ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ವರ್ಷ ಬದುಕಲು ಕಾರಣ ಏನು ಗೊತ್ತಾ ?? ಕೊನೆಗೂ ಅಸಲಿ ಸತ್ಯ ಬಯಲು.

ನಮಸ್ಕಾರ ಸ್ನೇಹಿತರೇ ಈ ಭೂಮಿ ಮೇಲೆ ಹುಟ್ಟುವಂತಹ ಪ್ರತಿಯೊಂದು ಜೀವಿಗೂ ಕೂಡ ಭಗವಂತ ಒಂದು ಆಯಸ್ಸು ಎಂಬುದನ್ನು ನಿರ್ಧಾರ ಮಾಡಿರುತ್ತಾನೆ ಎಂಬುದಾಗಿ ಹೇಳುತ್ತಾರೆ. ವೈಜ್ಞಾನಿಕವಾಗಿ ಕೂಡ ಕೆಲವೊಂದು ಜೀವಿಗಳಿಗೆ ಇಂತಿಷ್ಟು ಆಯಸ್ಸು ಇರುತ್ತದೆ ಎಂಬುದಾಗಿ ಕೂಡಾ ದಾಖಲೆಯಲ್ಲಿ ದಾಖಲಿಸುತ್ತಾರೆ. ಇಂದು ನಾವು ನಿಮ್ಮ ಮುಂದೆ ಒಂದು ಪ್ರಶ್ನೆಯನ್ನು ಇಡುತ್ತೇವೆ ಗೆಳೆಯರೇ. ಅದೇನೆಂದರೆ ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ವರ್ಷಗಳ ಕಾಲ ಬದುಕುವುದು ಹೆಣ್ಣೋ ಇಲ್ಲವೇ ಗಂಡೋ ಎಂಬುದಾಗಿ.

ಇದಕ್ಕೂ ಕೂಡ ಅದರದ್ದೇ ಆದಂತಹ ವೈಜ್ಞಾನಿಕ ಕಾರಣಗಳು ಇವೆ. ಕೆಲವೊಮ್ಮೆ ದೇವರು ಪೂರ್ತಿಯಾಗಿ ಆಯುಷ್ಯವನ್ನು ನೀಡಿದರೂ ಕೂಡ ಕೆಲವರು ಆರೋಗ್ಯ ಸಮಸ್ಯೆಗಳಿಂದಾಗಿ ಮರಣವನ್ನು ಹೊಂದುತ್ತಾರೆ. ಇನ್ನು ಕೆಲವರು ಚಿನ್ನದಂತಹ ಆಯಸ್ಸನ್ನು ಒಳ್ಳೆಯ ಕಾರ್ಯಕ್ಕಾಗಿ ಬಳಸಿಕೊಳ್ಳದೆ ಅರ್ಧದಲ್ಲಿಯೇ ತಮ್ಮ ಜೀವನವನ್ನು ಮುಗಿಸಿಕೊಳ್ಳುವ ಮೂಲಕ ಮರಣವನ್ನು ಹೊಂದುತ್ತಾರೆ. ಇನ್ನು ಇಂದು ನಾವು ಹೇಳಹೊರಟಿರುವ ಮುಖ್ಯ ವಿಚಾರ ದ ಕುರಿತಂತೆ ತಿಳಿಯೋಣ ಬನ್ನಿ. ಹೆಚ್ಚಿನ ಆಯಸ್ಸನ್ನು ಹೊಂದಿರುವುದು ಹೆಣ್ಣೋ-ಗಂಡೋ ಎನ್ನೋ ನಿಮ್ಮ ಕುತೂಹಲವನ್ನು ತಣಿಸುತ್ತೇವೆ ಬನ್ನಿ.

ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ವರ್ಷ ಬದುಕಲು ಕಾರಣ ಏನು ಗೊತ್ತಾ ?? ಕೊನೆಗೂ ಅಸಲಿ ಸತ್ಯ ಬಯಲು. 2

ಹೌದು ಗಂಡಿಗಿಂತ ಹೆಣ್ಣು ಹೆಚ್ಚು ವರ್ಷಗಳ ಕಾಲ ಬದುಕುವುದು. ಇದು ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ರಿಸರ್ಚ್ ನಲ್ಲಿ ತಿಳಿದುಬಂದಿರುವುದು. ಈ ಕುರಿತಂತೆ ಮೊದಲನೇ ಕಾರಣ ಹೇಳುವುದಾದರೆ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಈಸ್ಟ್ರೋಜನ್ ಕಡಿಮೆ ಟೆಸ್ಟೋಸ್ಟೆರಾನ್ ಕಾರಣದಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗಿ ಕಾಣಿಸಿಕೊಳ್ಳುತ್ತದೆ. ಪುರುಷರು ಕೆಲಸದ ಜಂಜಾಟದಲ್ಲಿ ಇರುವಾಗ ಆರೋಗ್ಯದ ಕುರಿತಂತ ಹೆಚ್ಚಾಗಿ ಗಮನ ವಹಿಸುವುದಿಲ್ಲ. ಆದರೆ ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ಆರೋಗ್ಯದ ಕುರಿತು ಗಮನ ವಹಿಸುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆಯನ್ನು ಕೂಡ ಮಾಡಿಕೊಳ್ಳುತ್ತಿರುತ್ತಾರೆ. ಅಲ್ಲದೆ ಈ ಮೂಲಕ ಶೇಕಡಾ 33 ರಷ್ಟು ಮಹಿಳೆಯರು ಆಸ್ಪತ್ರೆಗೆ ಹೋದರೆ ಆಸ್ಪತ್ರೆಗಳಿಗೆ ಹೋಗುವ ಪುರುಷರ ಸಂಖ್ಯೆ ಕಡಿಮೆ ಎನ್ನುವುದು ತಿಳಿದು ಬಂದಿದೆ. ಪುರುಷರಿಗಿಂತ ಹೆಚ್ಚಾಗಿ ಸಮತೋಲನ ಹಾಗೂ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸುವುದರಿಂದ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಬದುಕುತ್ತಾರೆ.