ಪಾಂಡವರ ಚಿಕ್ಕಪ್ಪ, ಮಹಾಜ್ಞಾನಿ ವಿಧುರರು ಹೇಳಿದಂತೆ ಈ ರೀತಿಯ ಜನರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ, ಈ ತಪ್ಪುಗಳನ್ನು ಈ ಕೂಡಲೇ ನಿಲ್ಲಿಸಿ.

ನಮಸ್ಕಾರ ಸ್ನೇಹಿತರೇ ಮಹಾಭಾರತ ಕಾಲದ ವಿದುರನ ಸಾಕಷ್ಟು ಮಾತುಗಳು ಇಂದಿಗೂ ಕೂಡ ಹಲವಾರು ಜನರ ಜೀವನಕ್ಕೆ ದಾರಿದೀಪವಾಗಿ ಇರುವಂತಿದೆ. ವಿದುರ ಕೇವಲ ದೃತರಾಷ್ಟ್ರನ ಸಹೋದರನಾಗಿ ಮಾತ್ರವಲ್ಲದೆ ಕುರುವಂಶದ ರಾಜ್ಯದ ಪ್ರಧಾನ ಮಂತ್ರಿ ಆಗಿ ಕೂಡ ಕಾರ್ಯನಿರ್ವಹಿಸಿದವರು. ರಾಜ್ಯಾಡಳಿತದ ಕುರಿತಂತೆ ಧೃತರಾಷ್ಟ್ರನಿಗೆ ಸಲಹೆಯನ್ನು ನೀಡುವಲ್ಲಿ ವಿಧುರನ ಪಾತ್ರ ಪ್ರಮುಖವಾದದ್ದು.

vidhura | ಪಾಂಡವರ ಚಿಕ್ಕಪ್ಪ, ಮಹಾಜ್ಞಾನಿ ವಿಧುರರು ಹೇಳಿದಂತೆ ಈ ರೀತಿಯ ಜನರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ, ಈ ತಪ್ಪುಗಳನ್ನು ಈ ಕೂಡಲೇ ನಿಲ್ಲಿಸಿ.
ಪಾಂಡವರ ಚಿಕ್ಕಪ್ಪ, ಮಹಾಜ್ಞಾನಿ ವಿಧುರರು ಹೇಳಿದಂತೆ ಈ ರೀತಿಯ ಜನರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ, ಈ ತಪ್ಪುಗಳನ್ನು ಈ ಕೂಡಲೇ ನಿಲ್ಲಿಸಿ. 2

ವಿದುರನ ನೀತಿಗಳು ಇಂದಿಗೂ ಕೂಡ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. ಇನ್ನು ಇಂದು ನಾವು ಹೇಳಹೊರಟಿರುವುದು ವಿದುರನ ನೀತಿಯ ಪ್ರಕಾರ ಈ ಕೆಲವು ವಿಧದ ವ್ಯಕ್ತಿಗಳ ಜೀವನದಲ್ಲಿ ಏನನ್ನು ಕೂಡ ಸಾಧಿಸಲು ಸಾಧ್ಯವಿಲ್ಲ. ಹಾಗಿದ್ದರೆ ಆ ವ್ಯಕ್ತಿಗಳು ಯಾರೆಲ್ಲ ಎಂಬುದನ್ನು ನಾವು ತಿಳಿಯೋಣ ಬನ್ನಿ.

ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳದವರು ಯಾರು ತಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಮಲಿನವಾಗಿ ಇಟ್ಟುಕೊಳ್ಳುತ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಲು ಸಾಧ್ಯವೇ ಇಲ್ಲ. ಹಾಗಾಗಿ ಸೂಚಿಯಾಗಿ ಇಲ್ಲದವರ ಮನೆಯಲ್ಲಿ ಉದ್ಧಾರ ಎನ್ನುವುದು ಆಗುವುದಿಲ್ಲ. ಹಿರಿಯರಿಗೆ ಗೌರವ ನೀಡದವರು ಯಾರು ತಮ್ಮ ಮನೆಯಲ್ಲಿ ಹಿರಿಯರಿಗೆ ಗೌರವವನ್ನು ನೀಡುವುದಿಲ್ಲವೋ ಅವರ ಮನೆಯಲ್ಲಿ ಉದ್ಧಾರ ಆಗುವುದಿಲ್ಲ ಕೇವಲ ದಾರಿದ್ರ್ಯ ಎನ್ನುವುದು ಸದಾಕಾಲ ನೆಲೆಸಿರುತ್ತದೆ.

ಉದಾಸೀನತೆಯಲ್ಲಿ ಇರುವವರು ಯಾವ ಕೆಲಸಗಳನ್ನು ಕೂಡ ಮಾಡದೆ ಉದಾಸೀನದಿಂದ ಇರುವವರ ಮನೆಯಲ್ಲಿ ಕೂಡ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಆಲಸ್ಯ ಎನ್ನುವುದು ಮನುಷ್ಯನ ಅತ್ಯಂತ ದೊಡ್ಡ ಶತ್ರು ಎಂಬುದಾಗಿ ವಿದುರ ಹೇಳಿದ್ದಾರೆ. ಮನುಷ್ಯ ಯಾವತ್ತೂ ಕೂಡ ಶ್ರಮಜೀವಿ ಆಗಿರಬೇಕು. ಭಗವಂತನ ಭರವಸೆಯಲ್ಲಿ ಕುಳಿತುಕೊಳ್ಳುವವರು ತಾವು ಕೆಲಸದಲ್ಲಿ ಯಾವ ಪ್ರಯತ್ನವನ್ನು ಕೂಡ ಮಾಡದೆ ಭಗವಂತ ನಮಗಾಗಿ ಎಲ್ಲವನ್ನು ಮಾಡಿಕೊಳ್ಳುತ್ತಾನೆ ಎಂದು ಏನೂ ಮಾಡದೆ ಕುಳಿತು ಕೊಳ್ಳುವವರಿಗೆ ಜೀವನದಲ್ಲಿ ಯಾವುದೇ ಉನ್ನತ ದಿನಗಳು ಕಂಡುಬರುವುದಿಲ್ಲ. ಇದಕ್ಕಾಗಿಯೇ ದೇವರ ಮೇಲೆ ಭರವಸೆ ಇಡುವುದರ ಜೊತೆಗೆ ಕೆಲಸದಲ್ಲಿ ಕೂಡ ಶ್ರಮವನ್ನು ವಹಿಸಬೇಕು. ಕಳ್ಳತನ ಮಾಡುವುದು ಯಾರು ಕಳ್ಳತನದಿಂದ ಹಣವನ್ನು ಸಂಪಾದಿಸುತ್ತಾರೆ ಅವರ ಬಳಿ ಆರ್ಥಿಕ ಅಥವಾ ಹಣ ಎನ್ನುವುದು ಹೆಚ್ಚಿನ ಸಮಯಗಳ ಕಾಲ ಉಳಿಯುವುದಿಲ್ಲ.

Comments are closed.