ತನ್ನ ಆಟೋ ರಿಕ್ಷಾ ಬಿಡಿಸಿಕೊಳ್ಳಲು ಮಗನ ಹುಂಡಿ ಹಣ ತಂದು ಕೊಟ್ಟ ವ್ಯಕ್ತಿ! ಬಳಿಕ ಪೋಲೀಸ್ ಮಾಡಿದ್ದೇನು??

ನಮಸ್ಕಾರ ಸ್ನೇಹಿತರೇ ಪೋಲೀಸರು ಎಂದ ಕೂಡಲೇ ನಮಗೆ ನೆನಪಾಗೋದೇ ಅವರ ರೋಲ್ ಕಾಲ್ ಗಳು, ಅನಗತ್ಯವಾಗಿ ಹಣ ವಸೂಲಿ ಮಾಡ್ತಾರೆ ಅನ್ನೋದು, ಇನ್ನೂ ಸಿನಿಮಾಗಳಲ್ಲಿ ತೋರಿಸುವಂತೆ ಎಲ್ಲಾ ಮುಗಿದ ಮೇಲೆ ಬರೋರ್‍ಎ ಪೋಲಿಸರು ಎನ್ನೋದು. ಆದರೆ ಇವು ಕೇವಲ ನಮ್ಮ ಪೂರ್ವಾಗ್ರಹ ಮಾತ್ರ. ಹೌದು ಸ್ನೇಹಿತರೆ ಎಲ್ಲಾ ಪೋಲೀಸ್ ಅಧಿಕಾರಿಗಳೂ ಹಾಗೆಯೇ ಇರುವುದಿಲ್ಲ. ಕೆಲವು ನಿಷ್ಠ ಅಧಿಕಾರಿಗಳೂ ಇದ್ದು ಅವರಲ್ಲಿ ಮಾನವೀಯತೆಯೂ ಕೂಡ ಮನೆ ಮಾಡಿದೆ. ಬಡವರ ಕಷ್ಟಕ್ಕೆ ಸ್ಪಂದಿಸುವಂಥ ಸಾಕಷ್ಟು ಪೋಲೀಸ್ ಅಧಿಕಾರಿಗಳೂ ಕೂಡ ನಮ್ಮ ನಡುವೆ ಇದ್ದಾರೆ.

ಇಷ್ಟೇಲ್ಲಾ ಪೀಠಿಕೆ ಯಾಕೆ ಅಂತೀರಾ? ಇದಕ್ಕೆ ಸಂಬಂಧಿಸಿದ ಒಂದು ಘಟನೆ ಬಗ್ಗೆ ನಾವಿಲ್ಲಿ ಹೇಳಿದ್ದೇವೆ ಮುಂದೆ ಓದಿ.. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಘಟನೆ ಇದು. ಅನೇಕ ಪೋಲೀಸ್ ಅಧಿಕಾರಿಗಳು ಬಡವರಿಗೆ ನೆರವು ನೀಡುತ್ತಾರೆ. ಇದು ಅಜಯ್ ಮಾಳವೀಯ ಅವರ ಕಥೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ರೋಹಿತ್ ಖಡ್ಸೆ ಎಂಬವರು ನೋ ಪಾರ್ಕಿಂಗ್ ನಲ್ಲಿ ತಮ್ಮ ಆಟೋ ,ರಿಕ್ಷಾವನ್ನು ನಿಲ್ಲಿಸಿದ್ರು. ಇದು ನೋ ಪಾರ್ಕಿಂಗ್ ಆಗಿರೋಂದ್ರಿಂದ ಸಂಚಾರಿ ಪೋಲೀಸರು ರೋಹಿತ್ ಗೆ ದಂಡ ವಿಧಿಸಿದ್ರು. ಈ 2000 ರೂಪಾಯಿ ಮೊತ್ತದ ದಂಡ ವಿಧಿಸಲು ರೋಹಿತ್ ಬಳಿ ಹಣವಿರಲಿಲ್ಲ. ಹಣ ಕಟ್ಟುವವರೆಗೂ ಸೀಜ್ ಆದ ಆಟೋವನ್ನು ಕೊಡಲು ಪೋಲಿಸರು ಒಪ್ಪಲಿಲ್ಲ.

ನಂತರ ರೋಹಿತ್ ತನ್ನ ಮಗನ ಹಣ ಹುಂಡಿಯನ್ನು ತಂದು ಪೋಲೀಸ್ ಅಧಿಕಾರಿಯ ಮುಂದಿಡುತ್ತಾರೆ. ರೋಹಿತ್ ಅವರ ಈ ಕಷ್ತವನ್ನು ನೋಡಿ ಮನ ನೊಂದ ಪೋಲಿಸ್ ಅಧಿಕಾರಿ ಅಜಯ್ ಮಾಳವೀಯ ಅವರು ರೋಹಿತ್ ದಂಡದ ಹಣವನ್ನು ತಾವೇ ಭರಿಸಿ ಅವರ ಆಟೋವನ್ನು ಕೊಟ್ಟು ನೋ ಪಾರ್ಕಿಂಗ್ ಗಳಲ್ಲಿ ಇನ್ನು ಗಾಡಿ ನಿಲ್ಲಿಸದಂತೆ ಬುದ್ಧಿ ಹೇಳಿ ಕಳುಹಿಸುತ್ತಾರೆ. ಹೀಗೆ ಬಡ ಆಟೋ ಚಾಲಕನಿಗೆ ನೆರವಾಗಿ ಇನ್ಸ್ಪೆಕ್ಟರ್ ಅಜಯ್ ಮಾನವೀಯತೆ ಮೆರೆದಿದ್ದಾರೆ. (ಅಜಯ್ ಮಾಳವೀಯ ರೋಹಿತ್ ಖಡ್ಸೆ)