ವಿದುರ ನೀತಿ: ಮಹಾತ್ಮ ವಿದುರನ ಈ 5 ನೀತಿಗಳು ಸಂತೋಷದ ಜೀವನದ ರಹಸ್ಯವನ್ನು ತಿಳಿಸುತ್ತವೆ

ನಮಸ್ಕಾರ ಸ್ನೇಹಿತರೇ ವಿದುರ ಮಹಾಭಾರತದ ಒಂದು ದಿಗ್ಗಜ ಪಾತ್ರ. ಬದುಕಿನ ರಸವನ್ನ ತನ್ನ ರಸವತ್ತಾದ ನಿರೂಪಣೆಗಳ ಮೂಲಕ ಪ್ರಸ್ತುತಪಡಿಸಿದವನು. ವಿದುರ ಎಂದರೇ ಬುದ್ದಿವಂತ ಎಂಬ ಕಲ್ಪನೆ ಅಂದಿನ ಜನಮಾನಸದಲ್ಲಿ ರೂಪುಗೊಂಡಿತ್ತು. ವಿದುರ ತನ್ನ ನೀತಿಗಳಿಂದಲೇ ಹಸ್ತಿನಾಪುರದಲ್ಲಿ ಜನಪ್ರಿಯನಾಗಿದ್ದ ವ್ಯಕ್ತಿ. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ತನ್ನೊಂದಿಗೆ ಸದಾ ಸಂತೋಶ, ಸುಖಗಳನ್ನು ಕೊಂಡೊಯ್ಯಬೇಕೆಂದರೇ ಈ ಐದು ನೀತಿಗಳನ್ನ ಕಡ್ಡಾಯವಾಗಿ ಪಾಲಿಸಬೇಕೆಂದು ಹೇಳುತ್ತಾನೆ. ಹಾಗಾದರೇ ಆ ಐದು ವಿದುರ ನೀತಿಗಳು ಯಾವುವು ಎಂದು ತಿಳಿಯೋಣ ಬನ್ನಿ.

ಮೊದಲನೆಯದಾಗಿ ತ್ಯಜಿಸುವಿಕೆ ಅಥವಾ ತ್ಯಾಗ : ಮನುಷ್ಯ ತನ್ನಲ್ಲಿರುವ ಕೆಟ್ಟ ಗುಣಗಳನ್ನ, (ಆಲಸಿತನ, ನಿದ್ರೆ, ಕ್ರೋಧ, ಕಾಮ,ಮತ್ಸರ ಭಯ)ಆಸೆಗಳನ್ನ ತ್ಯಜಿಸಬೇಕು. ಹಾಗೂ ಕೆಲವೊಮ್ಮೆ ತನಗೆ ಬಂದ ಅವಕಾಶಗಳನ್ನ ಇನ್ನೊಬ್ಬರಿಗೆ ಬಿಟ್ಟುಕೊಡಬೇಕು. ಅದೇ ತ್ಯಾಗ. ತ್ಯಾಗದಿಂದ ಬಂದ ಫಲ ಶ್ರೇಷ್ಠವಾಗಿರುತ್ತದೆ ಹಾಗೂ ಬಹುಕಾಲ ಉಳಿಯುತ್ತದೆ.

ಎರಡನೆಯದಾಗಿನಂಬಿಕೆ : ಭಕ್ತಿಗೆ ನಂಬಿಕೆಯೇ ದಾರಿದೀಪ. ಜೀವನದಲ್ಲಿ ನಂಬಿಕೆಯೇ ಬಹಳ ಮುಖ್ಯ. ನಂಬಿ ಕೆಟ್ಟವರಿಲ್ಲವೋ ಎಂಬ ನಾಣ್ಣುಡಿಯಂತೆ, ಜೀವನದಲ್ಲಿ ಸ್ನೇಹಿತ, ದೇವರನ್ನು ನಂಬಬೇಕು ಎಂದು ಹೇಳುತ್ತಾನೆ.

ಮೂರನೆಯದಾಗಿ ಕ್ಷಮೆ : ತಪ್ಪು ಮಾಡೋದ ಸಹಜ, ತಿದ್ದಿ ನಡಿಯೋನು ಮನುಜ ಎಂಬ ನಾಣ್ಣುಡಿಯಂತೆ, ತನಗೆ ತಿಳಿದೋ ಅಥವಾ ತಿಳಿಯದೆಯೋ ಯಾರಾದರೂ ತಪ್ಪೇಸಗಿದ್ದರೇ ಅವರನ್ನ ಕ್ಷಮಿಸುವ ಗುಣ ಹೊಂದಿರಬೇಕು. ದ್ವೇಷವೊಂದನ್ನೇ ಸಾಧಿಸುವದರಿಂದ ಜೀವನದಲ್ಲಿ ಏನನ್ನೂ ಸಾಧಿಸಲು ಆಗುವುದಿಲ್ಲ. ಹಾಗಾಗಿ ಕ್ಷಮಿಸುವ ಗುಣ ಹೊಂದಿರಬೇಕು.

ಇನ್ನು ನಾಲ್ಕನೆಯದಾಗಿ ದುರಾಸೆಯಿಂದ ದೂರವಿರಿ : ಇರುವ ಭಾಗ್ಯವ ನೆನೆದು ಹರುಷದಿಂದಿರಬೇಕು. ಆಸೆಯೇ ದುಖಃಕ್ಕೆ ಮೂಲ ಎಂಬಂತೇ ಮನುಷ್ಯನ ದುರಾಸೆಯೇ ಎಲ್ಲ ಕೆಡುಕುಗಳಿಗೆ ಮೂಲ.

ಕೊನೆಯದಾಗಿ ಕೋಪದಿಂದ ದೂರವಿರಿ : ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೇ, ನೆರೆಮನೆಯ ಸುಡದಯ್ಯಾ ಎಂಬಂತೆ, ಕೋಪ ಎಂಬುದು ನಮ್ಮೊಳಗಿನ ಶತ್ರು. ಅದು ನಮ್ಮನ್ನೇ ನಾಶಗೊಳಿಸುತ್ತದೆ. ಅದರಿಂದ ನಮಗಾಗುವ ನಷ್ಟವೇ ಜಾಸ್ತಿ ಹೊರತು ಲಾಭ ಕಡಿಮೆ. ಹಾಗಾಗಿ ಕೋಪವನ್ನು ತ್ಯಜಿಸಬೇಕು ಎಂದು ವಿದುರ ಸಲಹೆ ನೀಡುತ್ತಾನೆ.

Comments are closed.