ಬ್ರೋ ತಂದಾನಿ ತಾನೋ ಎಂದು ಕೆಜಿಎಫ್- 2 ರಿವ್ಯೂ ಹೇಳಿದ್ದ ಹುಡುಗನ ನಿಜವಾದ ಕಹಾನಿ ಏನು ಗೊತ್ತಾ?? ಮಾಧ್ಯಮಗಳು ಇವನ ಹಿಂದೆ ಬೀಳೋದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯುಟ್ಯೂಬ್ ಚಾನೆಲ್ ಗಳಲ್ಲಿ ಒಬ್ಬ ಹುಡುಗನ ಕುರಿತಂತೆ ಸಾಕಷ್ಟು ವೈರಲ್ ವಿಡಿಯೋಗಳನ್ನು ನೋಡಿರುತ್ತೀರಿ. ಹೌದು ಗೆಳೆಯರೇ ನಾವು ಮಾತನಾಡಲು ಹೋಗುತ್ತಿರುವುದು ಕೆಜಿಎಫ್ ಚಾಪ್ಟರ್ 2 ಚಿತ್ರದ ಸಂದರ್ಭದಲ್ಲಿ ತಂದಾನಿ ನಾನೋ ತಾನಿ ತಂದಾನೋ ಎಂದು ಹೇಳುವ ಮೂಲಕ ವಿಶಿಷ್ಟ ರೀತಿಯಲ್ಲಿ ಸಿನಿಮಾಗಳ ಕುರಿತಂತೆ ರಿವ್ಯೂ ಮಾಡುತ್ತಿರುವ ವೈರಲ್ ಹುಡುಗನ ಕುರಿತಂತೆ.

ಈತ ಯಾವುದೇ ಸಿನಿಮಾಗಳನ್ನು ನೋಡಿದರೂ ಕೂಡ ನೀಡುವಂತಹ ವಿಚಿತ್ರ ಹಾಗೂ ವಿಶಿಷ್ಟ ಪ್ರತಿಕ್ರಿಯೆಯನ್ನು ನೋಡಲೆಂದೆ ಹಲವಾರು ಟಿವಿ ಚಾನೆಲ್ ಗಳು ಇವನನ್ನು ಹುಡುಕಿಕೊಂಡು ಬರುತ್ತವೆ ಅಷ್ಟರಮಟ್ಟಿಗೆ ಇವನ ಹೆಸರು ವೈರಲ್ ಆಗಿದೆ. ಪ್ರತಿಯೊಂದು ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಥಿಯೇಟರ್ ಮುಂದೆ ಬಂದು ಈತ ನೀಡುವಂತಹ ಯಕ್ಷ ನೋಡೋದಕ್ಕೆ ಅಂತಾನೆ ಹಲವಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇನ್ನು ಈತ ಯಾರು ಈತನನ್ನು ನಿಜಕ್ಕೂ ಕೂಡ ಸಿನಿಮಾ ತಂಡದವರು ಹಣಕೊಟ್ಟು ಸಿನಿಮಾ ಥಿಯೇಟರ್ ಗಳ ಮುಂದೆ ಕರೆಸುತ್ತಾರಾ ಎಂಬುದಾಗಿ ನೀವು ಯೋಚಿಸುತ್ತಿರಬಹುದು.

tandani naane Lakshman review | ಬ್ರೋ ತಂದಾನಿ ತಾನೋ ಎಂದು ಕೆಜಿಎಫ್- 2 ರಿವ್ಯೂ ಹೇಳಿದ್ದ ಹುಡುಗನ ನಿಜವಾದ ಕಹಾನಿ ಏನು ಗೊತ್ತಾ?? ಮಾಧ್ಯಮಗಳು ಇವನ ಹಿಂದೆ ಬೀಳೋದು ಯಾಕೆ ಗೊತ್ತೇ??
ಬ್ರೋ ತಂದಾನಿ ತಾನೋ ಎಂದು ಕೆಜಿಎಫ್- 2 ರಿವ್ಯೂ ಹೇಳಿದ್ದ ಹುಡುಗನ ನಿಜವಾದ ಕಹಾನಿ ಏನು ಗೊತ್ತಾ?? ಮಾಧ್ಯಮಗಳು ಇವನ ಹಿಂದೆ ಬೀಳೋದು ಯಾಕೆ ಗೊತ್ತೇ?? 2

ಈ ಎಲ್ಲ ವಿಚಾರಗಳ ಕುರಿತಂತೆ ಇಂದಿನ ಲೇಖನಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೇ ಈ ವೈರಲ್ ಹುಡುಗನ ಹೆಸರು ಲಕ್ಷ್ಮಣ್ ಎಂದು. ಈತ ಹೈದ್ರಾಬಾದ್ ನ ವಿಶಾಖಪಟ್ಟಣದ ಮೂಲದವರಾಗಿದ್ದಾನೆ. ಯಾವುದೇ ಹೊಸ ಸಿನಿಮಾ ರಿಲೀಸ್ ಆದರೂ ಸಾಕು ಈತ ಚಿತ್ರಮಂದಿರದ ಮುಂದೆ ಪ್ರತ್ಯಕ್ಷ ಆಗಿರುತ್ತಾನೆ ಹಾಗೂ ಉದ್ರೇಕ ಭರಿತನಾಗಿ ಸಿನಿಮಾದ ಕುರಿತಂತೆ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿರುತ್ತಾನೆ. ಈತನನ್ನು ಟಿವಿ ವಾಹಿನಿಗಳ ಮೈಕ್ ಹುಡುಕಿಕೊಂಡು ಬರುತ್ತವೆ.

ಇನ್ನು ಈತ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗಿದ್ದು ಕೆಜಿಎಫ್ ಚಾಪ್ಟರ್ 2 ಚಿತ್ರದ ರಿಯಾಕ್ಷನ್ ಮೂಲಕ ಎಂದರೆ ತಪ್ಪಾಗಲಾರದು. ಬ್ರೋ ತಂದಾನಿ ತಾನೋ ಎಂದು ಗಟ್ಟಿಯಾಗಿ ಉದ್ರೇಕ ಪೂರಕವಾಗಿ ಮಾತನಾಡುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತ ವ್ಯಕ್ತಿಯಾಗಿದ್ದಾನೆ. ಇದನ್ನು ನೋಡಿರುವ ಪ್ರತಿಯೊಬ್ಬರು ಕೂಡ ಈತ ಹುಚ್ಚ ಅಥವಾ ಈತ ಪಬ್ಲಿಸಿಟಿ ಗಿಮಿಕ್ ಮಾಡುತ್ತಿದ್ದಾನೆ ಎಂಬುದಾಗಿ ಕೂಡ ಮಾತನಾಡಿಕೊಂಡಿದ್ದರು. ಈತನ ಸಂಪೂರ್ಣ ವಿಚಾರವನ್ನು ಹೇಳುವುದಾದರೆ ಈತ ಪಾಲಿಟೆಕ್ನಿಕ್ ವಿದ್ಯಾಭ್ಯಾಸವನ್ನು ಮಾಡಿದ್ದಾನೆ. ಬಡ ಕುಟುಂಬದಲ್ಲಿ ಜನಿಸಿದ್ದಾನೆ. ಚಿಕ್ಕಂದಿನಿಂದಲೂ ಕೂಡ ಈತನಿಗೆ ಸಿನಿಮಾ ಎಂದರೆ ಎಲ್ಲಿಲ್ಲದ ಹುಚ್ಚು ಎಂದರೆ ತಪ್ಪಾಗಲಾರದು.

ಇನ್ನು ಈತನ ಮನೆ ಕಡುಬಡತನ ಇದ್ದ ಕಾರಣದಿಂದಾಗಿ ತಂದೆ ತಾಯಿ ನಡುವೆ ಜಗಳವಾಗಿ ತಂದೆ ಮನೆ ಬಿಟ್ಟು ಹೋಗುತ್ತಾರೆ. ಲಕ್ಷ್ಮಣ್ ಹಾಗೂ ಆತನ ಸಹೋದರ ಹಾಗೂ ಸಹೋದರಿ ಮೂರು ಜನರನ್ನು ಕೂಡ ತಾಯಿ ಬೇರೆ ಬೇರೆ ಮನೆಗಳಲ್ಲಿ ಕೆಲಸ ಮಾಡಿಕೊಂಡು ಸಾಕುತ್ತಾರೆ. ಒಂದು ದಿನ ಊಟಕ್ಕೆ ಕೂಡ ಪರದಾಡ ಬೇಕಾದಂತಹ ಪರಿಸ್ಥಿತಿ ಅವರ ಮನೆಯಲ್ಲಿ ಈ ಹಿಂದೆ ಇತ್ತು. ಇನ್ನು ಲಕ್ಷ್ಮಣ್ ಕೂಡ ಹತ್ತು ಹಲವಾರು ಕೆಲಸಗಳನ್ನು ಮಾಡಿ ಹಣವನ್ನು ಸಂಪಾದಿಸಲು ಪ್ರಯತ್ನಿಸಿದ್ದುಂಟು. ಆತ ರಿಕ್ಷಾ ಕೂಡ ಓಡಿಸಿದ್ದ ಬೇರೆ ಬೇರೆ ಹೋಟೆಲ್ ಹಾಗೂ ಊರುಗಳಲ್ಲಿ ಕೂಡ ಕೆಲಸ ಮಾಡಿದ್ದ.

ಇನ್ನು ಈತನಿಗೆ ಮೊದಲಿನಿಂದಲೂ ಕೂಡ ಸಿನಿಮಾವನ್ನು ನೋಡಿ ಅದರ ಕುರಿತಂತೆ ಅದು ಎಷ್ಟೇ ಕೆಟ್ಟದಿರಲಿ ಅಥವಾ ಚೆನ್ನಾಗಿರಲಿ ಅದರ ಕುರಿತಂತೆ ವಿಭಿನ್ನವಾಗಿ ರಿವ್ಯೂ ನೀಡುವಂತಹ ವಿಶೇಷವಾದ ಟ್ಯಾಲೆಂಟ್ ಹೊಂದಿದ್ದ. ಈ ಸಂದರ್ಭದಲ್ಲಿ ಆತನ ಸ್ನೇಹಿತರು ನೀನು ಯಾಕೆ ಟಿವಿ ಮಾಧ್ಯಮಗಳಲ್ಲಿ ಈ ರಿವ್ಯೂ ನೀಡಬಾರದು ಎಂಬುದಾಗಿ ಆತನನ್ನು ಪ್ರೋತ್ಸಾಹಿಸುತ್ತಾರೆ. ಇಲ್ಲಿಂದಲೇ ಪ್ರಾರಂಭಮಾಡಿದ ಲಕ್ಷ್ಮಣ್ ಪ್ರತಿಯೊಂದು ಸಿನಿಮಾ ನೋಡಿದಾಗಲೂ ಕೂಡ ಮಾಧ್ಯಮಗಳ ಮುಂದೆ ಬಂದು ನಿಂತು ವಿಭಿನ್ನವಾಗಿ ರಿವ್ಯೂ ನೀಡುವ ಕಾಯಕವನ್ನು ಪ್ರಾರಂಭಿಸದ್ದ.

ಕಳೆದ ಒಂದು ವರ್ಷದಿಂದಲೂ ಕೂಡ ತೆಲುಗು ಮಾಧ್ಯಮಗಳಲ್ಲಿ ಈತ ಟ್ರೆಂಡಿಂಗ್ ಟಾಪಿಕ್ ಆಗಿದ್ದಾನೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಕನ್ನಡದಲ್ಲಿ ಕೂಡ ಈಗ ಸದ್ದು ಮಾಡುತ್ತಿದ್ದಾನೆ. ಸಿನಿಮಾ ಹೇಗೆ ಇರಲಿ ಅದನ್ನು ಸಿನಿಮಾ ದೃಷ್ಟಿಯಲ್ಲಿ ನೋಡಿದಾಗ ಅದರಲ್ಲಿರುವ ಒಳ್ಳೆಯ ಅಂಶಗಳು ನಮಗೆ ಕಾಣುತ್ತವೆ ಅವುಗಳನ್ನು ನಾವು ಹೆಚ್ಚಾಗಿ ವಿಜೃಂಭಿಸಬೇಕು ಅದರಿಂದಲೇ ಇನ್ನೂ ಹೆಚ್ಚೆಚ್ಚು ಸಿನಿಮಾಗಳು ಮಾಡಲು ಅವರಿಗೂ ಕೂಡ ಸ್ಪೂರ್ತಿಯಾಗುತ್ತದೆ ಎಂಬುದು ಲಕ್ಷ್ಮಣ್ ಹೇಳುವ ಮಾತುಗಳು. ಅದಕ್ಕಾಗಿ ಚಿತ್ರ ಹೇಗಿದ್ದರೂ ಕೂಡ ಲಕ್ಷ್ಮಣ್ ಅದರ ಪಾಸಿಟಿವ್ ವಿಚಾರಗಳನ್ನು ಹೆಚ್ಚಾಗಿ ಬೆಳಕು ಚೆಲ್ಲುತ್ತಾರೆ.

ಮಹಾಮಾರಿ ಹಾಗೂ ಲಾಕ್ಡೌನ್ ಮತ್ತು ಓಟಿಟಿ ಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಸಿನಿಮಾ ಥಿಯೇಟರ್ ಗಳಿಗೆ ಜನರು ಬರುವುದು ಕಡಿಮೆಯಾಗಿದೆ ಇಂತಹ ರಿವ್ಯೂ ಮೂಲಕವಾದರೂ ಮತ್ತೆ ಬರಲಿ ಎನ್ನುವ ಕಾರಣಕ್ಕಾಗಿ ಪಾಸಿಟಿವ್ ವಿಚಾರಗಳನ್ನು ಹೆಚ್ಚಾಗಿ ಹೇಳುತ್ತೇನೆ ಎಂಬುದಾಗಿ ಲಕ್ಷ್ಮಣ್ ಹೇಳುತ್ತಾರೆ. ಈ ಮೂಲಕ ಲಕ್ಷ್ಮಣ ರವರಿಗೆ ಕೆಲವೊಂದು ವೆಬ್ ಸರಣಿಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳು ಕೂಡ ಹುಡುಕಿಕೊಂಡು ಬಂದಿವೆಯಂತೆ. ಹೆಚ್ಚಾಗಿ ವಿದ್ಯಾಭ್ಯಾಸ ಮಾಡಿದ ನಾನು ಈ ಮೂಲಕವಾದರೂ ಸ್ವಲ್ಪಮಟ್ಟಿಗೆ ಹಣ ಮಾಡುತ್ತೇನೆ ಎಂಬುದಾಗಿ ಅವರು ಹೇಳುತ್ತಾರೆ. ಇನ್ನು ಅವರು ಹಣ ಪಡೆದುಕೊಂಡು ಸಿನಿಮಾಗಳಿಗೆ ರಿವ್ಯೂ ಹೇಳುತ್ತಾರೆ ಎಂಬ ದೂರಿದೆ. ಆದರೆ ಲಕ್ಷ್ಮಣ್ ರವರು ಇದು ಸತ್ಯಕ್ಕೆ ದೂರವಾದ ಮಾತು ಎಂಬುದಾಗಿ ಹೇಳುತ್ತಾರೆ. ಈ ವೈರಲ್ ಬಾಯ್ ಲಕ್ಷ್ಮಣ ರವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.