ಏಷ್ಯಾ ಕಪ್ ಗೆ ನೇರವಾಗಿ ಸೇರಿಕೊಂಡ ವಿರಾಟ್ ಕೊಹ್ಲಿ: ಪದೇ ಪದೇ ಇಂಜುರಿಯಿಂದ ಹೊರಗುಳಿದಿದ್ದ ರಾಹುಲ್ ಕಥೆ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಗಸ್ಟ್ 27ರಿಂದ ಯುಎಇ ನಲ್ಲಿ ಈ ಬಾರಿಯ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ಪ್ರಾರಂಭವಾಗಲಿದೆ. ಭಾರತೀಯ ಕ್ರಿಕೆಟ್ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಆಗಿರುವ ಪಾಕಿಸ್ತಾನವನ್ನು ಆಗಸ್ಟ್ 28ರಂದು ಎದುರಿಸಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಏಷ್ಯಾ ಕಪ್ ಗೆ ಹೇಗಿರಲಿದೆ ಎನ್ನುವುದರ ಕುರಿತಂತೆ ಎಲ್ಲರೂ ಕೂಡ ಆಸಕ್ತಿಯಿಂದ ಕಾಯುತ್ತಿದ್ದಾರೆ.

ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ವಿದೇಶಿ ಸರಣಿಗಳಲ್ಲಿ ಯಾವೆಲ್ಲ ರೀತಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದೆ ಎಂಬ ಆಧಾರದ ಮೇಲೆ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಆಯ್ಕೆ ಮಾಡಲಿದ್ದಾರೆ. ವಿರಾಟ್ ಕೊಹ್ಲಿ ರವರು ಸತತವಾಗಿ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದರು ಕೂಡ ವಿದೇಶಿ ಅದರಲ್ಲೂ ಅತ್ಯಂತ ಪ್ರಮುಖ ಟೂರ್ನಮೆಂಟ್ ನಲ್ಲಿ ಅವರ ಅನುಭವದ ಅಗತ್ಯತೆ ತಂಡಕ್ಕೆ ಇದೆ ಎಂಬುದಾಗಿ ತಿಳಿದಿದ್ದು ಅದರ ಹಿನ್ನೆಲೆಯಲ್ಲಿ ಅವರನ್ನು ಏಷ್ಯಾ ಕಪ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂಬುದಾಗಿ ಸುದ್ದಿ ದಟ್ಟವಾಗಿ ಓಡಾಡುತ್ತಿದೆ. ಏಷ್ಯಾ ಕಪ್ ತಂಡದ ಸಂಭಾವ್ಯರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ರವರ ಹೆಸರು ಕೂಡ ಬಲವಾಗಿ ಕೇಳಿ ಬರುತ್ತಿದೆ. ಇನ್ನು ಸತತವಾಗಿ ಇಂಜುರಿಯಿಂದ ತಂಡದಿಂದ ಹೊರಗೆ ಉಳಿದಿರುವ ಕೆಎಲ್ ರಾಹುಲ್ ರವರ ಕಥೆ ಏನಾಗಿರಬಹುದು ಎಂಬುದಾಗಿ ನೀವು ಕೂಡ ಯೋಚಿಸುತ್ತಿರಬಹುದು.

kl vk | ಏಷ್ಯಾ ಕಪ್ ಗೆ ನೇರವಾಗಿ ಸೇರಿಕೊಂಡ ವಿರಾಟ್ ಕೊಹ್ಲಿ: ಪದೇ ಪದೇ ಇಂಜುರಿಯಿಂದ ಹೊರಗುಳಿದಿದ್ದ ರಾಹುಲ್ ಕಥೆ ಏನಾಗಿದೆ ಗೊತ್ತೇ??
ಏಷ್ಯಾ ಕಪ್ ಗೆ ನೇರವಾಗಿ ಸೇರಿಕೊಂಡ ವಿರಾಟ್ ಕೊಹ್ಲಿ: ಪದೇ ಪದೇ ಇಂಜುರಿಯಿಂದ ಹೊರಗುಳಿದಿದ್ದ ರಾಹುಲ್ ಕಥೆ ಏನಾಗಿದೆ ಗೊತ್ತೇ?? 2

ಬಿಸಿಸಿಐ ಮೂಲಗಳ ಪ್ರಕಾರ ಈ ಬಾರಿ ಏಷ್ಯಾ ಕಪ್ ತಂಡದ ಸಂಭಾವ್ಯರ ಪಟ್ಟಿಯಲ್ಲಿ ಕೆಎಲ್ ರಾಹುಲ್ ರವರ ಹೆಸರು ಕೂಡ ಇದೆ. ಇದೇ ತಂಡದಲ್ಲಿ ಅತ್ಯುತ್ತಮವಾಗಿ ಆಟವಾಡಿರುವ ಸದಸ್ಯರನ್ನು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡಕ್ಕೆ ಕೂಡ ಆಯ್ಕೆ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಈ ಬಾರಿ ಶ್ರೇಯಸ್ ಅಯ್ಯರ್ ರವರು ಸಾಕಷ್ಟು ಕಳಪೆ ಪ್ರದರ್ಶನವನ್ನು ನೀಡಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಆಯ್ಕೆಯಾಗುವುದು ಅನುಮಾನ ಎಂಬುದಾಗಿ ತಿಳಿದು ಬಂದಿದೆ.

Comments are closed.