ತಿರುಪತಿಗೆ ಹೋಗಿ ಬಂದ‌ ಮೇಲೂ ನಿಮ್ಮ ಕಷ್ಟಗಳು ತೀರಿಲ್ಲ ಅಂದ್ರೆ ನೀವು ಈ 4ರಲ್ಲಿ ಒಂದು ತಪ್ಪನಾದ್ರೂ ಮಾಡಿಯೇ ಇರ್ತೀರಿ

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಒಂದು ಗಾದೆ ಇದೆ ಸಂಕಟ ಬಂದಾಗ ವೆಂಕಟರಮಣ ಎಂದು. ನಮ್ಮ ಜನರು ಕಷ್ಟ ಬಂದಾಗ ಮೊದಲು ದೇವರ ಸಾನಿಧ್ಯದಲ್ಲಿ ಹೋಗಿಬರಬೇಕು ಎಂಬ ಯೋಜನೆಯನ್ನು ಮಾಡುತ್ತಾರೆ. ಅದರಲ್ಲೂ ತಿರುಪತಿ ತಿಮ್ಮಪ್ಪನ ಪಾದಾರವಿಂದಗಳಿಗೆ ಹೋಗಿ ನಮಸ್ಕಾರ ಮಾಡಲೇಬೇಕೆಂದು ನಿರ್ಧರಿಸಿರುತ್ತಾರೆ. ಇದಕ್ಕಾಗಿ ನಮ್ಮ ಭಾರತದಲ್ಲಿ ಅತ್ಯಂತ ಹೆಚ್ಚು ಸಂಪದ್ಬರಿತ ದೇವಸ್ಥಾನವೆಂದರೆ ಅದು ತಿರುಪತಿಯ ತಿಮ್ಮಪ್ಪನ ದೇವಸ್ಥಾನ. ಇಲ್ಲಿ ಹೋದರೆ ಖಂಡಿತವಾಗಿಯೂ ತಿರುಪತಿ ತಿಮ್ಮಪ್ಪ ನಿಮ್ಮ ಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾನೆ ಎಂಬುದು ಹಲವಾರು ಬಾರಿ ಸಾಬೀತಾಗಿದೆ ಹಾಗೂ ಇದು ನಮ್ಮ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಆದರೆ ನೀವು ತಿರುಪತಿ ತಿಮ್ಮಪ್ಪನ ಸಾನಿಧ್ಯಕ್ಕೆ ಹೋಗಿ ಬಂದಮೇಲೆ ಕೂಡ ನಿಮ್ಮ ಕಷ್ಟಗಳು ಪರಿಹಾರವಾಗಲಿಲ್ಲ ವೆಂದರೆ ಖಂಡಿತವಾಗಿಯೂ ಈ ಕೆಳಗಿನ ನಾಲ್ಕು ತಪ್ಪುಗಳನ್ನು ನೀವು ನಿಮ್ಮ ಜೀವನದಲ್ಲಿ ಖಂಡಿತವಾಗಿ ಮಾಡಿರುತ್ತೀರಿ ಅದಕ್ಕಾಗಿಯೇ ನಿಮ್ಮ ಕಷ್ಟಗಳು ಕಳೆದಿರುವುದಿಲ್ಲ. ಬನ್ನಿ ಆ 4 ತಪ್ಪುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಮೊದಲಿಗೆ ತಿರುಪತಿ ತಿಮ್ಮಪ್ಪನ ಸಾನಿಧ್ಯಕ್ಕೆ ಹೋದಾಗ ಡೈರೆಕ್ಟ್ ತಿಮ್ಮಪ್ಪನ ಸನ್ನಿಧಿಗೆ ಹೋಗುವ ಇರಾದೆಯನ್ನು ನೀವೆಲ್ಲ ಇಟ್ಟುಕೊಂಡಿರುತ್ತೀರಿ ಆದರೆ ಅದು ಖಂಡಿತವಾಗಿಯೂ ತಪ್ಪು. ಮೊದಲು ಅಲ್ಲಿರುವ ವರಹನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ತಿಮ್ಮಪ್ಪನ ಸಾನಿಧ್ಯಕ್ಕೆ ಗೆ ಹೋಗಬೇಕು.

ವರಹನಾಥ ಸ್ವಾಮಿ ತಿಮ್ಮಪ್ಪನಿಗೆ ನೀಡಿರುವ ಜಾಗ. ಹೀಗಾಗಿ ಮೊದಲ ಪೂಜೆ ವರಹನಾಥ ಸ್ವಾಮಿಗೆ ದಕ್ಕಬೇಕು. ಇದು ವೆಂಕಟೇಶ್ವರ ಸ್ವಾಮಿ ಹಾಗೂ ವರಹನಾಥ ಸ್ವಾಮಿ ಮಾಡಿಕೊಂಡಿದ್ದ ಒಪ್ಪಂದದಂತೆ ಈ ಒಪ್ಪಂದ ಪತ್ರ ಇಂದಿಗೂ ಕೂಡ ನೀವು ತಿರುಪತಿಯಲ್ಲಿ ಕಾಣಬಹುದಾಗಿದೆ. ಇನ್ನು ಎರಡನೆಯದಾಗಿ ನವವಿವಾಹಿತರು ಈ ಬೆಟ್ಟಕ್ಕೆ ಖಂಡಿತವಾಗಿ ಹೋಗಬೇಡಿ ನಿಮಗೆ ಯಾತ್ರ ಫಲ ಕಂಡಿತವಾಗಿ ಸಿಗೋದಿಲ್ಲ ಕಾರಣವೇನೆಂದರೆ ಮದುವೆಯ ಮೊದಲ ಆರು ತಿಂಗಳಲ್ಲಿ ಇಲ್ಲಿಗೆ ಬರಲೇ ಬಾರದು.

ಹೌದು ಸ್ನೇಹಿತರೆ ಮದುವೆ ಮೊದಲ ಆರು ತಿಂಗಳಲ್ಲಿ ನವವಿವಾಹಿತರು ನಡುವೆ ಮೋಹ ಆಕರ್ಷಣೆ ಜಾಸ್ತಿಯಾಗಿರುತ್ತದೆ. ಹೀಗಾಗಿ ಬೆಟ್ಟದಮೇಲೆ ಆರು ತಿಂಗಳ ನಂತರ ಹೋಗುವುದೇ ನವವಿವಾಹಿತರಿಗೆ ಲೇಸೆಂದು ಪುರಾಣಗಳು ಹೇಳಿವೆ. ಸ್ವತಹ ವೆಂಕಟೇಶ್ವರಸ್ವಾಮಿ ಕೂಡ ಮದುವೆಯಾದ ನಂತರ ಆರು ತಿಂಗಳುಗಳ ಕಾಲ ಬೆಟ್ಟದ ಕೆಳಗಿದ್ದ ಮುನಿಗಳ ಆಶ್ರಮದಲ್ಲಿ ವಾಸವಿದ್ದರು. ನಂತರ ಅವರು ಬೆಟ್ಟದಮೇಲೆ ಬಂದು ವಾಸವಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಮದುವೆಯಾದ ನವವಿವಾಹಿತರು ಇದೊಂದು ರೋಮ್ಯಾಂಟಿಕ್ ಟ್ರಿಪ್ ಎಂಬ ರೀತಿಯಲ್ಲಿ ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಬರುವುದು ಖಂಡಿತ ತಪ್ಪು ಎಂದು ಹೇಳಲಾಗುತ್ತದೆ.

ಇನ್ನು ಮೂರನೆಯದಾಗಿ ನಾವು ಮಾಡಿ ದೊಡ್ಡ ತಪ್ಪು ಎಂದರೆ ಸಾಮಾನ್ಯ ಭಕ್ತಾಭಿಮಾನಿಗಳಂತೆ ಸಾವಿರ ಮೆಟ್ಟಿಲುಗಳನ್ನು ಹತ್ತಿಕೊಂಡು ತಿಮ್ಮಪ್ಪನ ಸಾನಿಧ್ಯವನ್ನು ಪಡೆದು ಬರುವುದನ್ನು ಬಿಟ್ಟು ಬೇರೆ ದೊಡ್ಡ ವ್ಯಕ್ತಿಗಳ ಶಿಫಾರಸ್ಸಿನ ಮೂಲಕ ವಿಶೇಷ ಅತಿಥಿಗಳಂತೆ ಹೋಗಿ ದೇವರ ಆಶೀರ್ವಾದವನ್ನು ಪಡೆದುಕೊಂಡು ಬರುತ್ತೇವೆ. ಈ ಬುಕಿಂಗ್ ದೇವರ ದರ್ಶನ ಮಾಡುವುದು ಖಂಡಿತವಾಗಿಯೂ ನಿಮಗೆ ಯಾವುದೇ ಪುಣ್ಯ ಲಾಭವನ್ನು ತರಲಾರದು. ಏಕೆಂದರೆ ನಿಮ್ಮಂಥೆ ಲಕ್ಷಾಂತರ ಮಂದಿ ಭಕ್ತಾಭಿಮಾನಿಗಳು ದೇವರನ್ನು ಕಾಣಲು ಸರಿಯಾದ ಮಾರ್ಗದಲ್ಲಿ ಬರುತ್ತಾರೆ ನೀವು ವಾಮ ಮಾರ್ಗವನ್ನು ಅನುಸರಿಸುವುದು ಅವರ ಕಾಯುವಿಕೆಗೆ ಇನ್ನಷ್ಟು ಹೆಚ್ಚು ಜೊತೆಯಾಗುತ್ತದೆ. ಹೀಗಾಗಿ ಸರಿಯಾದ ಮಾರ್ಗದಲ್ಲಿ ಹೋಗಿ ದೇವರ ಆಶೀರ್ವಾದ ಪಡೆಯಿರಿ ಖಂಡಿತವಾಗಿ ನಿಮಗೆ ಯಾತ್ರ ಫಲ ಲಭಿಸುತ್ತದೆ.

ಇನ್ನು ನಾಲ್ಕನೆಯದಾಗಿ ತಿರುಪತಿ ಬೆಟ್ಟಕ್ಕೆ ಹತ್ತುವ ಸಂದರ್ಭದಲ್ಲಿ ನಮಗೆ ನಾಲ್ಕು ಬೀದಿ ಗಳು ಕಾಣಸಿಗುತ್ತವೆ. ಸ್ವತಹ ಶ್ರೀ ರಾಮಾನುಜಾಚಾರ್ಯರೇ ಹೇಳುವಂತೆ ಈ ಬೆಟ್ಟ ಸಾಲಿಗ್ರಾಮದ ಸ್ವರೂಪ. ಸಾಲಿಗ್ರಾಮವನ್ನು ನಾವು ಮಹಾವಿಷ್ಣು ವೆಂಬ ಪೂಜ್ಯಭಾವನೆಯಿಂದ ಪೂಜಿಸುತ್ತೇವೆ. ಹೀಗಾಗಿ ಇಲ್ಲಿ ಚಪ್ಪಲಿಯನ್ನು ಹಾಕಿಕೊಂಡು ನಡೆಯುವುದು ಖಂಡಿತವಾಗಿ ನಿಮಗೆ ಪೂಜಾಫಲವನ್ನು ತಂದುಕೊಡುವುದಿಲ್ಲ. ಸ್ವತಹ ರಾಮಾನುಜಾಚಾರ್ಯರ ಇಲ್ಲಿ ಕಾಲಿನಿಂದ ನಡೆಯದೆ ಮಂಡಿಯಿಂದ ನಡೆದುಕೊಂಡು ಬೆಟ್ಟವನ್ನು ಹತ್ತಿದ್ದರು. ಇಲ್ಲಿ ಕೆಲವರು ಕೂಡ ಹೀಗೆ ಅನುಸರಿಸುತ್ತಾರೆ ಆದರೆ ಹೆಚ್ಚಿನ ಮಂದಿ ಇದನ್ನು ಅನುಸರಿಸುವುದಿಲ್ಲ. ಇದನ್ನು ಕೂಡ ಅನುಸರಿಸಿದರೆ ಖಂಡಿತವಾಗಿ ನಿಮಗೆ ಪುಣ್ಯದ ಫಲ ದೊರೆಯುತ್ತದೆ.

Comments are closed.