ವಿಶ್ವಕಪ್ ಗೆ ಮುನ್ನವೇ ಭರ್ಜರಿ ಮಾಸ್ಟರ್ ಪ್ಲಾನ್ ಮಾಡಿದ ಭಾರತ ತಂಡ: ಕೇವಲ 13 ದಿನಗಳಲ್ಲಿ ಎಷ್ಟೆಲ್ಲ ಆಗಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಸರಣಿಯನ್ನು ಆಡುತ್ತಿದೆ. ಇದಾದ ನಂತರ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಏಷ್ಯಾಕಪ್ ನಂತರ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ ಕೂಡ ಪಾಲ್ಗೊಳ್ಳಲಿದೆ. ಕಳೆದ ವರ್ಷ ನಡೆದಿರುವ ಟಿ20 ವಿಶ್ವಕಪ್ ನಲ್ಲಿ ಹೀನಾಯವಾಗಿ ಸೋತು ಟೂರ್ನಮೆಂಟ್ ನಿಂದ ಹೊರಬಿದ್ದಿರುವ ಮುಖಭಂಗವನ್ನು ಅನುಭವಿಸಿದ ನಂತರ ಭಾರತೀಯ ಕ್ರಿಕೆಟ್ ತಂಡ ಸರ್ವಸನ್ನದ್ಧವಾಗಿ ಎಚ್ಚೆತ್ತು ಕೂತಿದೆ.

ಹೌದು ಗೆಳೆಯರೇ, ಭಾರತೀಯ ಕ್ರಿಕೆಟ್ ತಂಡ ಇದಕ್ಕಾಗಿ ವಿರಾಟ್ ಕೊಹ್ಲಿ ಅವರ ನಾಯಕತ್ವದ ನಂತರ ರೋಹಿತ್ ಶರ್ಮಾ ರವರನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕನನ್ನಾಗಿ ನೇಮಿಸಿದ್ದು ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ರವರನ್ನು ನೇಮಿಸಿದೆ. ಇನ್ನು ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೂ ಮುನ್ನ ಒಂದು ಮಾಸ್ಟರ್ ಪ್ಲಾನ್ ಅನ್ನು ನಿಯೋಜಿಸಿದೆ ಎಂದರು ತಪ್ಪಾಗಲಾರದು. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಸ್ಟ್ರೇಲಿಯಾ ವೇಗಿಗಳಿಗೆ ಸಹಾಯ ಮಾಡೋ ಪಿಚ್ ಅನ್ನು ಹೊಂದಿದೆ. ಹೀಗಾಗಿ ಟಿ ಟ್ವೆಂಟಿ ವಿಶ್ವಕಪ್ ಪ್ರಾರಂಭ ಆಗುವುದಕ್ಕೆ ಮುನ್ನ ಭಾರತೀಯ ಕ್ರಿಕೆಟ್ ತಂಡ ವಿಶ್ವದಲ್ಲೇ ವೇಗಿಗಳಿಗೆ ಅತ್ಯಂತ ಹೆಸರಾಗಿರುವ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸರಣಿಯನ್ನು ಆಡಲಿದೆ.

team ind 1 | ವಿಶ್ವಕಪ್ ಗೆ ಮುನ್ನವೇ ಭರ್ಜರಿ ಮಾಸ್ಟರ್ ಪ್ಲಾನ್ ಮಾಡಿದ ಭಾರತ ತಂಡ: ಕೇವಲ 13 ದಿನಗಳಲ್ಲಿ ಎಷ್ಟೆಲ್ಲ ಆಗಲಿದೆ ಗೊತ್ತೇ??
ವಿಶ್ವಕಪ್ ಗೆ ಮುನ್ನವೇ ಭರ್ಜರಿ ಮಾಸ್ಟರ್ ಪ್ಲಾನ್ ಮಾಡಿದ ಭಾರತ ತಂಡ: ಕೇವಲ 13 ದಿನಗಳಲ್ಲಿ ಎಷ್ಟೆಲ್ಲ ಆಗಲಿದೆ ಗೊತ್ತೇ?? 2

ಅಂದರೆ ಟಿ20 ವಿಶ್ವಕಪ್ ಆರಂಭವಾಗುವುದಕ್ಕೆ ಮುನ್ನ, ಅಕ್ಟೋಬರ್ 11ಕ್ಕೆ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಭಾರತೀಯ ಕ್ರಿಕೆಟ್ ತಂಡ ಮುಗಿಸಿ ಅಕ್ಟೋಬರ್ 16ರಂದು ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಹೀಗಾಗಿ ಅದಕ್ಕೂ ಮುನ್ನ 13 ದಿನಗಳ ಅಂತರದಲ್ಲಿ ಎರಡು ತಂಡಗಳ ವಿರುದ್ಧ ಒಟ್ಟಾರೆಯಾಗಿ ಆರು ಟಿ 20 ಪಂದ್ಯಗಳನ್ನು ಆಡುವ ಮೂಲಕ ವೇಗಕ್ಕೆ ಸಹಕಾರ ನೀಡುವ ಆಸ್ಟ್ರೇಲಿಯಾ ಪಿಚ್ ನಲ್ಲಿ ಹೇಗೆ ಆಡಬೇಕು ಎನ್ನುವ ಮಾಸ್ಟರ್ ಪ್ಲಾನ್ ಅನ್ನು ರೂಪಿಸಲಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಎರಡು ತಂಡಗಳ ವಿರುದ್ಧ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಯನ್ನು ಭಾರತ ದೇಶ ತವರು ನೆಲದಲ್ಲಿ ಆಡಲಿದೆ. ಭಾರತೀಯ ಕ್ರಿಕೆಟ್ ತಂಡದ ಈ ಮಾಸ್ಟರ್ ಪ್ಲಾನ್ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಹಂಚಿಕೊಳ್ಳಿ.

Comments are closed.