ಹೆಣ್ಣು ಮಗುವಿನ ತಾಯಿಯಾದ ಕನ್ನಡ ಟಾಪ್ ಸೂಪರ್ ಸ್ಟಾರ್ ನಟಿ, ಯಾರು ಗೊತ್ತೇ?? ಅಭಿಮಾನಿಗಳು ಫುಲ್ ಕುಶ್.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿಯನ್ನು ಪಡೆದಂತಹ ಚಿತ್ರವೆಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರ. ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ನಟನೆಯಷ್ಟೇ ಚಿತ್ರದ ನಾಯಕಿ ಸಯ್ಯೇಶಾ ರವರ ನಟನೆ ಕೂಡ ಜನಮನ್ನಣೆ ಪಡೆದುಕೊಂಡಿತ್ತು.

ಹೌದು ಸ್ನೇಹಿತರೆ ಸಯ್ಯೇಶಾ ರವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಯುವನಟಿ ಎಂದರೆ ತಪ್ಪಾಗಲಾರದು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನಾಯಕ ನಟಿಯಾಗಿ ಯಶಸ್ಸನ್ನು ಪಡೆದುಕೊಂಡಂತಹ ಅವರು. ಕನ್ನಡ ತಮಿಳ್ ತೆಲುಗು ಹೇಗೆ ಬಹುಭಾಷೆಗಳಲ್ಲಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡವರು. ಇನ್ನು ಈಗ ಸಯ್ಯೇಶಾ ರವರು ಅವರು ಎಲ್ಲಾ ಅಭಿಮಾನಿಗಳಿಗೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.

ಹೌದು ಸ್ನೇಹಿತರೆ ಸಯೇಷಾ ರವರು ತಮಿಳು ಚಿತ್ರರಂಗದ ಖ್ಯಾತ ನಟ ಆರ್ಯ ರವರ ಧರ್ಮಪತ್ನಿ. 2018 ರಲ್ಲಿ ಘಜನಿಕಾಂತ ಚಿತ್ರದ ಚಿತ್ರ ಕನ್ನಡದಲ್ಲಿ ಈ ಜೋಡಿ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ಹಾಗೂ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ಪರಸ್ಪರ ಕುಟುಂಬದ ಒಪ್ಪಿಗೆಯಿಂದ ಆಗಿ 2019 ರಲ್ಲಿ ಅವರಿಬ್ಬರು ಮದುವೆಯಾದರು. ಈಗ ನಿನ್ನೆಯಷ್ಟೇ ನಟಿ ಸಯ್ಯೇಶಾ ರವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆರ್ಯ ಹಾಗೂ ಸಯೇಷಾ ರವರ ಕುಟುಂಬಗಳು ಮೊಮ್ಮಗಳು ಜನಿಸಿರುವ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇನ್ನು ಈ ಕುರಿತಂತೆ ತಮಿಳು ನಟ ವಿಶಾಲ್ ರವರು ಟ್ವೀಟ್ ಮಾಡುವ ಮೂಲಕ ಮೊದಲಿಗೆ ಈ ಸಂತಸದ ಸುದ್ದಿಯನ್ನು ತಾನು ಮಾವ ಆಗುತ್ತಿದ್ದೇನೆ ಎಂಬ ಖುಷಿಯಾದ ಸಮಾಚಾರವನ್ನು ಹಂಚಿಕೊಂಡಿದ್ದಾರೆ. ನೀವು ಕೂಡ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಈ ದಂಪತಿಗಳಿಗೆ ಶುಭ ಹಾರೈಸಬಹುದು.

Comments are closed.