News from ಕನ್ನಡಿಗರು

ಕೊನೆಗೂ ಫಿಕ್ಸ್ ಆಯ್ತು ಮುಹೂರ್ತ, ವೀಕೆಂಡ್ ವಿಥ್ ರಮೇಶ್ ಪುನರಾರಂಭ ಯಾವಾಗ ಗೊತ್ತೇ??

44

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಮ್ಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಂತಹ ರಮೇಶ್ ಅರವಿಂದ್ ನಿರೂಪಣೆ ಮಾಡಿಕೊಡುತ್ತಿದ್ದ ಅಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಹಲವಾರು ಕನ್ನಡ ಪ್ರೇಕ್ಷಕರ ಮನವನ್ನು ಗೆದ್ದಂತಹ ಕಾರ್ಯಕ್ರಮವಾಗಿತ್ತು. ಯಾಕೆಂದರೆ ಇಲ್ಲಿ ವಾರಾಂತ್ಯದಲ್ಲಿ ಸಾಧಕರನ್ನು ಕರೆತಂದು ಅವರ ಕಷ್ಟಸುಖಗಳನ್ನು ಹಾಗೂ ಅವರ ಗೆಲುವಿನ ಹಾದಿಯನ್ನು ಆ ಹಾದಿಯಲ್ಲಿ ಕಂಡಂತಹ ಸೋಲುಗಳನ್ನು ಹೀಗೆ ಅವರ ಜೀವನದ ಎಲ್ಲಾ ಮಜಲುಗಳನ್ನು ಕೂಡ ರಸವತ್ತಾಗಿ ಪ್ರೇಕ್ಷಕರಿಗೆ ಕಟ್ಟಿ ಕೊಡುವಂತಹ ಕಾರ್ಯಕ್ರಮವಾಗಿತ್ತು.

ಇನ್ನು ಈ ಕಾರ್ಯಕ್ರಮದಿಂದಾಗಿ ಹಲವಾರು ಪ್ರೇಕ್ಷಕರು ಕೂಡ ಈ ಕಾರ್ಯಕ್ರಮವನ್ನು ಅವರ ಗೆಲುವಿನ ಮೆಟ್ಟಿಲಿಗೆ ಸ್ಪೂರ್ತಿಯನ್ನಾಗಿ ಮಾಡಿಕೊಂಡಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ರವರ ಜೊತೆಗೆ ಕೇವಲ ಕನ್ನಡ ಚಿತ್ರರಂಗದ ನಾಯಕ ನಟರು ಹಾಗೂ ನಾಯಕಿಯರು ಮಾತ್ರವಲ್ಲದೆ ರಾಜಕಾರಣಿಗಳು ಬಿಸಿನೆಸ್ ಮ್ಯಾನ್ ಗಳು ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ಕರೆತಂದು ಇಲ್ಲಿ ಕನ್ನಡಿಗರಿಗೆ ಪರಿಚಯಿಸಲಾಗುತ್ತಿತ್ತು. ಇನ್ನು ಇತ್ತೀಚಿಗಷ್ಟೇ ಜೀ ಕನ್ನಡದ ಮುಖ್ಯಸ್ಥರಾಗಿರುವ ರಾಘವೇಂದ್ರ ಹುಣಸೂರು ರವರು ಈ ಕಾರ್ಯಕ್ರಮದ ಕುರಿತಂತೆ ಮಾತನಾಡಿದ್ದಾರೆ.

ಹೌದು ಸ್ನೇಹಿತರೆ ಈ ಬಾರಿ 2022 ರ ಆರಂಭದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದ್ದು ಇದು ಕೇವಲ ಓಟಿಟಿ ಅಂದರೆ ಝೀ5 ಆಪ್ ನಲ್ಲಿ ಮಾತ್ರ ಪ್ರಸಾರವಾಗಲಿದೆ. ಇನ್ನು ಎಂದಿನಂತೆ ರಮೇಶ್ ಅರವಿಂದ್ ರವರ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ ಎಂಬುದಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಈ ಕಾರ್ಯಕ್ರಮದ ಪ್ರಸಾರಕ್ಕಾಗಿ ಯಾರೆಲ್ಲ ಕಾಯುತ್ತಿದ್ದೇವೆ ಎಂಬುದನ್ನು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.