ಕನ್ನಡದ ಇತಿಹಾಸದಲ್ಲಿ ಎಂದೆಂದಿಗೂ ಉಳಿಯುವ ವಿಷ್ಣುವರ್ಧನ್ ರವರ ಬಗ್ಗೆ ವಿದೇಶೀ ಪತ್ರಕರ್ತೆ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕೆಲವು ಹೆಸರುಗಳು ಅಚ್ಚಳಿಯದೇ ಉಳಿದಿವೆ. ಅವರು ನಮ್ಮಿಂದ ದೂರವಾದರೂ ಅವರ ಬಗೆಗಿನ ಅಭಿಮಾನ, ಪ್ರೀತಿ ಎಂದಿಗೂ ಕಡಿಮೆಯಾಗಲೇ ಇಲ್ಲ. ನಟಿಸುವಾಗ ಎಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರೋ ಅವರು ಕಾಲವಾದ ಮೇಲೋ ಕೂಡ ಅವರ ಬಗ್ಗೆಯೇ ಮಾತನಾಡುವ ಅಭಿಮಾನಿ ಸಾಗರವನ್ನೇ ಉಳಿಸಿಕೊಂಡಿದ್ದು ವಿಶೇಷ. ಅದರಲ್ಲಿ ನಾವು ಎಂದೆಂದಿಗೂ ಮರೆಯದ ಒಂದು ಹೆಸರು ಡಾ. ವಿಷ್ಣುವರ್ಧನ್.

ಬೆಂಗಳೂರಿನಲ್ಲಿ ಕೆಲವು ರಸ್ತೆಗಳಿಗೆ ಇವರ ಹೆಸರನ್ನೇ ಇಟ್ಟಿದ್ದಾರೆ ಎಂದರೆ ನಿಮಗೇ ಅರ್ಥವಾಗುತ್ತೆ ವಿಷ್ಣುಅವರ ಪ್ರಭಾವ ಎಷ್ಟಿದೆ ಎಂಬುದು. ವಿಷ್ಣುದಾದಾ 70 ದಶಕದ ಅದ್ಭುತ ನಟ. ಆ ಕಾಲದ ಆಂಗ್ರಿ ಯಂಗ್ ಮ್ಯಾನ್ ಎಂದೇ ಕರೆಸಿಕೊಂಡ ಸ್ಪುರದ್ರೂಪಿ ಯುವಕರಾಗಿದ್ದರು. ಅವರ ನಟನೆಯನ್ನು ಜನ ಮೆಚ್ಚಿ ಅವರ ಸಿನಿಮಾ ಬಂದರೆ ಹುಚ್ಚೆದ್ದು ಕುಣಿಯುತ್ತಿದ್ದರು. ಹಾಗೆಯೇ ವಿಷ್ಣು ವರ್ಧನ್ ಅವರು ವಯಕ್ತಿಕವಾಗಿಯೂ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು.

vishnu 15 | ಕನ್ನಡದ ಇತಿಹಾಸದಲ್ಲಿ ಎಂದೆಂದಿಗೂ ಉಳಿಯುವ ವಿಷ್ಣುವರ್ಧನ್ ರವರ ಬಗ್ಗೆ ವಿದೇಶೀ ಪತ್ರಕರ್ತೆ ಹೇಳಿದ್ದೇನು ಗೊತ್ತಾ??
ಕನ್ನಡದ ಇತಿಹಾಸದಲ್ಲಿ ಎಂದೆಂದಿಗೂ ಉಳಿಯುವ ವಿಷ್ಣುವರ್ಧನ್ ರವರ ಬಗ್ಗೆ ವಿದೇಶೀ ಪತ್ರಕರ್ತೆ ಹೇಳಿದ್ದೇನು ಗೊತ್ತಾ?? 3

1950 ಸಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದವರು ಡಾ. ವಿಷ್ಣುವರ್ಧನ್. ಅವರ ಮೂಲ ಹೆಸರು ಸಂಪತ್ ಕುಮಾರ್. ಇವರ ತಂದೆ ನಾರಾಯಣ ರಾವ್ ಸಂಗೀತ ವಾದಕರು, ಸಂಗೀತ ಸಂಯೋಜಕರೂ ಆಗಿದ್ದವರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಗಿನ ಕಾಲದಲ್ಲೇ ಪದವಿ ಮುಗಿಸಿದ್ದ ವಿಷ್ಣುವರ್ಧನ್ ನಂತರ ಬಂದಿದ್ದು ಸಿನಿ ಜಗತ್ತಿಗೆ. ತನಗೆ ಸವಾಲು ಸಾಹಸ ಇಷ್ಟ ಎಂದಿದ್ದ ಸಾಹಸ ಸಿಂಹ ಸಿನಿಮಾದಲ್ಲಿ ಅಭಿನಯಿಸದೇ ಇದ್ರೆ ಸೈನ್ಯಕ್ಕೆ ಸೇರುತ್ತಿದ್ದರಂತೆ!

ಡಾ. ವಿಷ್ಣು ವರ್ಧನ್ ಅವರ ಸಿನಿ ಜರ್ನಿಯ ಬಗ್ಗೆ ಒಮ್ಮೆ ನೋಟ ಹರಿಸೋಣ.. ವಿಷ್ಣು ನಾಗರಾವು ಚಿತ್ರದ ಮೂಲಕವೇ ಹೆಚ್ಚು ಚಿರಪರಿಚಿತರಾದವರು. ಆದರೆ ಇದಕ್ಕ್ಕಿಂತಲೂ ಮೊದಲು ಅಂದರೆ 1971ರಲ್ಲಿ ವಂಶ ವೃಕ್ಷ. ಇದು ಗಿರೀಶ್ ಕಾರ್ನಾಡ್ ನಿರ್ದೇಶನದ ಎಸ್.ಎಸ್ ಬೈರಪ್ಪ ಅವರ ಕಾದಂಬರಿ ಆಧಾರಿತ ಚಿತ್ರ. ನಾಗರಹಾವು ಕೂಡ ಕಾದಂಬರಿ ಆಧಾರಿತ ಚಿತ್ರ ಆದರೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇದರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ರು. ಇದು ಕೆಲವರ ಕೋಪಕ್ಕೆ ಕಾರಣವಾಗಿದ್ದರೂ ಕೂಡ ಅಭಿಮಾನಿಗಳು ಮಾತ್ರ ವಿಷ್ಣುವರ್ಧನ್ ಅವರನ್ನು ಮೆಚ್ಚಿಕೊಂಡ್ರು. ವಿಷ್ಣು ವಿಶೇಷವಾಗಿ ಕಾಣಿಸಿಕೊಂಡು, ಪುಟ್ಟಣ್ಣ ಕಣಗಾಲ್ ಸಂಪತ್ ಕುಮಾರ್ ನನ್ನು ವಿಷ್ಣುವರ್ಧನ್ ಆಗಿ ಬದಲಾಯಿಸಿದ್ರು. ಅಲ್ಲಿಂದ ಹೊಸ ನಟ ವಿಷ್ಣುವರ್ಧನ್ ಹುಟ್ಟಿಕೊಂಡಿದ್ದು.

ನಾಗರಹಾವು ಚಿತ್ರದ ಮೂಲಕ ಶುರುವಾದ ವಿಷ್ಣುಅವರ ಸಿನಿ ಪಯಣ ಆನೆ ನಡೆದದ್ದೇ ದಾರಿ ಎಂಬಂತೆ ಒಂದಾದ ಮೇಲೆ ಒಂದರಂತೆ ಚಿತ್ರಗಳಲ್ಲಿ ನಟಿಸುತ್ತಲೇ ಹೋದರು. 70 ರ ದಶಕದ ಅತ್ಯಂತ ಬ್ಯುಸಿ ನಟರಾದ ವಿಷ್ಣುವರ್ಧನ್ ಅವರು ಅಂದಿನ ಮುಂಚೂಣಿಯಲ್ಲಿದ್ದ ಆರತಿ, ಭಾರತಿ, ಮಂಜುಳಾ, ಲಕ್ಷ್ಮಿ ಈ ಎಲ್ಲಾ ನಟಿಯರೊಂದಿಗೂ ಅಭಿನಯಿಸ್ಸಿದ್ರು. ಇನ್ನು ಹೆಚ್ ಆರ್ ಭಾರ್ಗವ್ ಅವರ ನಿರ್ದೇಶನದ ಹಲವು ಚಿತ್ರಗಳಲ್ಲಿ ನಟಿಸುತ್ತಾ ನಟನೆಯಲ್ಲಿ ಸೈ ಎನಿಸಿಕೊಂಡು ಬಂದರು ವಿಷ್ಣು.

1985ರಲ್ಲಿ ಜೋಸೈಮಾನ್ ನಿರ್ದೇಶನದ ಸಾಹಸಸಿಂಗ ಚಿತ್ರದಲ್ಲಿ ನಟಿಸಿ ನಂತರ ಅದೇ ಅವರಿಗೆ ಬಿರುದಾಂಕಿತವಾಯಿತು. ಇನ್ನು ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡ್ರು. ಹೀಗೆ 80 ರ ದಶಕದಲ್ಲಿ ಅದ್ಭುತ ನಟನೆ ಮೂಲಕ, ವಿಷ್ಣುದಾದಾ, ಸಾಹಸಸಿಂಹ ಎಂದೆಲ್ಲಾ ಕರೆಯಿಸಿಕೊಂಡ ವಿಷ್ಣುಅವರು ಜೀವನದಲ್ಲಿ ಕಂಡ ಕಷ್ಟಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು.

1973ರಲ್ಲಿ ತೆರೆಕಂಡ ಗಂಧದ ಗುಡಿ ಸಿನಿಮಾ. ಈ ಚಿತ್ರದ ಚಿತ್ರೀಕರಣದಲ್ಲಿ ನಡೆದ ಅವಘಡದಿಂದಾಗಿ ಮುಂದಿನ 2 ವರ್ಷಗಳ ಕಾಲ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯ್ತು. ನಟಿ ಭಾರತಿಯವರನ್ನು ಪ್ರೀತಿಸಿ ಮದುವೆಯಾಅವರು ವಿಷ್ಣು. ಆ ಸಂದರ್ಭದಲ್ಲಿಯೂ ಕೂಡ ಸಂಕಷ್ಟ ಎದುರಿಸಿದ್ರು. ಆದರೆ ಬಂದದ್ದೆಲ್ಲವನ್ನೂ ನಗು ಮೊಗದಿಂದಲೇ ಸ್ವೀಕರಿಸುತ್ತಿದ್ದ ವಿಷ್ಣು ಅವರ ವ್ಯಕ್ತಿತ್ವದ ಬಗ್ಗೆ ಅವರ ಆಪ್ತರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ವಿಷ್ಣುವರ್ಧನ್ ಅವರ ಬಗ್ಗೆ ಭಾರತ ದೇಶದ ಸಿನಿಮಾ ರಂಗದ ಬಗ್ಗೆ ತಿಳಿಯಲು ಬಂದಿದ್ದ ವಿದೇಶಿ ಪತ್ರಕರ್ತೆಯೊಬ್ಬಳು, ತಾನು ಕಂಡ ಅತ್ಯಂತ ಸ್ಪುರದ್ರೂಪಿ ನಟ ಎಂದರೆ ಅದು ಡಾ, ವಿಷ್ಣುವರ್ಧನ್ ಎಂದು ಹೊಗಳಿದ್ದು ವಿಷ್ಣುಅವರ ಬಗ್ಗೆ ಹೆಚ್ಚಿನ ಅಭಿಮಾನವನ್ನು ಮೂಡಿಸುತ್ತದೆ.

vishnu 13 | ಕನ್ನಡದ ಇತಿಹಾಸದಲ್ಲಿ ಎಂದೆಂದಿಗೂ ಉಳಿಯುವ ವಿಷ್ಣುವರ್ಧನ್ ರವರ ಬಗ್ಗೆ ವಿದೇಶೀ ಪತ್ರಕರ್ತೆ ಹೇಳಿದ್ದೇನು ಗೊತ್ತಾ??
ಕನ್ನಡದ ಇತಿಹಾಸದಲ್ಲಿ ಎಂದೆಂದಿಗೂ ಉಳಿಯುವ ವಿಷ್ಣುವರ್ಧನ್ ರವರ ಬಗ್ಗೆ ವಿದೇಶೀ ಪತ್ರಕರ್ತೆ ಹೇಳಿದ್ದೇನು ಗೊತ್ತಾ?? 4

2009ರ ಡಿಸೆಂಬರ್ 30ರಂದು ಹೃದಯಾಘಾತದಿಂದ ನಮ್ಮನ್ನು ತೊರೆದರು ವಿಷ್ಣುದಾದಾ! ಇವರು ಹೋದ ನಂತರ ಅವರ ಕಡೆಯ ಚಿತ್ರ ಆಪ್ತರಕ್ಷಕ 2010ರಲ್ಲಿ ತೆರೆಕಂಡಿತ್ತು. ಅವರ ನಟನೆಗೆ ಸಂದ ಪ್ರಶಸ್ತಿಗಳೂ ಕೂಡ ಹಲವಾರು. ವಿಷ್ಣು ಕೇವಲ ನಟನೆ ಮಾತ್ರವಲ್ಲ, ಅದರ ಜೊತೆಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿದ್ರು. ಮೇಲ್ಕೋಟೆಯ ಹಳ್ಳಿಯೊಂದನ್ನು ದತ್ತು ಪಡೆದ ವಿಷ್ಣು ದಂಪತಿ ಅದರ ಶ್ರೋಯೋಭಿವೃದ್ಧಿಗಾಗಿ ಶ್ರಮಿಸಿದ್ರು. ಇನ್ನು ಕನ್ನಡ ಪರ ಹೋರಾಟದಲ್ಲಿಯೂ ಮುಂದಿದ್ದ ವಿಷ್ಣುವರ್ಧನ್ ಕನ್ನಡಕ್ಕೆ ದೊರೆತ ಒಂದು ಆಸ್ತಿ ಎಂದರೆ ಅತಿಶಯೋಕ್ತಿಯಲ್ಲ.

Comments are closed.