Worldcup 2023: ಸೆಮಿಫೈನಲ್ ನಲ್ಲಿ ನ್ಯೂಝಿಲೆಂಡ್ ಗೆ ಭಾರತ ತಂಡವನ್ನು ಸೋಲಿಸುವುದು ಹೇಗೆ ಎಂದು ವಿವರಿಸಿದ ಗಿಲ್‌ಕ್ರಿಸ್ಟ್

Worldcup 2023: ನಮಸ್ಕಾರ ಸ್ನೇಹಿತರೇ ಈ ಬಾರಿಯ ವಿಶ್ವಕಪ್ ನಲ್ಲಿ ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡ(Indian cricket team ) ತನ್ನ ಕನಸಿನ ಓಟವನ್ನು ಮುಂದುವರಿಸಿದೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಈಗಾಗಲೇ ಆಡಿರುವಂತಹ ಎಂಟಕ್ಕೆ 8 ಪಂದ್ಯಗಳನ್ನು ಕೂಡ ರೋಹಿತ್ ಶರ್ಮ(Rohit Sharma) ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಗೆದ್ದಿದೆ. ಇನ್ನೊಂದು ಆಡಲಿರುವ ಪಂದ್ಯವನ್ನು ಕೂಡ ಗೆಲ್ಲೋದು ಖಚಿತವಾಗಿದೆ. ಸೆಮಿ ಫೈನಲ್ ತಂಡಕ್ಕೆ ಅಜೇಯವಾಗಿ ಕಾಲಿಡುತ್ತಿರುವಂತಹ ಏಕೈಕ ತಂಡ ಭಾರತೀಯ ಕ್ರಿಕೆಟ್ ತಂಡವಾಗಿದೆ. ಇಂತಹ ಅಜೇಯ ಕ್ರಿಕೆಟ್ ತಂಡವನ್ನು ಸೋಲಿಸುವುದು ಹೇಗೆ ಎನ್ನುವುದರ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವಂತಹ ಆಡಂ ಗಿಲ್ಕ್ರಿಸ್ಟ್(adam gilchrist) ಹೇಳಿಕೊಂಡಿದ್ದಾರೆ.

ನಾನ್ ಸ್ಟಾಪ್ ಭಾರತ- Team India worldup 2023 Performance

ಈ ಬಾರಿಯ ಭಾರತದಲ್ಲಿಯೇ ನಡೆದಿರುವಂತಹ ವಿಶ್ವಕಪ್ ಸಾಕಷ್ಟು ವಿಚಾರಗಳಿಗಾಗಿ ಮುಂದಿನ ಸಾಕಷ್ಟು ವರ್ಷಗಳಿಗೆ ನೆನಪಿನಲ್ಲಿಟ್ಟುಕೊಳ್ಳುವ ಕ್ಷಣಗಳನ್ನು ಸೃಷ್ಟಿಸಿಕೊಟ್ಟಿದೆ. ರೋಹಿತ್ ಶರ್ಮಾ ಅವರ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಆಡಿರುವಂತಹ ಪ್ರತಿಯೊಂದು ಕೂಡ ಡಾಮಿನೆಂಟ್ ಪ್ರದರ್ಶನವನ್ನು ತೋರ್ಪಡಿಸಿದೆ. ಇನ್ನು ಭಾರತೀಯ ಕ್ರಿಕೆಟ್ ತಂಡ ಸೆಮಿ ಫೈನಲ್ ಹಂತದಲ್ಲಿ ಪಾಯಿಂಟ್ಸ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಳ್ಳುವಂತಹ ನ್ಯೂಜಿಲೆಂಡ್ ತಂಡದ ವಿರುದ್ಧ ಆಡಬಹುದು ಎಂಬುದಾಗಿ ಬಹುತೇಕ ಖಚಿತವಾಗಿದೆ.

ಭಾರತವನ್ನು ಸೋಲಿಸಲು ನ್ಯೂಜಿಲ್ಯಾಂಡ್ ತಂಡಕ್ಕೆ ಟಿಪ್ಸ್ ನೀಡಿದ ಗಿಲ್ಕ್ರಿಸ್ಟ್ – Adam Gilchrist shares his World Cup winning tactic against India.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವಂತಹ ಗಿಲ್ಕ್ರಿಸ್ಟ್ ಇತ್ತೀಚಿಗಷ್ಟೇ ಮಾಧ್ಯಮಗಳಿಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಸೋಲಿಸುವ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ವಿರಾಟ್ ಕೊಹ್ಲಿ ಸೇರಿದಂತೆ ಇನ್ನಿತರರು ಈ ಟೂರ್ನಮೆಂಟ್ ನಲ್ಲಿ ಚೇಸಿಂಗ್ ಮಾಡುವಾಗ ಯಾವ ರೀತಿಯಲ್ಲಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ ಎಂಬುದಾಗಿ ತಿಳಿದಿದ್ದು ಅದರ ಬಗ್ಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ ಎಂದು ಹೇಳಬಹುದು.

ಇದನ್ನು ಕೂಡ ಓದಿ; Get Loan Easily: ಅರ್ಜಿ ಹಾಕಿದರೆ, ಯಾವುದೇ ಬ್ಯಾಂಕ್ ರಿಜೆಕ್ಟ್ ಮಾಡಲ್ಲ- ಎಲ್ಲದಕ್ಕಿಂತ ಇದೇ ಬೆಸ್ಟ್ ಲೋನ್. ಎಷ್ಟು ಬೇಕಾದ್ರು ಕೊಡ್ತಾರೆ.

ಇನ್ನು ಭಾರತೀಯ ಬೌಲರ್ಗಳ ಬಗ್ಗೆ ಕೂಡ ಮಾತನಾಡುತ್ತಾ ಶಮಿ, ಸಿರಾಜ್, ಬೂಮ್ರಾ ಮೂರು ಜನರು ಕೂಡ ಮಾರಕ ಬೌಲಿಂಗ ದಾಳಿಯನ್ನು ಈ ಟೂರ್ನಮೆಂಟ್ನಲ್ಲಿ ತೋರ್ಪಡಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಇಲ್ಲಿ ಗಮನಿಸಬೇಕಾಗಿರುವ ವಿಚಾರ ಎಂದರೆ ಈ ಬೌಲಿಂಗ್ ದಾಳಿಯ ವಿರುದ್ಧ ರಾತ್ರಿ ಲೈಟ್ ಗಳಿಗೆ ಹೋಲಿಸಿದರೆ ಬೆಳಗ್ಗಿನ ಹೊತ್ತಿನಲ್ಲಿ ಬ್ಯಾಟ್ಸ್ಮನ್ಗಳಿಗೆ ಆಡುವುದು ಸುಲಭವಾಗಿದೆ. ಹೀಗಾಗಿ ಈ ಬೌಲಿಂಗ್ ದಾಳಿಯ ಅಕ್ರಮಕ ಶೈಲಿ ರಾತ್ರಿಯ ಸಂದರ್ಭದ ಆಟದಲ್ಲಿ ಇನ್ನಷ್ಟು ತೀಕ್ಷ್ಣ ವಾಗಿರುತ್ತದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಎದುರಾಳಿ ಬ್ಯಾಟ್ಸ್ಮನ್ ಗಳು ಅಥವಾ ತಂಡ ಬೆಳಗಿನ ಸಮಯದಲ್ಲಿ ಇವರ ಎದುರು ಆಡಿದರೆ ಸ್ವಲ್ಪಮಟ್ಟಿಗೆ ಅವಕಾಶವಿದೆ ಎಂಬುದಾಗಿ ಹೇಳಿದ್ದಾರೆ.

ಭಾರತದ ಪರ್ಫೆಕ್ಟ್ ಬೌಲಿಂಗ್ ಲೈನ್ ಅಪ್Indian Team Bowling Line up

ಈ ಸಂದರ್ಭದಲ್ಲಿ ಗಿಲ್ಕ್ರಿಸ್ಟ್ ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಬಗ್ಗೆ ಕೂಡ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ಬೇಕಾಗಿರುವಂತಹ ಅತ್ಯುತ್ತಮ ಪ್ರದರ್ಶನವನ್ನು ತೋರಿಸುತ್ತಿರುವುದು ಪ್ರತಿ ಪಂದ್ಯಗಳಲ್ಲಿ ಕೂಡ ಕಂಡು ಬರುತ್ತಿದೆ ಎಂಬುದಾಗಿ ಹೇಳಿದ್ದಾರೆ. ತಂಡದಲ್ಲಿ ಬೌಲಿಂಗ್ ಮಾಡದೆ ಇದ್ದರೂ ಕೂಡ ಬದಲಿ ಆಟಗಾರನ ರೀತಿಯಲ್ಲಿ ಅಶ್ವಿನ್ ಕೂಡ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರ್ಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಾಗಿ ಕೂಡ ಭಾರತೀಯ ಕ್ರಿಕೆಟ್ ತಂಡವನ್ನು ಗಿಲ್ಕ್ರಿಸ್ಟ್ ಪ್ರತಿಯೊಂದು ವಿಧದಲ್ಲಿ ಕೂಡ ಮನತುಂಬಿ ಹೊಗಳಿದ್ದಾರೆ ಎಂದು ಹೇಳಬಹುದಾಗಿದೆ.

cricket kannadacricket kannada newscricket news kannadacricket news kannada todaykannadakannada live newsKannada Newskannada news livekannada news paperkannada news paper todaytoday kannada newsಇಂದಿನ ವಾರ್ತೆಗಳು ಕನ್ನಡ liveನ್ಯೂಸ್ ಪೇಪರ್ today