ಅಪ್ಪು ಇಹಲೋಕ ತ್ಯಜಿಸಲು ಜಾತಕ ಕಾರಣನಾ?? ಜಾತಕದಲ್ಲಿ ಏನಿತ್ತು ಗೊತ್ತೇ?? ಜ್ಯೋತಿಷಿಗಳು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೇ ಹಲವಾರು ದಿನಗಳು ಕಳೆದುಹೋಗಿವೆ. ಅವರು ಇಲ್ಲ ಎಂಬ ದುಃಖವನ್ನು ಅರಗಿಸಿಕೊಳ್ಳುವುದು ಇರಲಿ ಅದರ ಸುಳಿವು ಬಂದರೂ ಕೂಡ ಮನಸ್ಸಿಗೆ ಹೃದಯಾಘಾತದ ಅನುಭವವಾಗುತ್ತಿದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಸಮಾಧಿಗೆ ಅಂತಿಮ ವಿಧಿವಿಧಾನಗಳನ್ನು ಮಾಡಿದ್ದು ರಾಘವೇಂದ್ರ ರಾಜಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜಕುಮಾರ್. ಈಗಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ದೇಹಾಂತ್ಯವಾಗಿ ವಾರಗಳೇ ಕಳೆದಿದ್ದರೂ ಕೂಡ ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿಯನ್ನು ನೋಡಲು ಸೇರಿರುವ ಜನಸಂಖ್ಯೆ ಸಾವಿರಾರು. ಅದು ಅವರ ಜೀವಮಾನದಲ್ಲಿ ಸಂಪಾದಿಸಿದ ನಿಜವಾದ ಸಂಪಾದನೆ ಎಂದು ಹೇಳಬಹುದು. ಇನ್ನೂ ಅವರು ಈ ವಯಸ್ಸಲ್ಲದ ವಯಸ್ಸಿನಲ್ಲಿ ಮರಣ ಹೊಂದಲು ಏನು ಕಾರಣವೆಂಬುದನ್ನು ಜ್ಯೋತಿಷಿಯೊಬ್ಬರು ತಿಳಿಸಿದ್ದಾರೆ.

ಜ್ಯೋತಿಷ್ಯ ಒಬ್ಬರು ಹೇಳುವ ಪ್ರಕಾರ ಅಕ್ಟೋಬರ್ 20 ರಿಂದ ನವೆಂಬರ್ 14 ರವರೆಗೆ ಪುನೀತ್ ರಾಜಕುಮಾರ್ ಅವರ ಜಾತಕದಲ್ಲಿ ಕುಜ ಹಾಗೂ ರಾಹುವಿನ ದೋಷವಿತ್ತು. ಅದರಲ್ಲೂ ಆರೋಗ್ಯ ಸಂಬಂಧಿತ ದೋಷ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಅವರು ತಮ್ಮ ಆರೋಗ್ಯ ಹಾಗೂ ಇನ್ನಿತರ ವಿಚಾರಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗಿತ್ತು. ಅವರ ಚಿತ್ರೀಕರಣದ ಜಂಜಾಟದಲ್ಲಿ ಜಾತಕವನ್ನು ಅವರು ಪರಿಶೀಲಿಸಿಲ್ಲ. ಇಲ್ಲದಿದ್ದರೆ ಆಗುವ ಅನಾಹುತವನ್ನು ಮುಂಚೆಯೇ ತಡೆಯಬಹುದಾಗಿತ್ತು ಎಂಬುದನ್ನು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಹೇಳಿದಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮರಣ ಹೊಂದಿದ್ದು ಅಕ್ಟೋಬರ್ 29ರಂದು. ಹಾಗಿದ್ದರೆ ಪವರ್ಸ್ಟಾರ್ ರವರ ನಿಧನಕ್ಕೆ ಅವರ ಜಾತಕದ ದೋಷವೂ ಕಾರಣವಾಗಿತ್ತೇ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಅವರು ಹೇಳುವ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.