News from ಕನ್ನಡಿಗರು

ಸುದೀಪ್ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ, ವಿಕ್ರಾಂತ್ ರೋಣ ಬಿಡುಗಡೆಯಾಗುವುದು ಯಾವಾಗ ಗೊತ್ತಾ?? ಲೀಕ್ ಆಯ್ತು ರಿಲೀಸ್ ಡೇಟ್.

109

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಭಾರತೀಯ ಚಿತ್ರರಂಗದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದೆ. ಇದಕ್ಕೆ ಅಡಿಪಾಯ ಹಾಕಿಕೊಟ್ಟಿದ್ದು ಕೆಜಿಎಫ್ ಚಿತ್ರ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಆದರೆ ಈಗ ಕನ್ನಡದ ಒಂದು ಹೆಮ್ಮೆಯ ಚಿತ್ರ ಮಾಡುತ್ತಿರುವ ಸದ್ದು ನೋಡಿದರೆ ಕೆಜಿಎಫ್ ಅನ್ನು ಕೂಡ ಮೀರಿಸಲಿದೆ ಎನ್ನುವ ಭಾವನೆ ಮೂಡಿದಂತಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಪ್ಯಾನ್ ವರ್ಲ್ಡ್ ಚಿತ್ರ ವಿಕ್ರಾಂತ್ ರೋಣ ಈಗಾಗಲೇ ಚಿತ್ರದ ವಿಡಿಯೋ ತುಣುಕನ್ನು ಬುರ್ಜ್ ಖಲೀಫಾ ದ ಮೇಲೆ ಬಿಡುಗಡೆ ಮಾಡಿದ ಮೇಲೆ ಜಾಗತಿಕವಾಗಿ ಸದ್ದು ಮಾಡುತ್ತಿದೆ. 14ಕ್ಕೂ ಅಧಿಕ ಭಾಷೆಗಳಲ್ಲಿ 50ಕ್ಕೂ ಅಧಿಕ ದೇಶಗಳಲ್ಲಿ ಬಿಡುಗಡೆಯಾಗುವ ತಯಾರಿಯನ್ನು ಚಿತ್ರತಂಡ ಈಗಲೇ ಮಾಡಿದೆ. ಚಿತ್ರ 3d ಯಲ್ಲಿ ಬರುತ್ತಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ರವರ ಜೊತೆಗೆ ನಿರುಪ್ ಭಂಡಾರಿ ನೀತ ಅಶೋಕ್ ಹಾಗೂ ಬಾಲಿವುಡ್ ಬೆಡಗಿ ಜಾಕ್ವಲಿನ್ ಫರ್ನಾಂಡೀಸ್ ಕೂಡ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಜಿ ಸಂಸ್ಥೆ ವಿಕ್ರಾಂತ್ ರೋಣ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ಕಂಡು ಕೇಳರಿಯದ ಬೆಲೆಗೆ ಕೊಂಡುಕೊಂಡಿದೆ.

ಬಿಡುಗಡೆಗೆ ಮುನ್ನವೇ ಇಷ್ಟೊಂದು ದಾಖಲೆಯನ್ನು ನಿರ್ಮಿಸುತ್ತಿರುವ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯಾದ ಮೇಲೆ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುವುದು ಗ್ಯಾರಂಟಿ. ಇನ್ನು ಕೋಟಿಗೊಬ್ಬ 3 ಚಿತ್ರದ ನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರು ಕಾಯುತ್ತಿದ್ದಾರೆ. ಬಲ್ಲಮೂಲಗಳ ಪ್ರಕಾರ ಕಿಚ್ಚ ಸುದೀಪ್ ನಟನೆಯ ಹಾಗೂ ಜಾಕ್ ಮಂಜುನಾಥಗೌಡ ನಿರ್ಮಾಣದ ವಿಕ್ರಾಂತ ರೋಣ ಚಿತ್ರ 2022 ರ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆಯಂತೆ. ಹಲವಾರು ದೊಡ್ಡ ದೊಡ್ಡ ಚಿತ್ರಗಳ ನಡುವೆ ಬಿಡುಗಡೆಯಾಗುವ ಸಾಹಸವನ್ನು ಕೈಗೊಂಡಿರುವ ವಿಕ್ರಾಂತ್ ರೋಣ ಚಿತ್ರ ಗೆದ್ದು ಜಯಶಾಲಿಯಾಗಿ ಬರಲಿ ಎಂದು ಹಾರೈಸೋಣ.

Leave A Reply

Your email address will not be published.