ಯುಗಪುರುಷದ ಚಿತ್ರದ ಕಾಮಿನಿ ದೇವಿ ಈಗ ಹೇಗಿದ್ದಾರೆ ಗೊತ್ತಾ ಇವರ ಗಂಡ ಕೂಡ ಫೇಮಸ್, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ 80 ಹಾಗೂ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಚಿತ್ರಗಳ ಹವಾ ತುಂಬಾ ಜೋರಾಗಿತ್ತು. ಅದರಲ್ಲೂ 1989 ರಲ್ಲಿ ಬಿಡುಗಡೆಯಾದಂತಹ ಯುಗಪುರುಷ ಚಿತ್ರವಂತೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಇನ್ನು ಯುಗಪುರುಷ ಚಿತ್ರದಲ್ಲಿ ನಟಿಸಿದ್ದ ನಟಿ ಮುನ್ ಮುನ್ ಸೇನ್ ರವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವರ ಯುಗಪುರುಷ ಚಿತ್ರದ ನೆಗೆಟಿವ್ ಪಾತ್ರ ಎಲ್ಲರ ಮನಗೆದ್ದಿತ್ತು.

ಮುನ್ ಮುನ್ ಸೇನ್ ರವರು ಯುಗಪುರುಷ ಚಿತ್ರದಲ್ಲಿ ಎರಡು ಜನ್ಮದ ನಾಯಕರಿಗೆ ನಾಯಕಿಯಾಗಿ ನಟಿಸಿ ತಮ್ಮ ವಿಭಿನ್ನ ಅಭಿನಯದ ಮೂಲಕ ಮನಗೆದ್ದಿದ್ದರು. ಬೆಂಗಾಲದ ಮೂಲದವರಾಗಿರುವ ಮುನ್ ಮುನ್ ಸೇನ್ ರವರು ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬರ ಮಗಳು. ಇನ್ನು ಇವರ ತಾಯಿ ಕೂಡ ಬೆಂಗಾಳಿ ಚಿತ್ರದ ಮೂಲದವರಾಗಿದ್ದ ರಿಂದ ಇವರಿಗೆ ಸಿನಿಮಾ ಕ್ಷೇತ್ರ ತುಂಬಾನೆ ಹತ್ತಿರವಾಗಿತ್ತು. ಇನ್ನು ಇವರು ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದ್ದು 1984 ರಲ್ಲಿ ಬಾಲಿವುಡ್ನಲ್ಲಿ ತರ ಕಂಡಂತಹ ಅಂದರ್ ಬಾಹರ್ ಚಿತ್ರದ ಮೂಲಕ.

ಇನ್ನು ಕೇವಲ ಇವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಬಂಗಾಳಿ ಇಂಗ್ಲಿಷ್ ಸೇರಿದಂತೆ 200ಕ್ಕೂ ಹೆಚ್ಚಿನ ಚಿತ್ರದಲ್ಲಿ ಪ್ರಮುಖ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ ಸ್ನೇಹಿತರೆ. ಮುನ್ ಮುನ್ ಸೇನ್ ರವರು ತ್ರಿಪುರ ರಾಜ್ಯದ ರಾಜಮನೆತನಕ್ಕೆ ಸೇರಿದವರಾದಂತಹ ಭರತ್ ವರ್ಮ ರವರನ್ನು 1978 ರಲ್ಲಿ ಮದುವೆಯಾದರು. ಇನ್ನು ಇವರು ರಾಜ’ಕೀಯದಲ್ಲಿ ಕೂಡ ಗೆದ್ದು ಬಂದಂತಹ ದಿಟ್ಟ ಮಹಿಳೆ. ಇನ್ನು ಇವರಿಬ್ಬರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಇವರು ಕೂಡ ಈಗ ನಟಿಯರು. ಈಗ ನಟಿ ಮುನ್ ಮುನ್ ಸೇನ್ ರವರು ತಮ್ಮ ಪತಿ ಭರತ್ ವರ್ಮ ರವರೊಂದಿಗೆ ನೆಮ್ಮದಿಯ ಜೀವನವನ್ನು ಕಳೆಯುತ್ತಿದ್ದಾರೆ.

Comments are closed.