ಬಿಗ್ ನ್ಯೂಸ್: ಐಪಿಎಲ್ ನಲ್ಲಿ ಹರಾಜು ಆಗದೆ ಇದ್ದರೂ ಒಲಿದು ಬಂದ ಅದೃಷ್ಟ, ಮತ್ತೆ ಐಪಿಎಲ್ ಗೆ ಕಾಲಿಟ್ಟ ಆರೋನ್ ಫಿಂಚ್. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ20 ವಿಶ್ವಕಪ್ ವಿಜೇತ ತಂಡದ ನಾಯಕ ಎಂದರೇ ಅದು ಆಸ್ಟ್ರೇಲಿಯಾದ ಆರೋನ್ ಫಿಂಚ್. ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿ ವೈಟ್ ಬಾಲ್ ಕ್ರಿಕೆಟ್ ನಲ್ಲಿ ಫಿಂಚ್ ಹಲವಾರು ದಾಖಲೆ ನಿರ್ಮಿಸಿದ್ದಾರೆ. ಆದರೇ ಐಪಿಎಲ್ ನಲ್ಲಿ ಮಾತ್ರ ಫಿಂಚ್ ಇನ್ನು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಈಗಾಗಲೇ ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳ ಪರ ಆಡಿರುವ ಫಿಂಚ್ ಕಳೆದ ವರ್ಷ ಆರ್ಸಿಬಿ ತಂಡದಲ್ಲಿ ಸಹ ಆಡಿದ್ದರು.

ಆದರೇ ನಂತರ ನಡೆದ ಹರಾಜಿನಲ್ಲಿ ಯಾವ ಫ್ರಾಂಚೈಸಿಗಳು ಸಹ ಫಿಂಚ್ ರನ್ನು ಖರೀದಿಸಲು ಮುಂದೆ ಬರಲಿಲ್ಲ. ಹಾಗಾಗಿ ಅವರು ಅನ್ ಸೋಲ್ಡ್ ಆಗಿ ಉಳಿಯಬೇಕಾಯಿತು. ಈ ಭಾರಿ ವಿಶ್ವಕಪ್ ವಿಜೇತ ತಂಡದ ನಾಯಕ ಐಪಿಎಲ್ ನಲ್ಲಿ ಭಾಗವಹಿಸುವುದೇ ಇಲ್ಲ ಎಂದು ಹೇಳಲಾಗಿತ್ತು. ಆದರೇ ಈಗ ಬದಲಾದ ಸನ್ನಿವೇಶದಲ್ಲಿ ಈಗ ಆರೋನ್ ಫಿಂಚ್ ಐಪಿಎಲ್ ನಲ್ಲಿ ಮತ್ತೊಮ್ಮೆ ಸ್ಥಾನ ಪಡೆದಿದ್ದಾರೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಬಿಗ್ ನ್ಯೂಸ್: ಐಪಿಎಲ್ ನಲ್ಲಿ ಹರಾಜು ಆಗದೆ ಇದ್ದರೂ ಒಲಿದು ಬಂದ ಅದೃಷ್ಟ, ಮತ್ತೆ ಐಪಿಎಲ್ ಗೆ ಕಾಲಿಟ್ಟ ಆರೋನ್ ಫಿಂಚ್. ಹೇಗೆ ಗೊತ್ತೇ?? 2

ಈ ಭಾರಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಹರಾಜಿನಲ್ಲಿ ಆರಂಭಿಕ ಬ್ಯಾಟ್ಸಮನ್ ಆಗಿ ಇಂಗ್ಲೆಂಡ್ ನ ಅಲೆಕ್ಸ್ ಹೇಲ್ಸ್ ರನ್ನು ಖರೀದಿಸಿತ್ತು. ಆದರೇ ದೀರ್ಘಾವಧಿ ಐಪಿಎಲ್ ಸರಣಿಯಲ್ಲಿ ಬಯೋಬಬಲ್ ನಲ್ಲಿ ಇರಲು ಸಮಸ್ಯೆ ಎಂದು ಈ ಭಾರಿಯ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ. ಅವರ ಬದಲೀ ಆಟಗಾರನನ್ನು ಹುಡುಕುತ್ತಿದ್ದ ಕೆಕೆಆರ್ ತಂಡ ಕೊನೆಗೂ ಯಶಸ್ವಿಯಾಗಿದೆ. ಅಲೆಕ್ಸ್ ಹೇಲ್ಸ್ ಬದಲೀ ಆಟಗಾರನಾಗಿ ಆಸ್ಟ್ರೇಲಿಯಾದ ಆರೋನ್ ಫಿಂಚ್ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ.ಕೊನೆಗೂ ವಿಶ್ವಕಪ್ ವಿಜೇತ ತಂಡದ ನಾಯಕ ಈ ಭಾರಿಯ ಐಪಿಎಲ್ ನಲ್ಲಿ ಆಡುವುದು ಪಕ್ಕಾ ಆಗಿದೆ. ಭಾರತ ತಂಡದ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಜೊತೆ ಆರೋನ್ ಫಿಂಚ್ ಕೆಕೆಆರ್ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದು ಕೆಕೆಆರ್ ತಂಡಕ್ಕೆ ಯಾವ ರೀತಿ ವರದಾನವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.