ್ಲಿ ಅಥವಾ ಭಾರತದಲ್ಲಿ ಮಾತ್ರವಲ್ಲ, ಮೆಡಿಟರೇನಿಯನ್, ಶಿಲಾಯುಗದ ಯುರೋಪ್ ಕಾಲದಿಂದ ಹಿಡಿದು, ಇರಾನ್, ಚೀನಾ, ಜಪಾನ್, ಕೊರಿಯಾ ಎಲ್ಲಾ ಭಾಗದಲ್ಲಿಯೂ ಸ್ವಸ್ತಿಕ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.

swastik | ಜಗತ್ತಿನ ಅಂತ್ಯಂತ ಪುರಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯ ಮಹತ್ವ ಏನು ಗೊತ್ತಾ?? ಇಲ್ಲಿದೆ ನೀವರಿಯದ ಮಾಹಿತಿ.
ಜಗತ್ತಿನ ಅಂತ್ಯಂತ ಪುರಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯ ಮಹತ್ವ ಏನು ಗೊತ್ತಾ?? ಇಲ್ಲಿದೆ ನೀವರಿಯದ ಮಾಹಿತಿ. 2

ಸ್ವಸ್ತಿಕ ಲಾಂಛನದಲ್ಲಿ ನಾಲ್ಕು ಬಾಹುಗಳಿದ್ದು, 90 ಡಿಗ್ರಿಯಲ್ಲಿ ಬಾಗಿರುತ್ತವೆ. ಬಹುತೇಕ ಕ್ರಾಸ್ ಚಿಹ್ನೆಯಂತಿರುವ ಸ್ವಸ್ತಿಕ್ ಆಭರಣಗಳನ್ನು ನಾಗರಿಕತೆಯ ಕಾಲದಲ್ಲಿ ಬಳಸಲಾಗುತ್ತಿತ್ತಂತೆ. ಸ್ವಸ್ತಿಕ ಚಿಹ್ನೆಯನ್ನು ಶುಭ ಸಂಕೇತವಾಗಿ ಬಳಸಲಾಗುತ್ತದೆ. ಸ್ವಸ್ತಿಕ್, ಸು ಮತ್ತು ಅಸ್ತಿಕಾ ಶಬ್ದದ ಸಂಯೋಜನೆಯಾಗಿದ್ದು, ಸು ಎಂದರೆ ಶುಭ, ಅಸ್ತಿಕಾ ಅಂದರೆ ಆಗುವುದು, ’ಶುಭವಾಗುವುದು’ ಎನ್ನುವ ಅರ್ಥ ಕೊಡುತ್ತದೆ. ಹಾಗಾಗಿ ಯಾವುದೇ ಕಾರ್ಯದ ಆರಂಭದಲ್ಲಿ ಸ್ವಸ್ತಿಕ್ ಚಿತ್ರವನ್ನು ಬಿಡಿಸಲಾಗುತ್ತದೆ.

ಇನ್ನು ಸ್ವಸ್ತಿಕ ಲಾಂಛನವನ್ನು ಮನೆಯ ಮುಂದೆ ಇಟ್ಟರೆ ಹೊರಗಿನಿಂದ ನಕಾರಾತ್ಮಕ ಶಕ್ತಿ ಮನಎಯ ಒಳಗೆ ನುಸುಳುವುದಿಲ್ಲ. ಹಾಗಾಗಿ ದನ್ನು ಸಕಾರಾತ್ಮಕತೆಯ ಸಂಕೇತವಾಗಿ ಬಳಸಲಾಗುತ್ತದೆ. ಸ್ವಸ್ತಿಕ ಚಿಹ್ನೆ ವಿಘ್ನನಿವಾರಕ ಗಣಪನ ರೂಪದಲ್ಲಿ ಬಳಸಲಾಗುತ್ತದೆ. ಸ್ವಸ್ತಿಕ ಚಿಹ್ನೆಯ ಎಡಕ್ಕೆ ಇರುವ ಭಾಗವನ್ನು ಗಂ ಬೀಜ ಮಂತ್ರವೆಂದು ಹೇಳಲಾಗುತ್ತದೆ ಅಂದರೆ ಗಣಪತಿ. ಸ್ವಸ್ತಿಕ ಲಾಂಛನದ ನಾಲ್ಕೂ ದಿಕ್ಕುಗಳಲ್ಲಿ ಇಡುವ ಚುಕ್ಕಿಗಳು, ದೇವಿ ಗೌರಿ, ಭೂ ತಾಯಿ, ಕೂರ್ಮಾ ಮತ್ತು ದೇವಾನುದೇವತೆಗಳ ಆವಾಸ ಸ್ಥಾನ ಎಂದು ಗುರುತಿಸಲಾಗುತ್ತದೆ. ಅಷ್ಟೇ ಅಲ್ಲ, ಸ್ವಸ್ತಿಕದ ನಾಲ್ಕೂ ರೇಖೆಗಳನ್ನು ಬ್ರಹ್ಮನ ನಾಲ್ಕು ಶಿರಗಳು ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಸ್ವಸ್ತಿಕ ಚಿಹ್ನೆಯು ಕೇವಲ ಹಿಂದೂ ಧರಮದ ಆಚರಣೆ ಮಾತ್ರವಲ್ಲದೇ, ಜೀವನದ ದಿಕ್ಕನ್ನು ಹೇಳುವ, ಸಕಾರಾತ್ಮಕತೆಯನ್ನು ತುಂಬುವ ಶಕ್ತಿಯೂ ಆಗಿದೆ ಎನ್ನಬಹುದು.

Comments are closed.