ನಡೆಯುತ್ತಿದೆ ಮಹಾ ತಯಾರಿ, ಟಿ 20 ವಿಶ್ವಕಪ್ ಗೆ ಕಣಕ್ಕಿಳಿಸುತ್ತಿದೆ ಬಲಿಷ್ಠ ತಂಡ. ವಿಶ್ವಕಪ್ ಗೆಲ್ಲವೂ ಸಾಧ್ಯವೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಬಾರಿ ನಡೆದಿರುವ ಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಭಾರತೀಯ ಕ್ರಿಕೆಟ್ ತಂಡ ನಾಕೌಟ್ ಹಂತಕ್ಕೆ ತಲುಪುವಲ್ಲಿ ವಿಫಲ ವಾಗಿತ್ತು ಇದು ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಇತಿಹಾಸದ ಅತ್ಯಂತ ದೊಡ್ಡ ಮಟ್ಟದ ಮುಖಭಂಗವಾಗಿತ್ತು. ಹೀಗಾಗಿ ಈ ಬಾರಿ ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಮಾರ್ಗದರ್ಶನದಲ್ಲಿ ಆಯ್ಕೆಸಮಿತಿ ಅತ್ಯುತ್ತಮ ಆಟಗಾರರನ್ನು ಆಸ್ಟ್ರೇಲಿಯಾದಲ್ಲಿ ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ಗೆ ಕಳುಹಿಸಲಿದೆ.

ಆದರೆ ಆಯ್ಕೆಗಾರರಿಗೆ ವಿಶ್ವಕಪ್ ತಂಡಕ್ಕೆ 18 ಆಟಗಾರರನ್ನು ಆಯ್ಕೆ ಮಾಡುವುದು ಸಾಕಷ್ಟು ಗೊಂದಲಮಯವಾಗಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಈ ಬಾರಿಯ ಐಪಿಎಲ್ ನಲ್ಲಿ ಕೂಡ ಸಾಕಷ್ಟು ಯುವ ಆಟಗಾರರು ಮಿಂಚಿದ್ದಾರೆ ಹಾಗೂ ಸೌತ್ ಆಫ್ರಿಕಾ ಸರಣಿಯಿಂದ ಪ್ರಾರಂಭಿಸಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಕೂಡ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡುವ ಆಟಗಾರರನ್ನು ಗಮನದಲ್ಲಿರಿಸಿಕೊಂಡು ಈ ತಂಡವನ್ನು ಆಯ್ಕೆ ಮಾಡಬೇಕಾಗಿದೆ. ಅಷ್ಟು ಮಾತ್ರವಲ್ಲದೆ ಈಗಾಗಲೇ ಹಲವಾರು ವರ್ಷಗಳಿಂದ ತಂಡದಲ್ಲಿ ಇಲ್ಲದಿದ್ದರೂ ಕೂಡ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ತಂಡಕ್ಕೆ ಕಂಬ್ಯಾಕ್ ಮಾಡಿರುವ ಆಟಗಾರರು ಕೂಡ ಇದ್ದಾರೆ. ಹೀಗಾಗಿ ಯಾರನ್ನು ಆಯ್ಕೆ ಮಾಡುವುದು ಯಾರನ್ನು ಬಿಡುವುದು ಎನ್ನುವ ಗೊಂದಲವು ಕೂಡ ಆಯ್ಕೆಗಾರರಲ್ಲಿದೆ. ಈಗಾಗಲೇ ಸೌತ್ ಆಫ್ರಿಕಾ ವಿರುದ್ಧ ಆಡಿದ್ದು ನಂತರ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧವೂ ಕೂಡ ವಿದೇಶಿ ನೆಲದಲ್ಲಿ ಆಡಳಿದೆ. ನಂತರ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಗಳ ಸರಣಿ ಮತ್ತು ಏಷ್ಯಾಕಪ್ ನಲ್ಲಿ ಕೂಡ ಭಾರತ ದಂಡ ಭಾಗವಹಿಸಲಿದೆ ಹೀಗಾಗಿ ಈ ಸರಣಿಗಳಲ್ಲಿ ಅದರಲ್ಲೂ ವಿದೇಶಿ ನೆಲದಲ್ಲಿ ಅತ್ಯುತ್ತಮವಾಗಿ ಆಡುವ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ.

t20 | ನಡೆಯುತ್ತಿದೆ ಮಹಾ ತಯಾರಿ, ಟಿ 20 ವಿಶ್ವಕಪ್ ಗೆ ಕಣಕ್ಕಿಳಿಸುತ್ತಿದೆ ಬಲಿಷ್ಠ ತಂಡ. ವಿಶ್ವಕಪ್ ಗೆಲ್ಲವೂ ಸಾಧ್ಯವೇ??
ನಡೆಯುತ್ತಿದೆ ಮಹಾ ತಯಾರಿ, ಟಿ 20 ವಿಶ್ವಕಪ್ ಗೆ ಕಣಕ್ಕಿಳಿಸುತ್ತಿದೆ ಬಲಿಷ್ಠ ತಂಡ. ವಿಶ್ವಕಪ್ ಗೆಲ್ಲವೂ ಸಾಧ್ಯವೇ?? 2

ಏಷ್ಯಾಕಪ್ ನಲ್ಲಿ ಕೂಡ ಟಿ ಟ್ವೆಂಟಿ ಪಂದ್ಯ ಗಳಿದ್ದು ಏಷ್ಯ ತಂಡಗಳ ವಿರುದ್ಧ ಕೂಡ ಈ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕೆಲವೊಂದು ಕ್ಲಾರಿಟಿ ಸಿಗಲಿದೆ. ಇದಾದ ನಂತರ ಆಸ್ಟ್ರೇಲಿಯ ನೆಲದಲ್ಲಿಯೇ ಆಸ್ಟ್ರೇಲಿಯಾ ವಿರುದ್ಧ ಟಿ-ಟ್ವೆಂಟಿ ಸರಣಿಯನ್ನು ಆಡುವ ಅವಕಾಶ ಭಾರತೀಯ ತಂಡಕ್ಕೆ ಸಿಗಲಿದೆ. ಹೀಗಾಗಿ ಈ ಬಾರಿ ಈ ಎಲ್ಲಾ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಅತ್ಯುತ್ತಮ ಆಟಗಾರರನ್ನು ಹಾಡುವ ಬಳಗದಲ್ಲಿ ಸೇರಿಸಿಕೊಂಡು ವಿಶ್ವಕಪ್ ಎದರಿಸುವ ಬಲಿಷ್ಠವಾದ ಯೋಜನೆಯೊಂದಿಗೆ ಕಾರ್ಯರೂಪಕ್ಕೆ ತರುವ ಕಂಡವನು ನಿರ್ಮಿಸಲು ರಾಹುಲ್ ದ್ರಾವಿಡ್ ಸೌರವ್ ಗಂಗೂಲಿ ಸಿದ್ದರಾಗಿದ್ದಾರೆ ಹೀಗಾಗಿ ಈ ಬಾರಿ ಕಪ್ ಗೆಲ್ಲುವ ಫೆವರೇಟ್ ತಂಡಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದಾಗಿದೆ.

Comments are closed.