ಅಪ್ಪಿತಪ್ಪಿ ಈ ಗಿಡ ಎಲ್ಲಾದರೂ ಕಾಣಿಸಿಕೊಂಡರೆ ಮೊದಲು ಈ ಕೆಲಸವನ್ನು ಮಾಡಿ! ತುಂಬೆ ಹೂವಿನ ಚಮತ್ಕಾರ ತಿಳಿದರೆ ಹೂವನ್ನು ಈಗಲೇ ಹುಡುಕಲು ಶುರು ಮಾಡುತ್ತೀರಾ..!!

ನಮಸ್ಕಾರ ಸ್ನೇಹಿತರೇ ಹಳ್ಳಿಗಳಲ್ಲಿಸಿಗುವ ಪ್ರತಿಯೊಂದು ಗಿಡಗಳು, ಬಳ್ಳಿ ಹೂವುಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಹಾಗಾಗಿ ಹಳ್ಳಿಗಳಲ್ಲಿ ಸಣ್ಣ ಪುಟ್ಟ ಖಾಯಿಲೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗದೆ ಮನೆಯಲ್ಲಿಯೇ ಮನೆಮದ್ದುಗಳನ್ನು ತಯಾರಿಸಿ ಸೇವಿಸುತ್ತಾರೆ. ಇನ್ನು ಮಕ್ಕಳಿಗೂ ಕೂಡ ಇವುಗಳನ್ನು ಅಭ್ಯಾಸ ಮಾಡುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಅವರ ದೇಹದಲ್ಲಿ ಔಷಧಗಳು ಸೇರಿಕೊಳ್ಳುವುದನ್ನು ತಪ್ಪಿಸಬಹುದು. ನಾವಿಂದು ಮಾಹಿತಿ ನೀಡುತ್ತಿರುವ ವಿಷಯ ಹಳ್ಳಿಗಳಲ್ಲಿ ಸುಲಭವಾಗಿ ಸಿಗಬಲ್ಲ ತುಂಬೆ ಗಿಡದ ಬಗ್ಗೆ!

ತುಂಬೆ ಗಿಡ ಅತ್ಯಂತ ಚಿಕ್ಕದಾದ ಸಣ್ಣ ಎಲೆಗಳನ್ನು ಹೊಂದಿರುವ ಗಿಡ. ಇನ್ನು ಹೂವುಗಳು ಬಿಳಿಯ ಬಣ್ಣದಲ್ಲಿ ತೆಳುವಾಗಿ, ತುಸು ಉದ್ದವಾಗಿ ಇರುತ್ತವೆ. ಇನ್ನು ಕೆಲವು ಕಡೆ ಬಿಳಿಯ ಬಣ್ಣವನ್ನು ಹೊರತುಪಡಿಸಿ ಬೇರೆ ಬಣ್ಣದ ತುಂಬೆ ಹೂವನ್ನು ಕಾಣಬಹುದು, ತುಂಬೆ ಗಿಡ ಚಿಕ್ಕದಾದರೂ ಅದರಲ್ಲಿರುವ ಔಷಧೀಯ ಗುಣ ಅಗಾಧ! ಇದರ ಜೊತೆಗೆ ತುಂಬೆ ಗಿಡ ಶಿವನಿಗೂ ಪ್ರಿಯವಾದ ಗಿಡ ಹಾಗಾಗಿ ಶಿವನಿಗೂ ತುಂಬೆ ಹೂವುಗಳನ್ನು ಅರ್ಪಿಸಲಾಗುತ್ತದೆ.

ತುಂಬೆ ಗಿಡದ ಪ್ರಯೋಜನಗಳು ಹಲವಾರು. ಈ ಔಷಧಿ ಸಸ್ಯ ಹಲವು ಸಣ್ಣ ಪುಟ್ಟ ಖಾಯಿಲೆಗಳನ್ನು ಕೂಡಲೇ ನಿವಾರಿಸಿಬಿಡುತ್ತದೆ. ನಿಮಗೆ ಪದೇ ಪದೆ ಜ್ವರ ಬರುತ್ತಿದ್ದರೆ, ತುಂಬೆ ರಸ ಹಾಗೂ ಕಾಳು ಮೆಣಸಿನ ಪುಡಿ ಸೇರಿಸಿ ಸೇವಿಸಬಹುದು. ಇನ್ನು ಮೈ ಕೈ ಅಲರ್ಜಿಗೆ ತುಂಬೇ ರಸವನ್ನು ಲೇಪಿಸುವುದು ಉತ್ತಮ. ಇನ್ನು ಸೊಳ್ಳೆಯಂಥ ಕೀಟಗಳ ಕಾಟವಿದ್ದರೆ ಮನೆಯಲ್ಲಿ ತುಂಬೆ ಎಲೆಯನ್ನು ಒಣಗಿಸಿ ಅದರಿಂದ ಹೊಗೆಯನ್ನು ಹಾಕಿದರೆ ಯಾವ ಕೀಟವೂ ಮನೆಯ ಹತ್ತಿರವೂ ಸುಳಿಯಲಾರದು. ಇನ್ನು ಸಂಧಿವಾತ, ಗಂಟಲು ನೋವು, ನೆಗಡಿ ಮೊದಲಾದ ಸಮಸ್ಯೆಗೆ ರಾಮಬಾಣ ತುಂಬೆ ಗಿಡ. ಹಳ್ಳಿಯ ಈ ಔಷಧಿ ಸಸ್ಯವನ್ನು ಪೇಟೆಯಲ್ಲಿಯೂ ನಿಮ್ಮ ಮನೆಯಲ್ಲಿ ಕುಂಡದಲ್ಲಿ ನೆಡಬಹುದು. ಹಾಗಾಗಿ ಹಳ್ಳಿಯವರು ಮಾತ್ರವಲ್ಲ ಪೇಟೆಯ ಜನರೂ ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Comments are closed.