ಕಳಪೆ ಪ್ರದರ್ಶನ ನೀಡುತ್ತಿರುವ ಸ್ಟಾರ್ ಆಟಗಾರರನ್ನು ಕೈ ಬಿಟ್ಟು, ವಿಶ್ವಕಪ್ ಗೆ ತಂಡ ಕಟ್ಟಿದ ಆಕಾಶ್ ಚೋಪ್ರಾ. ಸ್ಥಾನ ಪಡೆದವರು ಯಾರ್ಯಾರು ಗೊತ್ತೇ?

ಐಪಿಎಲ್ 15ನೇ ಆವೃತ್ತಿ ಮುಗಿದಿದ್ದು, ಈಗ ಎಲ್ಲರ ಕಣ್ಣು ಟಿ20 ವಿಶ್ವಕಪ್ ಪಂದ್ಯಗಳ ಮೇಲಿದೆ. ಜೂನ್ 9ರಿಂದ ಶುರುವಾಗಲಿರುವ, ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡದ ಸರಣಿ ವಿಶ್ವಕಪ್ ಪಂದ್ಯದ ಟೀಮ್ ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂದು ಈಗಾಗಲೇ ಬಿಸಿಸಿಐ ಅನೌನ್ಸ್ ಮಾಡಿದೆ. ಇದರ ನಡುವೆ ಇದೀಗ, ಐಸಿಸಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಯಾರೆಲ್ಲಾ ಇರಬೇಕು ಎನ್ನುವುದನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಆಯ್ಕೆ ಮಾಡಿ, ತಾವು ಸೆಲೆಕ್ಟ್ ಮಾಡುವ ಹೊಸ ಟೀಮ್ ಹೇಗಿರುತ್ತೆ ಎಂದು ತಮ್ಮ ಯೂಟ್ಯೂಬ್ ಚಾನಲ್ ನ ವಿಡಿಯೋ ಮೂಲಕ ತಿಳಿಸಿದ್ದಾರೆ. ಆಕಾಶ್ ಚೋಪ್ರಾ ಸೆಲೆಕ್ಟ್ ಮಾಡಿರುವ ಟೀಮ್ ಹೇಗಿದೆ ಎಂದು ನೋಡೋಣ ಬನ್ನಿ..

ಆಕಾಶ್ ಚೋಪ್ರಾ ಅವರು ಐಪಿಎಲ್ ನಲ್ಲಿ ಕಮಾಲ್ ಮಾಡದೆ ಇದ್ದ ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್ ಅವರನ್ನೆಲ್ಲ ಬಿಟ್ಟು ಹೊಸ ತಂಡ ಸೃಷ್ಟಿಸಿದ್ದಾರೆ ಆಕಾಶ್ ಚೋಪ್ರಾ. ಹಾಗಿದ್ರೆ ಆಕಾಶ್ ಚೋಪ್ರಾ ಅವರ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎಂದು ನೋಡೋಣ ಬನ್ನಿ..ಇವರು ತೆಗೆದುಕೊಂಡಿರುವ ಮೊದಲ ಹೆಸರು ಕೆ.ಎಲ್.ರಾಹುಲ್. ರಾಹುಲ್ 16 ರಿಂದ 27 ಓವರ್ ಗಳ ವರೆಗೂ ರ್
ಕ್ರೀಸ್ ನಲ್ಲಿರುತ್ತಾರೆ. ಟಿ20 ಕ್ರಿಕೆಟ್ ಗೆ ರಾಹುಲ್ ಗನ್ ಬ್ಯಾಟ್ಸ್ಮನ್ ಇದ್ದಹಾಗೆ ಎನ್ನುತ್ತಾರೆ ಆಕಾಶ್ ಚೋಪ್ರಾ. ಎರಡನೇ ಆಯ್ಕೆ ಎಡಗೈ ಬ್ಯಾಟ್ಸ್ಮನ್ ಇಶಾನ್ ಕಿಶನ್, ಈ ಇಬ್ಬರು ಓಪನಿಂಗ್ ಬ್ಯಾಟ್ಸ್ಮನ್ ಗಳಾಗಿರಬೇಕು ಎಂದಿದ್ದಾರೆ. 3ನೇ ಮತ್ತು 4ನೇ ಬ್ಯಾಟ್ಸ್ಮನ್ ಗಳಾಗಿ ರಾಹುಲ್ ತ್ರಿಪಾಠಿ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆಮಾಡಿದ್ದಾರೆ.. ಐಪಿಎಲ್ ನಲ್ಲಿ ಇವರಿಬ್ಬರು ಉತ್ತಮವಾದ ಪ್ರದರ್ಶನ ನೀಡಿದ್ದರು. ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದಾರೆ ಆಕಾಶ್.

ಕಳಪೆ ಪ್ರದರ್ಶನ ನೀಡುತ್ತಿರುವ ಸ್ಟಾರ್ ಆಟಗಾರರನ್ನು ಕೈ ಬಿಟ್ಟು, ವಿಶ್ವಕಪ್ ಗೆ ತಂಡ ಕಟ್ಟಿದ ಆಕಾಶ್ ಚೋಪ್ರಾ. ಸ್ಥಾನ ಪಡೆದವರು ಯಾರ್ಯಾರು ಗೊತ್ತೇ? 2

ಜೊತೆಗೆ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಇಡಲು ಬಯಸಿದ್ದಾರೆ. 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ 6ನೇ ಬ್ಯಾಟ್ಸ್ಮನ್ ಮತ್ತು ಫಿನಿಷರ್ ಹಾಗೂ ವಿಕೆಟ್ ಕೀಪಿಂಗ್ ಗಾಗಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಡಿಕೆ ಅವರನ್ನು ಹೊಗಳಿದ್ದಾರೆ ಆಕಾಶ್ ಚೋಪ್ರಾ. 7ನೇ ಕ್ರಮಾಂಕದಲ್ಲಿ ಸ್ಪಿನ್ನರ್ ಮತ್ತು ಆಲ್ ರೌಂಡರ್ ಆಗಿರುವ ಕೃನಾಲ್ ಪಾಂಡ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನುಳಿದ ನಾಲ್ಕು ಪ್ಲೇಯರ್ ಗಳು ಮೊಹಮ್ಮದ್ ಶಮಿ, ಯುಜವೇಂದ್ರ ಚಾಹಲ್, ಆವೇಶ್ ಖಾನ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆಮಾಡಿಕೊಂಡಿದ್ದಾರೆ. ಯುಜವೇಂದ್ರ ಚಾಹಲ್ ಅವರೊಡನೆ ಮೂರು ಫಾಸ್ಟ್ ಬೌಲರ್ ಗಳನ್ನು ಆಯ್ಕೆ ಮಾಡಿದ್ದಾರೆ ಆಕಾಶ್ ಚೋಪ್ರ. ಆಕಾಶ್ ಚೋಪ್ರಾ ಅವರ ಪ್ಲೇಯಿಂಗ್ 11 ಟೀಮ್ ಹೀಗಿದ್ದು ತಂಡದಲ್ಲಿ ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್, ಹಾಗೂ ಜಸ್ಪ್ರೀತ್ ಬುಮ್ರ ಇದ್ದಾರೆ.