ಗಂಡಸರೇ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬೇಕು ಎಂದರೇ ಈ ಮೂರು ಟಿಪ್ಸ್ ಫಾಲೋ ಮಾಡಿ ಸಾಕು. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಗಂಡಸರು ತಮ್ಮ ಕೆಲಸ ಹಾಗೂ ಜವಾಬ್ದಾರಿಗಳ ಸಲುವಾಗಿ ತಮ್ಮ ಸೌಂದರ್ಯದ ಮೇಲೆ ಸಾಕಷ್ಟು ಗಮನ ವಹಿಸಲು ಆಗೋದಿಲ್ಲ. ಅದರಲ್ಲೂ ಈ ಯುಗದಲ್ಲಂತೂ ಕೇಳೋಕೆ ಹೋಗಬೇಡಿ, ಅಷ್ಟರಮಟ್ಟಿಗೆ ಬಿಜಿ ಆಗಿರುತ್ತಾರೆ. ಹೀಗಾಗಿ ಇಂತಹ ಬಿಜಿ ಸಂದರ್ಭದಲ್ಲಿ ಈ ಬ್ಯೂಟಿ ಟಿಪ್ಸ್ ಗಳನ್ನು ನೆನಪಿಟ್ಟುಕೊಳ್ಳುವುದು ಅಸಾಧ್ಯವೇ ಸರಿ. ಹೀಗಾಗಿ ನಾವು ನಿಮಗೆ ಸುಲಭವಾಗಿ ನೆನಪಾಗುವ ಹಾಗೂ ಒಳ್ಳೆಯ ಫಲಿತಾಂಶ ನೀಡುವಂತಹ ಕೆಲವೊಂದು ಬ್ಯೂಟಿ ಟಿಪ್ಸ್ ಗಳನ್ನು ಹೊತ್ತು ತಂದಿದ್ದೇವೆ.

ಮೊದಲನೆಯದಾಗಿ ನೀವು ಈ ಟೆಕ್ನಿಕ್ ಅನ್ನು ನೆನಪಿಟ್ಟುಕೊಳ್ಳಬೇಕು, ಅದೇನೆಂದರೆ, ಸಿಟಿಎಂ. ಸಿ ಅಂದರೆ, ಕ್ಲೆನ್ಸಿಂಗ್, ಟಿ ಅಂದ್ರೆ ಸ್ಕಿನ್ ಟೋನರ್, ಮತ್ತು ಎಂ ಅಂದ್ರೆ ಮಾಯಿಶ್ಚರೈಸಿಂಗ್. ಈ ಎಲ್ಲಾ ಅಂಶಗಳು ಸಾಮಾನ್ಯವಾಗಿ ಮಹಿಳೆಯರಿಗೆ ಗೊತ್ತಿರುತ್ತದೆ, ಆದರೆ ಪುರುಷರಿಗೆ ಮಾತ್ರ ಸ್ವಲ್ಪ ಕಠಿಣ ಅನ್ಸೋದು ಸಹಜ. ನೀವು ಈ ಮೂರನ್ನು ಮಾಡಿದರೆ ನಿಮ್ಮ ಮುಖ ಹೊಳೆಯಲು ಆರಂಭಿಸುತ್ತದೆ. ಅಂದರೆ ನಿಮ್ಮ ಮುಖದಲ್ಲಿ ಕಳೆ ಎದ್ದು ಕಾಣುತ್ತದೆ. ಹಾಗೆ ಹೆಚ್ಚು ನೀರು ಕುಡಿಯುವುದು, ಹೆಚ್ಚಾಗಿ ಹಣ್ಣುಗಳು ಮತ್ತು ತರಕಾರಿಗಳನ್ನ ತಿನ್ನುವುದು ಮತ್ತು ಆದಷ್ಟು ಡ್ರೈ ಫ್ರೂಟ್ಸ್ ತಿನ್ನುವುದು.

ಈ ಎಲ್ಲಾ ಅಂಶಗಳು ನೀವು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಪ್ರಮಾಣದಲ್ಲಿ ಸ್ವೀಕರಿಸಬೇಕಾಗುತ್ತದೆ. ನಂತರ ಕ್ಲೀನ್ಸಿಂಗ್ ಮಾಡುವುದಕ್ಕೆ ಎಕ್ಸ್ಟ್ರಾ ಒರಿಜಿಲ್ ಆಲಿವ್ ಆಯಿಲ್ ಯೂಸ್ ಮಾಡಿದರೆ ತುಂಬಾ ಉತ್ತಮ. ಇದು ಎಲ್ಲಾ ತರಹದ ಚರ್ಮಕ್ಕೂ ಅನುಕೂಲಕಾರಿ. ಇದನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ಯಾವುದಾದರೂ ಆಯುರ್ವೇದದ ಉತ್ತಮ ವಾದ ಸೋಪ್ ಅನ್ನು ಬಳಸಿ ಮುಖ ತೊಳೆಯಿರಿ. ಮತ್ತು ಟೋನರ್ ಬಳಸುವ ವಿಧಾನ ಒಂದು ಕಪ್ ಗೆ ಆ್ಯಪಲ್ ಸೈಡರ್ ವಿನೆಗರ್ ಹಾಕಿ ನೀರನ್ನು ಅದರಲ್ಲಿ ಹಚ್ಚಿ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖ ಸ್ಮೂತ್ ಆಗುತ್ತೆ ಮತ್ತು ಕಾಂತಿ ಹೆಚ್ಚುತ್ತದೆ, ರಫ್ ಸ್ಕಿನ್ ಇರುವವರು, ಆ್ಯಪಲ್ ಸೈಡರ್ ವಿನಿಗರ್ ಬಳಸಿ, ಸ್ಮೂತ್ ಸ್ಕಿನ್ ಇರುವವರು ರೋಸ್ ವಾಟರ್ ಬಳಸಿ.

ಇನ್ನು ಕೊನೆಯದಾಗಿ ಮಾಯಿಶ್ಚರೈಸರ್ ಮಾಡುವುದು ಹೇಗೆ ಅಂದರೆ ಪ್ರತಿನಿತ್ಯ ನೀವು ಮಲಗುವಾಗ ಪರಿಶುದ್ಧ ಕೊಬ್ಬರಿ ಎಣ್ಣೆಯನ್ನು ಪ್ರತಿ ರಾತ್ರಿ ಹಚ್ಚಿಕೊಂಡು ಮಲಗಬೇಕು. ಅಥವಾ ನೀವು ಶೇವಿಂಗ್ ಮಾಡಿದ ನಂತರ ಅಲೋವೆರಾ ಜಲ್ ಅನ್ನು ಹಚ್ಚಿಕೊಂಡರೆ ಸಾಕಷ್ಟು ಪ್ರಯೋಜನಗಳು ನಿಮ್ಮದಾಗುತ್ತವೆ. ಈ ಎಲ್ಲಾ ನಿಯಮಗಳನ್ನು ಪಾಲಿಸುತ್ತಾ ಬಂದರೆ ನಿಮ್ಮ ತ್ವಚೆಯನ್ನು ಆದಷ್ಟು ಬೇಗ ವೃದ್ಧಿಸಿಕೊಳ್ಳಬಹುದು.