ಸಾಮಾನ್ಯ ತಳಿಯ ಟೊಮೊಟೊ ಅಲ್ಲ, ಈ ತಳಿಯ ಟೊಮ್ಯಾಟೊ ಬೆಳೆದು ನೋಡಿ ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ. ಕೆಜಿ ಗೆ ಎಷ್ಟು ಬೆಲೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಟೊಮ್ಯಾಟೋ ಬೆಲೆ ಕೆಜಿ ಗೆ ಎಷ್ಟಿರಬಹುದು. ೪೫-೫೦ ರೂಪಾಯಿಗಳು, ಅಥವಾ ಬೆಲೆ ಏರಿಕೆ ಆದಾಗ ಅಬ್ಬಬ್ಬಾ ಅಂದ್ರೆ ೧೫೦ ರೂಪಾಯಿಗಳವರೆಗೂ ಹೋಗಬಹುದು. ಆದರೆ ಈ ತಳಿಯ ಟೊಮ್ಯಾಟೋ ಬೆಲೆ ನೀವಿನ್ನೂ ಕೇಳಿರದಷ್ಟು, ಒಂದು ಕೆಜಿ ಸೇಬುಗಿಂತ ಜಾಸ್ತಿ. ಬರೋಬ್ಬರಿ ೬೦೦ ರೂಪಾಯಿಗಳು ಪ್ರತಿ ಕೆಜಿಗೆ. ಇದನ್ನೇನಾದರೂ ಬೆಳೆದರೆ ಲಕ್ಷ ಲಕ್ಷ ಹಣ ಸಂಪಾದಿಸುವುದು ಗ್ಯಾರಂಟಿ. ಬನ್ನಿ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನೋಡೋಣ.

tomoto | ಸಾಮಾನ್ಯ ತಳಿಯ ಟೊಮೊಟೊ ಅಲ್ಲ, ಈ ತಳಿಯ ಟೊಮ್ಯಾಟೊ ಬೆಳೆದು ನೋಡಿ ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ. ಕೆಜಿ ಗೆ ಎಷ್ಟು ಬೆಲೆ ಗೊತ್ತೇ??
ಸಾಮಾನ್ಯ ತಳಿಯ ಟೊಮೊಟೊ ಅಲ್ಲ, ಈ ತಳಿಯ ಟೊಮ್ಯಾಟೊ ಬೆಳೆದು ನೋಡಿ ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ. ಕೆಜಿ ಗೆ ಎಷ್ಟು ಬೆಲೆ ಗೊತ್ತೇ?? 2

ಅದ್ಯಾವ ರೀತಿಯ ಟೊಮ್ಯಾಟೋಪ್ಪಾ ಅಷ್ಟೋಂದು ದರ ಇರೋದು ಅಂತಾನಾ? ಅದೇ ಚರ್ರಿ ಟೊಮ್ಯಾಟೋ. ಚರ್ರಿ ಟೊಮ್ಯಾಟೊಗೆ ಕೆಜಿಗೆ ೪೦೦-೬೦೦ರೂಪಾಯಿಗಳು. ಹೌದು ಇದನ್ನು ನೀವು ನಂಬಲೇ ಬೇಕು. ನಮ್ಮ ದೇಶಕ್ಕಿಂತ ವಿದೇಶಗಳಲ್ಲಿ ಚರ್ರಿ ಟೊಮ್ಯಾಟೋಗೆ ಬೇಡಿಕೆ ಜಾಸ್ತಿ. ಸದ್ಯ ಮದ್ಯಪ್ರದೇಶದ ಬೆಳೆಗಾರರು ಚರ್ರಿ ಟೊಮ್ಯಾಟೊ ಕೃಷಿ ಮಾಡುತ್ತಿದ್ದು ದೇಶದಿಂದ ದುಬೈ, ಯುಎಸ್ ಎ ಗೆ ರಫ್ತು ಮಾಡಲಾಗುತ್ತದೆ!

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಅಂಬಿಕಾ ಪಟೇಲ್ ಎಂಬ ರೈತ ಚೆರ್ರಿ ಟೊಮೆಟೊ ಬೆಳೆಯುತ್ತಾರೆ. ಇವರು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ ಈ ಟೊಮ್ಯಾಟೊ ಕೃಷಿಯನ್ನು ಮಾಡಿ. ಚರ್ರಿ ಟೊಮ್ಯಾಟೋ ಬೀಜಗಳು ಅತ್ಯಂತ ಚಿಕ್ಕವು. ಹಾಗಾಗಿ ಅವುಗಳನ್ನು ಟ್ರೇಗಳಲ್ಲಿ ಹಾಕಿ ಮೊಳಕೆಯೊಡೆದ ನಂತರ ಹೊಲದಲ್ಲಿ ಬಿತ್ತಲಾಗುತ್ತದೆ. ಇದಕ್ಕೆ ನೀರುಣಿಸಲು ಹನಿ ನೀರಾವರಿ ವಿಧಾನವನ್ನು ಅನುಸರಿಸಲಾಗುತ್ತದೆ. ಅಂಬಿಕಾ ಪಟೇಲ್ ಕೆಲ ವರ್ಷಗಳ ಹಿಂದೆ ಸಾಕಷ್ಟು ಅಧ್ಯಯನ ಮಾಡಿ, ಟೊಮ್ಯಾಟೋ ಬೆಳೆಯ ಬಗ್ಗೆ ಅರಿತು ನಂತರ ಚರ್ರಿ ಟೊಮ್ಯಾಟೊ ಬೆಳೆಯಲು ನಿರ್ಧರಿಸಿದರು.

ಹೆಚ್ಚು ವಿಟಮಿನ್ ಗಳನ್ನು ಹೊಂದಿರುವ ಈ ಟೊಮ್ಯಾಟೋವನ್ನು ಮಳೆಗಾಲದಲ್ಲಿ ಪಾಲಿಹೌಸ್ ನಲ್ಲಿ ಬೆಳೆಯಲಾಗುತ್ತದೆ. ಈ ಹೈಬ್ರೀಡ್ ಟೊಮ್ಯಾಟೋವನ್ನು ಆಗಾಗ ಸೇವಿಸುವುದು ಆರೋಗ್ಯಕ್ಕೂ ಉತ್ತಮ. ಇನ್ನು ಈ ಕೃಷಿ ಬಹಳ ಕಷ್ಟವಲ್ಲ, ಆದರೆ ಸದಾ ತೇವಾಂಶ ಬೇಕಾಗುವ ಕಾರಣ ಹನಿ ನೀರಾವರಿ ಪದ್ಧತಿಯನ್ನೇ ಅನುಸರಿಸಬೇಕು. ಜೊತೆಗೆ ಹೆಚ್ಚಿನ ಕಾಳಜಿ ಮಾಡಬೇಕು. ಇನ್ನು ೬೦ ಸೆ.ಮಿ ಅಂತರದಲ್ಲಿ ಟೊಮ್ಯಾಟೋ ಗಿಡಗಳಿರಬೇಕು. ಸಾಲುಗಳ ಅಂತರ ೨ ಮೀಟರ್ ಗಳವರೆಗೆ ಇರಬೇಕು. ಬಿತ್ತನೆ ಮಾಡಿದ ತಕ್ಷಣ ನೀರುಣಿಸಬೇಕು. ಇನ್ನು ಚರ್ರಿ ಟೊಮ್ಯಾಟೋವನ್ನು ದ್ರಾಕ್ಷಿಯಂತೆ ಪ್ಯಾಕ್ ಮಾಡಿ ರಫ್ತು ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಹೊಂದಿರುವ ಈ ಚರ್ರಿ ಟೊಮ್ಯಾಟೊವನ್ನು ಹೆಚ್ಚೆಚ್ಚು ಬೆಳೆಯುವಲ್ಲಿ ರೈತರು ಆಸಕ್ತಿವಹಿಸುತ್ತಿದ್ದಾರೆ.

Comments are closed.