ತುರಿಕೆ, ನೆವೆ ಜಾಸ್ತಿಯಾಗಿದ್ರೆ ಈ ಒಂದೇ ಒಂದು ಮನೆಮದ್ದು ಸಾಕು 10 ನೇ ನಿಮಿಷದಲ್ಲಿ ಉಪಶಮನ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಚರ್ಮದ ಅಲರ್ಜಿಯಿಂದ ಉಂಟಾಗುವಂಥದ್ದು ಕಜ್ಜಿ. ಇದರಿಂದ ಚರ್ಮದ ಮೇಲೆ ಗಾಯ ಅಥವಾ ಗುಳ್ಳೆ, ಅಥವಾ ಯಾವುದಾದರೂ ಒಂದು ಭಾಗ ಕೆಂಪಗಾಗುವುದು ಹಾಗೂ ಆ ಭಾಗದಲ್ಲಿ ತುರಿಕೆ ಉಂಟಾಗುವುದು. ಈ ಎಲ್ಲವೂ ಕಜ್ಜಿಯ ಲಕ್ಷಣಗಳು. ದೇಹದ ಯಾವುದೇ ಭಾಗದಲ್ಲಿ ತುರಿಕೆ ಉಂಟಾದರೆ ಅದರಷ್ಟು ಹಿಂಸೆ ಇನ್ನೊಂದಿಲ್ಲ. ಅದರಲ್ಲೂ ನಾಲ್ಕು ಜನರಿರುವಾಗ ತುರಿಕೆ ಅಥವಾ ನವೆ ಉಂಟಾದರೆ ಅದು ನಮಗೆ ಮುಜುಗರವನ್ನು ಉಂಟುಮಾಡುತ್ತದೆ. ನವೆ ಅಥವಾ ಕಡಿತ ಅಲರ್ಜಿಗೆ ಸಂಬಂಧಿಸಿದ್ದೇ ಆಗಿದ್ದಲ್ಲಿ ಅದು ದೀರ್ಘಕಾಲದ ವರೆಗೆ ಹಾಗೆಯೇ ಇರುತ್ತದೆ ಹಾಗೂ ಕ್ರಮೇಣ ದೇಹದ ಒಂದು ಭಾಗದಿಂದ ಇತರ ಭಾಗಗಳಿಗೂ ಹಬ್ಬಬಹುದು. ಹಾಗಾಗಿ ಇದಕ್ಕೆ ಔಷಧವನ್ನು ಮಾಡುವುದು ತುಂಬಾನೇ ಮುಖ್ಯ.

ಸ್ನೇಹಿತರೆ, ಸಾಕಷ್ಟು ಮಂದಿ ತುರಿಕೆ ಉಂಟಾದರೆ ವೈದ್ಯರ ಬಳಿ ಹೋಗುವುದೇ ಇಲ್ಲ. ಹೀಗಾದಾಗ ಇದು ಬೇರೆ ಬೇರೆ ರೂಪ ಪಡೆದುಕೊಳ್ಳಬಹುದು. ಒಂದು ವೇಳೆ ವೈದ್ಯರ ಬಳಿ ಹೋಗಲು ನಿಮಗಿಷ್ಟವಿಲ್ಲದಿದ್ದರೆ ಮನೆಯಲ್ಲಿಯೇ ಮಾಡಬಹುದಾದ ಕೆಲವು ಮದ್ದುಗಳು ಈ ಸಮಸ್ಯೆಗೆ ಉಪಶಮನ ನೀಡಬಹುದು. ಹಾಗಾಗಿ ನಾವಿಲ್ಲಿ ಹೇಳುವ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ.

ಈ ಮನೆಮದ್ದು ತಯಾರು ಮಾಡಲು ಬೇಕಾಗುರುವುದು, ಬೇವಿನ ಎಲೆಗಳು, ಅಲೋವೆರಾ ಜೆಲ್, ಕಲ್ಲುಸಕ್ಕರೆ ಪುಡಿ ಹಾಗೂ ಅರಿಶಿನ ಪುಡಿ. ಮೊದಲಿಗೆ ಬೇವಿನ ಎಲೆಗಳನ್ನು ನುಣ್ಣಗೆ ಜಜ್ಜಿಕೊಳ್ಳಿ. ಇದು ಒಂದು ಪೇಸ್ಟ್ ನ ಹದಕ್ಕೆ ಬಂದಕೂಡಲೆ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಅಲೋವೆರಾ ಜೆಲ್, ಕಲ್ಲು ಸಕ್ಕರೆ ಪುಡಿ ಹಾಗೂ ಅರಿಶಿನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರನವನ್ನು ತುರಿಕೆ ಅಥವಾ ನವೆ ಇರುವ ಭಾಗಕ್ಕೆ ಹಚ್ಚಿ ಹಾಗೆಯೇ ಬಿಡಿ. ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ತುರಿಕೆ ಹೇಳಹೆಸರಿಲ್ಲದಂತೆ ನಿವಾರಣೆಯಾಗುತ್ತದೆ.

Comments are closed.