News from ಕನ್ನಡಿಗರು

ಆರೋಗ್ಯಕ್ಕಾಗಿ ಏನೆಲ್ಲಾ ಮಾಡುವ ನೀವು, ಮುಂಜಾನೆಯ ಐದು ನಿಮಿಷ ಹೀಗೆ ಬಿಸಿಲಿನಲ್ಲಿ ಮಾಡಿ ಸಾಕು, ಎಷ್ಟೆಲ್ಲ ಲಾಭ ಗೊತ್ತೇ??

0 260

ನಮಸ್ಕಾರ ಸ್ನೇಹಿತರೇ, ಪ್ರತಿ ಮಗು ಹುಟ್ಟಿದ ಮೇಲೆ ವೈದ್ಯರು ಸಲಹೆ ನೀಡುವುದು ಕೂಡ ಮಕ್ಕಳನ್ನು ಬೆಳಗಿನ ಎಳೆ ಬಿಸಿಲಿಗೆ ಮೈಒಡ್ಡಿ ನಿಲ್ಲಿಸಲು ಹೇಳುತ್ತಾರೆ. ಕಾರಣ ದೇಹಕ್ಕೆ ಸರಿಯಾಗಿ ವಿಟಮಿನ್ ಡಿ ಸಿಕ್ಕರೆ ದೇಹದಲ್ಲಿ ಉಳಿದೆಲ್ಲಾ ವಿಟಮಿನ್ ಗಳೂ ಉತ್ಪತ್ತಿಯಾಗುತ್ತದೆ. ವಿಟಮಿನ್ ಡಿ ಸಿಗುವುದು ಸೂರ್ಯನ ಕಿರಣಗಳಿಂದ. ಹಾಗಾಗಿ ದೇಹಕ್ಕೆ ಸರಿಯಾಗಿ ಸೂರ್ಯನ ಕಿರಣ ತಾಕುವುದು ಕೂಡ ಮುಖ್ಯ.

ರಕ್ತದ ಹರಿವು ಸರಾಗವಾಗಿ ಆಗಲು ಮಿಟಮಿನ್ ಡಿ ಬೇಕು. ಸೂರ್ಯನ ಬೆಳಕಿನಲ್ಲಿರುವ ಕಿರಣ ನೈಟ್ರಿಕ್ ಆಕ್ಸೈಡ್ ಅನ್ನು ಹೆಚ್ಚಿಸುತ್ತದೆ. ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ದೇಹದಲ್ಲಿ ಶಕ್ತಿ ಹಾಗೂ ಆರೋಗ್ಯ ಹೆಚ್ಚಳವಾಗುತ್ತದೆ. ಹಗಲಿನಲ್ಲಿ ಸೂರ್ಯನಿಂದ ಬರುವ ಕೆಂಪು ಬಣ್ಣದ ಕಿರಣಗಳು, ದೇಹದಲ್ಲಿ ಮೈಟೊಕಾಂಡ್ರಿಯಾದ ಕಾರ್ಯವನ್ನು ಉತ್ತಮಗೊಳಿಸಿ ದೇಹದಲ್ಲಿ ಶಕ್ತಿ ವೃದ್ಧಿಯಾಗುವಂತೆ ಮಾಡುತ್ತದೆ. ಸೂರ್ಯನ ನೈಸರ್ಗಿಕ ಬೆಳಕು ನಮ್ಮ ನರಮಂಡಲದ ಮೇಲೆ ಬೀಳುವುದರಿಂದ ನರಮಂಡಲ ಕಾರ್ಯ ಚುರುಕಾಗಿಸುತ್ತದೆ. ಮಾನಸಿಕ ಖಿನ್ನತೆ ಹಾಗೂ ಆತಂಕವನ್ನು ಹೋಗಲಾಡಿಸುತ್ತದೆ.

ಸೂರ್ಯನ ನೀಲಿ ಬೆಳಕು ದೇಹದಲ್ಲಿ ಹಾರ್ಮೋನುಗಳನ್ನು ಉತ್ಪಾದನೆ ಮಾಡಿ, ಮಾನಸಿಕ ಖಿನ್ನತೆಯನ್ನು ಹೋಗಲಾಡಿಸುತ್ತದೆ. ಉತ್ತಮ ನಿದ್ರೆಗಾಗಿಯೂ ಕೂಡ ಸೂರ್ಯನ ಬೆಳಕು ಬೇಕು. ಹೌದು ಬೆಳಗಿನ ವೇಳೆಯಲ್ಲಿ ಬೀಳುವ ಸೂರ್ಯನ ಬೆಳಕಿನಿಂದ ನಿದ್ರೆಯ ಹಾರ್ಮೋನ್ ಮೆಲಟೋನಿನ್ ನಲ್ಲಿ ಸುಧಾರಣೆಯಾಗುತ್ತದೆ. ಇದು ನಿದ್ರಾಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಸುರ್ಯನ ಬೆಳಕಿನಿಂದ ಸಿಗುವ ವಿಟಮಿನ್ ಡಿ ದೇಹಕ್ಕೆ ಸಿಗುವುದರಿಂದ ಕ್ಯಾನ್ಸರ್ ಸಮಸ್ಯೆಯೂ ಬರುವುದಿಲ್ಲ. ಇಂಥ ಹತ್ತು ಹಲವು ಪ್ರಯೋಜನಗಳನ್ನು ಹೊಂದಿರುವ ಸೂರ್ಯನ ಕಿರಣ ದಿನಕ್ಕೊಮ್ಮೆಯಾದರೂ ಮೈಮೇಲೆ ಬೀಳುವಂತೆ ನೋಡಿಕೊಳ್ಳಿ. ಮಕ್ಕಳಿಗೂ ಕೂಡ ಇದರ ಪ್ರಯೋಜನ ಆಗುವಂತೆ ನೋಡಿಕೊಳ್ಳಿ.

Leave A Reply

Your email address will not be published.