ವಿರಾಟ್ ಕೊಹ್ಲಿಯನ್ನ ನಾಯಕತ್ವದಿಂದ ಇಳಿಸಿದರೇ, ಭಾರತ ತಂಡದ ಮೇಲಾಗುವ ಮೂರು ಕೆಟ್ಟ ಪರಿಣಾಮಗಳು ಯಾವುವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾಯಕ ವಿರಾಟ್ ಕೊಹ್ಲಿ ಟಿ 20 ನಾಯಕತ್ವದಿಂದ ಕೆಳಗಿಳಿಯುವುದು ಖಚಿತವಾದ ನಂತರ ಈಗ ತಂಡದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಚರ್ಚೆಗಳು ಜೋರಾಗಿವೆ. ಹಲವಾರು ಅಭಿಪ್ರಾಯಗಳ ಪ್ರಕಾರ, ತಂಡಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಮಾತು ಕೇಳಿಬರುತ್ತಿದೆ. ಅದಲ್ಲದೇ ಈ ವಿಶ್ವಕಪ್ ಮುಗಿದ ಆರು ತಿಂಗಳೊಳಗೆ ಐಸಿಸಿ ಮತ್ತೊಂದು ಟಿ20 ವಿಶ್ವಕಪ್ ನ್ನು ಆಯೋಜನೆ ಮಾಡಿದೆ. ಆ ಆರು ತಿಂಗಳೊಳಗೆ ಭಾರತ ಹೆಚ್ಚೆಂದರೇ ಐದು ಪಂದ್ಯಗಳನ್ನ ಆಡಬಹುದು. ಅದಕ್ಕೆ ನಾಯಕತ್ವ ಬದಲಾಯಿಸುವುದಾದರೂ ಏಕಿತ್ತು ಎಂಬ ಪ್ರಶ್ನೆ ಕೇಳಲಾರಂಭಿಸಿದೆ.

ಇನ್ನು ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪದಾರ್ಪಣೆ ಮಾಡಿ ಎಲ್ಲಾ ಮೂರು ಮಾದರಿ ಸೇರಿ 405 ಪಂದ್ಯಗಳನ್ನ ಆಡಿದ್ದಾರೆ. ಅದರಲ್ಲಿ ನಾಯಕನಾದ ಮೇಲೆ ಕೊಹ್ಲಿ ಹೆಚ್ಚು ಯಶಸ್ಸು ಕಂಡಿದ್ದಾರೆ. ಅದೆಷ್ಟೋ ಶತಕಗಳು ನಾಯಕನಾದ ಮೇಲೆ ಕೊಹ್ಲಿ ಬ್ಯಾಟ್ ನಿಂದ ಹರಿದು ಬಂದಿದೆ. ಇನ್ನು ಈ ಎರಡು ವರ್ಷಗಳಲ್ಲಿ ಕೊಹ್ಲಿಯ ಬ್ಯಾಟ್ ನಿಂದ ಶತಕ ಬರಲಿಲ್ಲ, ಹಾಗಂತ ಬ್ಯಾಟಿನಿಂದ ರನ್ನುಗಳು ಸಲೀಸಾಗಿ ಬಂದಿವೆ. ಹಾಗಾಗಿ ಇತರ ಆಟಗಾರರಂತೆ ನಾಯಕ ಕೊಹ್ಲಿಯ ಫಾರ್ಮ್ ಬಗ್ಗೆ ಬಿಸಿಸಿಐ ತೀವ್ರ ಚಿಂತೆ ಮಾಡುವುದು ಬೇಡ ಎಂದು ಹೇಳಲಾಗಿದೆ.

ಇನ್ನು ಭಾರತ ತಂಡ ಕಳೆದುಕೊಳ್ಳುವುದು ವಿರಾಟ್ ಕೊಹ್ಲಿಯವರ ಅಗ್ರೇಸಿವ್ ನಾಯಕತ್ವ. ತಮ್ಮ ಅಗ್ರೇಸಿವ್ ನೇಚರ್ ನಿಂದಲೇ ವಿರಾಟ್ ಹಲವಾರು ಭಾರಿ ಸಹ ಆಟಗಾರರಿಗೆ ಹುರಿದುಂಬಿಸಿ ಪಂದ್ಯವನ್ನ ಗೆಲ್ಲಿಸಿದ್ದಾರೆ. ಉದಾಹರಣೆಗೆ ಇತ್ತಿಚೆಗೆ ಇಂಗ್ಲೆಂಡ್ ನಲ್ಲಿ ನಡೆದ ಲಾರ್ಡ್ಸ್ ಟೆಸ್ಟ್ ಆಗಿರಬಹುದು. ಭಾರತ ಸೋತೆ ಹೋಯಿತು ಎನ್ನುವ ಸ್ಥಿತಿಯಿಂದ ಗೆಲ್ಲುವ ಮನೋಭಾವವನ್ನ ಆಟಗಾರರಿಗೆ ತುಂಬಿದ್ದೇ ನಾಯಕ ವಿರಾಟ್. ಇನ್ನು ರೋಹಿತ್ ಶರ್ಮಾರನ್ನ ಗಣನೆಗೆ ತೆಗೆದುಕೊಂಡರೇ, ವಿರಾಟ್ ಅನುಪಸ್ಥಿತಿಯಲ್ಲಿ ರೋಹಿತ್ 19 ಟಿ 20 ಪಂದ್ಯಗಳನ್ನ ಮುನ್ನಡೆಸಿದ್ದಾರೆ. ಒಬ್ಬ ಆಟಗಾರನಾಗಿ ರೋಹಿತ್ ಅದ್ಭುತ ಬ್ಯಾಟ್ಸಮನ್ ಆದರೂ, ವಿರಾಟ್ ರಂತಹ ಆಕ್ರಮಣಕಾರಿ ಮನೋಭಾವದ ನಾಯಕನಲ್ಲ. ಹಾಗಾಗಿ ಭಾರತ ತಂಡ ಕ್ರೀಡಾಝಗಣದಲ್ಲಿ ಒಬ್ಬ ಆಕ್ರಮಣಕಾರಿ ನಾಯಕನನ್ನು ಖಂಡಿತ ಮಿಸ್ ಮಾಡಿಕೊಳ್ಳಲಿದೆ.

ಅದಲ್ಲದೇ ವೈಟ್ ಬಾಲ್ ಕ್ರಿಕೇಟ್ ಆದ ಏಕದಿನ ಹಾಗೂ ರೆಡ್ ಬಾಲ್ ಕ್ರಿಕೇಟ್ ನಲ್ಲಿ ವಿರಾಟ್ ಕೊಹ್ಲಿ ಮುಂದಿನ ವಿಶ್ವಕಪ್ ತನಕ ಮುಂದುವರಿಯಬಹುದು. ಸದ್ಯ 32 ವರ್ಷದ ವಿರಾಟ್ ರವರ ಈಗಿನ ದೈಹಿಕ ಸಾಮರ್ಥ್ಯವನ್ನ ನೋಡಿದರೇ, ಅವರು ಕನಿಷ್ಠ ಸಚಿನ್ ರಂತೆ 2027 ರ ವಿಶ್ವಕಪ್ ತನಕ ಕ್ರಿಕೇಟ್ ಆಡಬಹುದು ಎಂದು ಹೇಳಲಾಗುತ್ತಿದೆ. ಆದರೇ 34 ವರ್ಷದ ರೋಹಿತ್ ಶರ್ಮಾರನ್ನ ನಾಯಕನನ್ನಾಗಿ ಮಾಡುವುದು ಅರ್ಥವಾಗದ ಪ್ರಶ್ನೆ ಎಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.