News from ಕನ್ನಡಿಗರು

ಯಶ್ ರವರಿಗೆ ಇದ್ದಕ್ಕಿದ್ದ ಹಾಗೆ ಕರೆ ಮಾಡಿ ಕ್ಷಮೆ ಕೇಳಿದ ಅಮಿರ್ ಖಾನ್, ಯಾಕೆ ಗೊತ್ತೇ?? ಅಮಿರ್ ಖಾನ್ ಹೀಗೆ ಮಾಡಿದ್ಯಾಕೆ??

83

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಈ ವರ್ಷ ಬಿಡುಗಡೆ ಆಗಬೇಕಾಗಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರ ಮುಂದಿನ ವರ್ಷ ಏಪ್ರಿಲ್ 14ಕ್ಕೆ ಬಿಡುಗಡೆಯಾಗುವುದು ಖಾತ್ರಿಯಾಗಿದೆ. ಇನ್ನು ಕೆಜಿಎಫ್ ಚಿತ್ರದ ಬಿಡುಗಡೆ ದಿನಾಂಕ ಎರಡು ತಿಂಗಳ ಹಿಂದೆಯೇ ತಿಳಿದಿದ್ದರೂ ಕೂಡ ಅಮೀರ್ ಖಾನ್ ರವರ ಲಾಲ್ ಸಿಂಗ್ ಛಡ್ಡಾ ಚಿತ್ರ ಅದೇ ದಿನಾಂಕದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ

ಇನ್ನು ಈ ಕುರಿತಂತೆ ಅಮೀರ್ ಖಾನ್ ರವರು ಯಶ್ ಹಾಗೂ ಕೆಜಿಎಫ್ ಚಿತ್ರೀಕರಣದ ಬಳಿ ಕ್ಷಮೆ ಕೇಳಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಕೋಮಲ್ ನಹತ ರವರ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಮೀರ್ ಖಾನ್ ರವರು ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗುವ ದಿನಾಂಕದಂದೇ ಬಿಡುಗಡೆಯಾಗುತ್ತಿರುವುದು ಕ್ಕಾಗಿ ಕ್ಷಮೆಯನ್ನು ಕೇಳಿದ್ದಾರೆ. ಹೌದು ಗೆಳೆಯರೆ ಸ್ವತಹ ಅಮೀರ್ ಖಾನ್ ರವರೆ ರಾಕಿಂಗ್ ಸ್ಟಾರ್ ಯಶ್ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ರವರ ಬಳಿ ಕರೆಮಾಡಿ ಕ್ಷಮೆ ಕೇಳಿದ್ದಾರಂತೆ. ಇದಕ್ಕೆ ಯಶ್ ರವರು ಕೆಜಿಎಫ್ ಆಕ್ಷನ್ ಥ್ರಿಲ್ಲರ್ ಲಾಲ್ ಸಿಂಗ್ ಪಕ್ಕಾ ಫ್ಯಾಮಿಲಿ ರೋಮ್ಯಾಂಟಿಕ್ ಚಿತ್ರ ಒಂದರಿಂದ ಇನ್ನೊಂದಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ನೀವು ಬಿಡುಗಡೆ ಮಾಡಿ ಎಂದಿದ್ದರಂತೆ.

ಇನ್ನು ಎಷ್ಟು ರವರು ಮಾತನಾಡಿರುವ ರೀತಿಯಲ್ಲಿ ಕೂಡ ಅಮೀರ್ ಖಾನ್ ಅವರು ಸಾಕಷ್ಟು ಇಷ್ಟ ಪಟ್ಟಿದ್ದಾರಂತೆ. ಮೊದಲ ಬಾರಿಗೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಅಮೀರ್ ಖಾನ್ ರವರು ಸಿಕ್ಖ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅದೇ ದಿನ ಬೈಸಾಖಿ ಹಬ್ಬ ಕೂಡ ಇರುವುದರಿಂದ ಬಿಡುಗಡೆ ಮಾಡುತ್ತಿದ್ದೇನೆ ಅಷ್ಟೆ ಹೊರತು ಬೇರೆ ಚಿತ್ರಗಳಿಗೆ ತೊಂದರೆ ಮಾಡುವ ಉದ್ದೇಶ ನನಗೆ ಇಲ್ಲ ಎಂಬುದಾಗಿ ಹೇಳಿದ್ದಾರೆ. ಇನ್ನು ಯಶ್ ಅವರೊಂದಿಗೆ ಸುದೀರ್ಘ ಕರೆಯಲ್ಲಿ ಮಾತನಾಡಿ ತುಂಬಾ ಖುಷಿಯಾಯಿತು ಎಂಬುದರ ಕುರಿತಂತೆ ಕೂಡ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೆಜಿಎಫ್ ಚಿತ್ರಕ್ಕೆ ಮತ್ತು ಯಶ್ ರವರ ಮುಂದಿನ ಚಿತ್ರಗಳಿಗೆ ನಾನೇ ಪ್ರಚಾರ ನೀಡುತ್ತೇನೆ ಎಂಬುದಾಗಿ ಕೂಡ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.