ವಿನೋದ್ ರಾಜ್ ಅವರನ್ನು ಮೂಲೆಗುಂಪು ಮಾಡಿದ್ದು ಯಾರು ಎಂಬುದನ್ನು ಹೇಳಿದ ನಟಿ ಲೀಲಾವತಿ ಅಮ್ಮ?? ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಪ್ರತಿಭೆ ಇದ್ದರೂ ಕೂಡ ಚಿತ್ರರಂಗದಲ್ಲಿ ಅವಕಾಶವಿಲ್ಲದೆ ಮೂಲೆಗುಂಪಾದವರು ಪಟ್ಟಿಯಲ್ಲಿ ನಟಿ ಲೀಲಾವತಿಯವರ ಮಗ ವಿನೋದ್ ರಾಜ್ ಅವರು ಮೊದಲಿಗೆ ಕಾಣಿಸಿಕೊಳ್ಳುತ್ತಾರೆ. ಹೌದು ಸ್ನೇಹಿತರೆ ನಟಿ ಲೀಲಾವತಿಯವರು ಅಂದಿನ ಕಾಲದಲ್ಲಿ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿ ಮೆರೆದವರು. ನಂತರ ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟಿಯಾಗಿ ಸಕ್ರಿಯರಾಗಿದ್ದವರು. ಇನ್ನು ಅವರ ಮಗನಾಗಿರುವ ವಿನೋದ್ ರಾಜ್ ರವರು ಕೂಡ ಕನ್ನಡ ಚಿತ್ರರಂಗದಲ್ಲಿ ತಾಯಿಯ ಹೆಸರನ್ನು ಬಳಸಿಕೊಳ್ಳದೆ ತಮ್ಮ ಸ್ವಂತ ಪರಿಶ್ರಮದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಡ್ಯಾನ್ಸ್ ಅಂದರೆ ವಿನೋದ್ ರಾಜ್ ಅವರು ಎಂದು ಹೇಳುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ವಿನೋದ್ ರಾಜ್ ರವರ ನಟನೆ ಹಾಗೂ ಡ್ಯಾನ್ಸ್ ಕನ್ನಡಿಗರಿಗೆ ಇಷ್ಟವಾಗಿತ್ತು ಆದರೂ ಕೂಡ ಅವರು ಕನ್ನಡ ಚಿತ್ರರಂಗದಲ್ಲಿ ಬರಬರುತ್ತಾ ಮೂಲೆಗುಂಪಾದರು. ಇತ್ತೀಚಿನ ದಿನಗಳಲ್ಲಿ ಲೀಲಾವತಿಯವರು ಸಂದರ್ಶನ ಒಂದಕ್ಕೆ ಪ್ರತಿಕ್ರಿಯಿಸುತ್ತಾ ತಮ್ಮ ಮಗ ವಿನೋದ್ ರಾಜ್ ರನ್ನು ಮೂಲೆಗುಂಪು ಮಾಡಲು ಕಾರಣ ಯಾರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಹೌದು ಸ್ನೇಹಿತರೆ ಇತ್ತೀಚೆಗಷ್ಟೇ ತಮ್ಮ ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ಬಡಜನರಿಗೆ ಔಷಧಿ ಹಾಗೂ ಆಹಾರ ಪದಾರ್ಥಗಳನ್ನು ವಿತರಿಸುವ ಸಂದರ್ಭದಲ್ಲಿ ಈ ಪ್ರಶ್ನೆಗೆ ಲೀಲಾವತಿಯವರು ನನ್ನ ಮಗನನ್ನು ಗಾಂಧಿನಗರದ ಮಂದಿ ಮೂಲೆಗುಂಪು ಮಾಡಿದ್ದಾರೆ ಎಂದು ಹೇಳಿದ್ದಾರೆ. ಯಾಕೆ ಅವನು ನನ್ನ ಮಗನೆಂದು ನೀವು ಅವನನ್ನು ಮೂಲೆಗುಂಪು ಮಾಡಿದ್ದೀರಾ ಎಂದು ಪ್ರಶ್ನೆ ಕೂಡ ಹಾಕಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ ಸ್ನೇಹಿತರೆ.

Comments are closed.