ಪಾಪ ಸೈಲೆಂಟ್ ವೈಷ್ಣವಿ ರವರ ತಾಯಿಯ ಕುರಿತು ಶಮಂತ್ ಹೀಗಾ ಹೇಳೋದು?? ಖಡಕ್ ವಾರ್ನಿಂಗ್ ನೀಡಿದ ವೈಷ್ಣವಿ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಿಗ್ ಬಾಸ್ ಆರಂಭವಾಗಿದ್ದು, ಸ್ಪರ್ದಿಗಳು ಈ ಬಾರಿ ಕೊಂಚ ವಿಭಿನ್ನವಾಗಿ ಕಾಣುತ್ತಿದ್ದಾರೆ. ಯಾಕೆಂದರೆ ಜನರ ಪ್ರತಿಕ್ರಿಯೆ ಯನ್ನು ನೋಡಿಕೊಂಡು ಮತ್ತೆ ಒಳಗಡೆ ಹೋಗಿರುವ ಕಾರಣ ಜನರ ಮೆಚ್ಚುಗೆ ಗಳಿಸಲು ಸಕಲ ಪ್ರಯತ್ನಗಳನ್ನು ಕೂಡ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಲಕ್ ಮೇಲೆ ಉಳಿದುಕೊಳ್ಳುತ್ತಿರುವ ಶಮಂತ್ ಗೌಡ ರವರು ಕೂಡ ಈ ಬಾರಿ ಹೆಚ್ಚಿನ ಸಮಯ ತಮ್ಮನ್ನು ತಾವು ಸ್ಪರ್ದಿಗಳ ಜೊತೆ ಮಾತನಾಡಿ, ಹಾಸ್ಯ ಚಟಾಕಿ ಹಾರಿಸಿ ಪ್ರೇಕ್ಷಕರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ ಇದೀಗ ಇದೇ ರೀತಿ ತಮಾಷೆ ಮಾಡಲು ಹೋಗಿ ಇದೀಗ ಶಮಂತ್ ರವರು ಹೊಸ ಯಡವಟ್ಟು ಮಾಡಿಕೊಂಡಿದ್ದಾರೆ. ಆದರೆ ಇದು ತಮಾಷೆ ಮಾಡುವ ವಿಚಾರವಲ್ಲ ಎಂಬುದು ಎಲ್ಲ ವಾದವಾಗಿದ್ದು, ಶಮಂತ್ ರವರು ತಮ್ಮ ತಪ್ಪನ್ನು ಒಪ್ಪಿಕೊಂಡು ಸಾರೀ ಕೇಳಿದ್ದರೇ ಎಲ್ಲ ಮುಗಿದು ಹೋಗುತ್ತಿತ್ತೇನೋ, ಆದರೆ ಅದಕ್ಕೆ ಸಮಜಾಯಿಸಿ ಕೊಡಲು ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಸೃಷ್ಟಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯ ಕೂಡ ತಿಳಿಸುವುದನ್ನು ಮರೆಯಬೇಡಿ.

ಹೌದು ಸ್ನೇಹಿತರೇ, ವೈಷ್ಣವಿ ರವರು ಮೇಕ್ ಅಪ್ ಮಾಡಿಕೊಳ್ಳುವ ಸಮಯದಲ್ಲಿ ಎಷ್ಟು ಚೆಂದ ಇವಳು.. ಯಾವ ರಾಣಿ ಮಗಳು ಎಂದು ಹಾಡನ್ನು ಹೇಳುತ್ತಿದ್ದರು. ಆಗ ಮದ್ಯದಲ್ಲಿ ಬಾಯಿ ಹಾಕಿದ ಶಮಂತ್ ರವರು ಯಾವ ರಾಣಿ ಮಗಳು ಅಂತ ವೈಷ್ಣವಿ ಹೇಳಿದ ಕೂಡಲೆ ಡವ್ ರಾಣಿ ಮಗಳು ಎಂದು ಹೇಳಿ ಬಿಟ್ಟರು. ಇದಕ್ಕೆ ವೈಷ್ಣವಿ ಖಾರವಾಗಿ ಪ್ರತಿಕ್ರಿಯೆ ನೀಡಿ, ನನ್ನ ಬಗ್ಗೆ ಮಾತನಾಡಿ, ಇದು ನನ್ನ ತಾಯಿಯ ಬಗ್ಗೆ ಮಾತನಾಡಿದಂತೆ ಇದೇ, ನನ್ನ ಕುಟುಂಬದ ಬಗ್ಗೆ ಬೇಡ ಎಂದು ಹೇಳಿದರು. ಇದಕ್ಕೆ ಸಮಜಾಯಿಸಿ ನೀಡಿದ ಶಮಂತ್ ರವರು, ಲೈನ್ಸ್ ಮ್ಯಾಚ್ ಮಾಡಿದೆ ಅಷ್ಟೇ. ನಿಮ್ಮ ತಾಯಿ ಬಗ್ಗೆ ನಾನು ಮಾತನಾಡಿಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು.

Comments are closed.