ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿ ಉಪೇಂದ್ರ ಹಾಗೂ ಪ್ರಿಯಾಂಕಾ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಕೂಡ ಇವರ ನಿರ್ದೇಶನ ಎಂದರೆ ಒಮ್ಮೆ ಎಲ್ಲಾ ಪ್ರೇಕ್ಷಕರು ತುದಿಗಾಲಲ್ಲಿ ನಿಂತು ಕಾಯುವುದು ಮಾತ್ರ ಖಂಡಿತ. ಅಷ್ಟರಮಟ್ಟಿಗೆ ಇವರ ನಿರ್ದೇಶನದ ತಾಕತ್ತು ನಮ್ಮ ಭಾರತೀಯ ಚಿತ್ರರಂಗದಲ್ಲಿ ಇದೆ. ಹೌದು ಸ್ನೇಹಿತರೆ ನಾವು ಹೇಳುತ್ತಿರುವುದು ಯಾವ ರಾಜಮೌಳಿ ಕುರಿತು ಅಲ್ಲ. ನಾವು ಮಾತನಾಡುತ್ತಿರುವುದು ನಮ್ಮ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಹಾಗೂ ಸೂಪರ್ ಸ್ಟಾರ್ ಎಂದೇ ಕರೆಯಲಾಗುವ ಉಪೇಂದ್ರರವರ ಕುರಿತಂತೆ.

ಹೌದು ಸ್ನೇಹಿತರೆ ಓಂ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಓಂಕಾರವನ್ನು ವಿಶ್ವಾದ್ಯಂತ ಹರಡಿದಂತಹ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ. ಇನ್ನು ನಟನೆಯಲ್ಲಿ ಕೂಡ ಅವರು ನಿಸ್ಸೀಮರು. ಯಾವುದೇ ಪಾತ್ರಗಳನ್ನಾಗಲಿ ಯಾವುದೇ ಚಿತ್ರಗಳನ್ನಾಗಲೀ ನಟನೆಯಲ್ಲಿ ಆಗಲಿ ನಿರ್ದೇಶನದಲ್ಲಿ ಆಗಲಿ ರಿಯಲ್ ಸ್ಟಾರ್ ಉಪೇಂದ್ರ ರವರು 100% ನ್ಯಾಯವನ್ನು ಒದಗಿಸಬಲ್ಲಂತಹ ವ್ಯಕ್ತಿತ್ವ. ಕಾಶಿನಾಥ್ ಅವರ ಗರಡಿಯಲ್ಲಿ ಪಳಗಿದ ಅಂತಹ ಈ ಪ್ರತಿಭೆ ಕನ್ನಡ ಚಿತ್ರರಂಗದ ಇಂದಿನ ಜನರೇಶನ್ ಅಲ್ಲಿ ನಿರ್ದೇಶಕನಾಗಿ ಹಾಗೂ ನಾಯಕನಟನಾಗಿ ಕೂಡ ಯಶಸ್ಸು ಸಾಧಿಸಿದವರು. ಇನ್ನೂ 1998 ರಲ್ಲಿ ಈ ಚಿತ್ರದ ಮೂಲಕ ನಾಯಕ ಹಾಗೂ ನಿರ್ದೇಶಕ ಎರಡು ಕೂಡ ಆಗಿ ತನ್ನ ಪ್ರತಿಭೆಯನ್ನು ಕನ್ನಡಿಗರೆದುರು ಸಾಬೀತುಪಡಿಸಿದರು.

ಇನ್ನು ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕನ್ನಡ ಚಿತ್ರರಂಗದ ನಟ ಎಂದರೆ ಅದು ಖಂಡಿತವಾಗಿಯೂ ರಿಯಲ್ ಸ್ಟಾರ್ ಉಪೇಂದ್ರ ಅವರು. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ, 2003 ರಲ್ಲಿ ಪಶ್ಚಿಮ ಬಂಗಾಳ ಮೂಲದ ನಟಿ ಪ್ರಿಯಾಂಕ ಉಪೇಂದ್ರ ರವರನ್ನು ಮದುವೆಯಾಗುತ್ತಾರೆ. ಇವರು ಎಚ್ ಟು ಒ ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿರುತ್ತಾರೆ.

ಇನ್ನು ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಂಪತಿಗಳಿಗೆ ಆಯುಷ ಹಾಗೂ ಐಶ್ವರ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ಇನ್ನು ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ನಡುವಿನ ವಯಸ್ಸಿನ ಅಂತರವನ್ನು ತಿಳಿಯುವುದಾದರೆ ರಿಯಲ್ ಸ್ಟಾರ್ ಉಪೇಂದ್ರರವರಿಗೆ 52 ವರ್ಷ ವಯಸ್ಸಾಗಿದೆ. ಇನ್ನು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ರವರಿಗೆ 43 ವರ್ಷ ವಯಸ್ಸಾಗಿದೆ. ಇವರಿಬ್ಬರ ನಡುವೆ 9 ವರ್ಷದ ವಯಸ್ಸಿನ ಅಂತರವಿದ್ದರೂ ಕೂಡ ಇಬ್ಬರು ಕೂಡ ಹಲವಾರು ವರ್ಷಗಳಿಂದ ಸುಖ ಸಂಸಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಜೋಡಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.