ಕಿರುತೆರೆಯಲ್ಲಿ ಮೊದಲ ಬಾರಿಗೆ ಯುವರತ್ನ ಪ್ರಸಾರ, ಯಾವ ಚಾನೆಲ್ನಲ್ಲಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದಯುವರತ್ನ ಸಿನಿಮಾ ಥಿಯೇಟರ್ ಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಕೊಂಡಿತ್ತು ಆದರೆ ಇದೇ ಸಮಯದಲ್ಲಿ ಥಿಯೇಟರ್ಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಕಡಿಮೆ ಮಾಡಿದ ಕಾರಣ ಕೆಲವೇ ಕೆಲವು ದಿನಗಳಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು.

ಈ ಮೂಲಕ ಯುವ ರತ್ನ ಸಿನಿಮಾ ಅಂದು ಕೊಂಡಷ್ಟು ದಾಖಲೆ ಮಾಡಲು ಸಾಧ್ಯವಾಗಲಿಲ್ಲ ಹಾಗೂ ಕಲೆಕ್ಷನ್ ವಿಚಾರದಲ್ಲಿ ಕೂಡ ಹಿಂದೆ ಉಳಿದಿತ್ತು. ಅಷ್ಟೇ ಅಲ್ಲದೆ ಚಿತ್ರದ ಕುರಿತು ಕೂಡ ಹಲವಾರು ವ್ಯತಿರಿಕ್ತ ಪ್ರತಿಕ್ರಿಯೆಗಳು ಕೂಡ ಪ್ರೇಕ್ಷಕರಿಂದ ಕೇಳಿ ಬಂದಿದ್ದವು, ಆದರೂ ಕೂಡ ಚಿತ್ರ ಯಶಸ್ಸಿನ ಚಿತ್ರಗಳ ಸಾಲಿಗೆ ಸೇರಿ ಕೊಂಡಿತ್ತು.

ಆದ ಕಾರಣ ಮನೆಯ ಮಂದಿ ಯುವರತ್ನ ಸಿನಿಮಾ ನೋಡಬೇಕು ಎಂದು ಕಾಯುತ್ತಿದ್ದಾರೆ ಹೀಗೆ ಕಾಯುತ್ತಿರುವ ಎಲ್ಲಾ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದ್ದು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಯುವ ರತ್ನ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವುದು ಖಚಿತವಾಗಿದೆ. ಉದಯ ಚಾನೆಲ್ ನಲ್ಲಿ ಯುವ ರತ್ನ ಸಿನಿಮಾ ಪ್ರಸಾರವಾಗುವ ಸಮಯ ಹತ್ತಿರ ಬಂದಿದೆ ಹಾಗೂ ಎಲ್ಲಾ ‌ಪ್ರಸಾರದ ಹಕ್ಕುಗಳನ್ನು ಉದಯ ಚಾನಲ್ ಪಡೆದು ಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

Comments are closed.