ಸಾಮಾನ್ಯದಲ್ಲ ಈ ಚಳಿಗಾಲದ ಶೀತ ನೆಗಡಿ, ಅದಕ್ಕಾಗಿಯೇ ಈ ವಿಶೇಷ ಮನೆಮದ್ದುಗಳನ್ನು ಬಳಸಿ ಥಟ್ ಎಂದು ಪರಿಹಾರ ಕಂಡುಕೊಳ್ಳಿ.

ನಮಸ್ಕಾರ ಸ್ನೇಹಿತರೇ ಚಳಿಗಾಲ ಬಂತು ಅಂದ್ರೆ ಸಾಕು ಸ್ವಲ್ಪ ಖುಷಿ ಮತ್ತೆ ಸ್ವಲ್ಪ ಟೆನ್ಶನ್. ಮಕ್ಕಳಿಂದ ಹ್ಡಿದು ದೊಡ್ಡವರವರೆಗೂ ಚಳಿಗಾಲದಲ್ಲಿ ಶೀತ ನೆಗಡಿ ಕಾಣಿಸಿಕೊಳ್ಳುತ್ತದೆ. ಜೊತೆಗೆ ತ್ವಚೆಯೂ ಕುಡ ತೇವ ಕಳೆದುಕೊಂಡು ಶುಷ್ಕವಾಗುತ್ತದೆ. ಇದಕ್ಕೆಲ್ಲಾ ಪ್ರತಿ ನಿತ್ಯ ವೈದ್ಯರ ಬಳಿ ಹೋಗಲು ಸಾಧ್ಯವಿಲ್ಲ ಅಲ್ಲವೇ ಹಾಗಾದರೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಕೆಲವು ಟಿಪ್ಸ್.

chaligaagla | ಸಾಮಾನ್ಯದಲ್ಲ ಈ ಚಳಿಗಾಲದ ಶೀತ ನೆಗಡಿ, ಅದಕ್ಕಾಗಿಯೇ ಈ ವಿಶೇಷ ಮನೆಮದ್ದುಗಳನ್ನು ಬಳಸಿ ಥಟ್ ಎಂದು ಪರಿಹಾರ ಕಂಡುಕೊಳ್ಳಿ.
ಸಾಮಾನ್ಯದಲ್ಲ ಈ ಚಳಿಗಾಲದ ಶೀತ ನೆಗಡಿ, ಅದಕ್ಕಾಗಿಯೇ ಈ ವಿಶೇಷ ಮನೆಮದ್ದುಗಳನ್ನು ಬಳಸಿ ಥಟ್ ಎಂದು ಪರಿಹಾರ ಕಂಡುಕೊಳ್ಳಿ. 2

ಮೊದಲಿಗೆ ನಮ್ಮ ಸ್ಚಚ್ಛತೆ. ಶೀತವಾದಾಗ ಬೇರೆಯವರ ಬಟ್ಟೆಯನ್ನು ಬಳಸಬಾರದು. ಬಿಸಿ ನೀರನ್ನೇ ಕುಡಿಯುವುದು ಸೂಕ್ತ. ಜೊತೆಗೆ ಹೆಚ್ಚು ಥಂಡಿ ಗಾಳಿಯಲ್ಲಿ ಹೊರಗೆ ಹೋಗಬೇಡಿ. ಹಾಗೆ ಹೋಗುವುದಾದರೂ ತಪ್ಪದೇ ಕಿವಿಗೆ ಮಫ್ಲರ್ ನಂತದ್ದನ್ನು ಹಾಕಿ ಕಿವಿ ಮುಚ್ಚಿಕೊಳ್ಳಿ. ಯೋಗವನ್ನು ಅಭ್ಯಾಸ ಮಾಡಿಕೊಂಡರೆ ಇದಕ್ಕೆಲ್ಲ ಉತ್ತಮ ಪರಿಹಾರ. ಜಲ ನೇತಿಯಂಥ ಯೋಗ ಕ್ರಿಯೆಗಳು ಶ್ವಾಸಕೋಶ ಸಂಬಂಧಿ ನೆಗಡಿಯನ್ನು ಕೂಡಲೆ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ತುಳಸಿ ಉಪಯೋಗವನ್ನು ಹೆಚ್ಚೆಚ್ಚು ಮಾಡಿ. ತುಳಸಿಯಲ್ಲಿ ಆಂಟಿ ವೈರಲ್ ಗುಣವಿದೆ. ಹಾಗಾಗಿ ಶೀತ ನೆಗಡಿ, ಜ್ವರದಂಥ ಸೋಂಕನ್ನು ಉಪಶಮನಮಾಡುವಲ್ಲಿ ತುಳಸಿ ಮಹತ್ವದ ಪಾತ್ರ ವಹಿಸುತ್ತದೆ. ತುಳಸಿ ಕಷಾಯ ಚಳಿಗಾಲಕ್ಕೆ ಅತೀ ಉಪಯುಕ್ತ. ಇನ್ನು ನೀವು ಮಾಡುವ ಟೀಯಲ್ಲಿಯೂ ಕೂಡ ತುಳಸಿ ಎಲೆಗಳನ್ನು ಹಾಕಿಕೊಂಡು ಕುಡಿಯಬಹುದು. ಅರಿಶಿನ ಕೂಡ ಅತ್ಯದ್ಭುತ ಆಂಟಿಬಯಟಿಕ್. ಇದನ್ನು ಪ್ರತಿ ಅಡುಗೆಯಲ್ಲಿ ಬಳಸಬೇಕು. ಇನ್ನು ಹಾಲಿಗೆ ಅರಿಶಿನ ಪುಡಿ ಹಾಕಿ ಕುದಿಸಿ ಅರಿಶಿನ ಕಾಫಿ ಮಾಡಿ ಕುಡಿದರೆ ಶೀತ ಮಂಗಮಾಯವಾಗುತ್ತದೆ.

ಇನ್ನು ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿರುವ ಸಿಟ್ರಿಕ್ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿ. ಚಳಿಗಾಲಕ್ಕೆ ತಕ್ಕ ಹಾಗೆ ಈಗ ಕಿತ್ತಳೆ ಹಣ್ಣುಗಳು ಲಭ್ಯ. ಇವುಗಳನ್ನು ಹೆಚ್ಚು ಸೇವಿಸುವುದರಿಂದ ತ್ವಚೆಯಲ್ಲಿ ಶುಷ್ಕತೆ ತಕ್ಕ ಮಟ್ಟಿಗೆ ಕಡಿಮೆಯಾಗುತ್ತದೆ. ಇವೆಲ್ಲವುದರ ಜೊತೆಗೆ ದೇಹವನ್ನು ಆಕ್ಟಿವ್ ಆಗಿಡುವುದು ಕೂಡ ಮುಖ್ಯ. ಚಳಿ ಎಂದು ಬೆಳಗ್ಗೆ ಬೇಗ ಏಳದೇ ಇರುವುದು ಉತ್ತಮ ಅಭ್ಯಾಸವಲ್ಲ. ಹಾಗಾಗಿ ಬೇಗನೆ ಎದ್ದು ವ್ಯಾಯಾಮ ಹಾಗೂ ಪ್ರಾಣಾಯಾವಗಳನ್ನು ಮಾಡಿ.

Comments are closed.