ದಿನಕ್ಕೆ ನಾಲ್ಕು ಬಾದಾಮಿ ಸೇವಿಸುತ್ತಾ ಬಂದರೇ , ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಡವರ ಬಾದಾಮಿ ಅನ್ನೋದು ಶೇಂಗಾಕ್ಕೆ. ಕಾರಣ ಅದು ಕಡಿಮೆ ಬೆಲೆಯಲ್ಲಿ ಸುಲಭವಾಗಿ ಸಿಗುತ್ತದೆ. ಆದರೇ ಒರಿಜಿನಲ್ ಬಾದಾಮಿ ಮಾತ್ರ ಶ್ರೀಮಂತರಿಗೆ ಮೀಸಲಾಗಿರೋದು. ಏಕೆಂದರೇ ಒಂದು ಕೆಜಿ ಬಾದಾಮಿಗೆ ಕನಿಷ್ಠ ಅಂದರೂ ಒಂದು ಸಾವಿರ ರೂಪಾಯಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಬಾದಾಮಿಯನ್ನ ತಿನ್ನಲು ಸಾಧ್ಯವಿಲ್ಲ. ಆದರೇ ದಿನಕ್ಕೆ ನಾಲ್ಕೇ ನಾಲ್ಕು ಬಾದಾಮಿ ತಿಂದರೇ ಅದು ನಿಮ್ಮ ದೇಹಕ್ಕೂ ಒಳಿತು ಹಾಗೂ ಜೇಬಿಗೂ ಒಳಿತು. ಅಂತಹ ಬಾದಾಮಿಯನ್ನ ನೆನಸಿಟ್ಟು ತಿಂದರಂತೂ ಆಗುವ ಲಾಭಗಳು ದ್ವಿಗುಣ. ಬನ್ನಿ ಆ ಲಾಭಗಳನ್ನು ತಿಳಿದುಕೊಳ್ಳೋಣ.

ಬಾದಾಮಿ ಹೆಚ್ಚು ಪೋಷಕಾಂಶಗಳನ್ನ ಹೊಂದಿರುವ ಪದಾರ್ಥ. ಇದರಲ್ಲಿ ಶೇ 16.5 ರಷ್ಟು ಪ್ರೋಟಿನ್ ಹಾಗೂ ಶೇ 41ರಷ್ಟು ಕೊಬ್ಬು ರಹಿತ ಆಯಿಲ್ ಕಂಟೆಂಟ್ ಇರುತ್ತದೆ‌. ಇದು ಮೆದುಳಿನ ನರಗಳಿಗೆ ಹೆಚ್ಚು ಬಲ ತಂದು ಕೊಡುತ್ತದೆ. ಚಿಕ್ಕ ಮಕ್ಕಳಿಗೆ ಆ ಕಾರಣಕ್ಕೆ ಬಾದಾಮಿ ಹಾಲನ್ನ ನೀಡಿ ಎಂದು ಹೇಳುತ್ತಿರುತ್ತಾರೆ. ಬಾದಾಮಿಯಲ್ಲಿರುವ ರಿಬೋಫ್ಲೋವಿನ್ ಅಂಶ ಮೆದುಳಿನಲ್ಲಿರುವ ನರಗಳ ಚಟುವಟಿಕೆಯನ್ನು ಹೆಚ್ಚಿಸಿ, ಮೆದುಳು ಸದಾ ಚಟುವಟಿಕೆಯ ಕೇಂದ್ರವಾಗಿರುವಂತೆ ಮಾಡುತ್ತದೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಮತ್ತು ಸ್ವಲ್ಪ ಮರೆವಿನ ಖಾಯಿಲೆಯಿದೆ ಎಂದು ಹೇಳುವ ವೈದ್ಯರಿಗೆ ಬಾದಾಮಿ ತಿನ್ನಲು ಸಲಹೆ ನೀಡುತ್ತಾರೆ. ಅನಂತ್ ನಾಗ್ ರಕ್ಷಿತ್ ಶೆಟ್ಟಿ ಅಭಿನಯಧ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ಅನಂತ್ ನಾಗ್ ಬಾದಾಮಿ ತಿನ್ನುವುದನ್ನ ನೀವು ನೋಡಿರಬಹುದು.

ಸ್ಥೂಲಕಾಯದಿಂದ ಬಳಲುತ್ತಿರುವವರು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಲು ನಿಯಮಿತವಾಗಿ ಬಾದಾಮಿ ಸೇವಿಸಬೇಕು. ಅನೇಕ ಜೀವಸತ್ವ ಹಾಗೂ ಫಾಸ್ಪರಸ್ ಅಂಶ ಹೇರಳವಾಗಿರುವುದರಿಂದ ಹಲ್ಲು, ಒಸಡುಗಳನ್ನು ಧೃಡ ಮಾಡುತ್ತದೆ. ಮಲಬದ್ದತೆ ಹೊಂದಿರುವವರು, ರಕ್ತಹೀನತೆಯಿಂದ ಬಳಲುತ್ತಿರುವವರು, ಮುಖದಲ್ಲಿ ಜಿಡ್ಡಿನ ಕಾರಣ ಹೆಚ್ಚು ಮೊಡವೆ, ಕಲೆ ಹೊಂದಿದವರು ನಿಯಮಿತವಾಗಿ ರಾತ್ರಿ ನೆನಸಿಟ್ಟ ಬಾದಾಮಿಯನ್ನ ಬೆಳಗ್ಗೆ ತಿಂದರೇ ಖಂಡಿತ ಆ ಎಲ್ಲಾ ಸಮಸ್ಯೆಗಳಿಂದ ಹೊರಬರಬಹುದು. ಕೂದಲ ಆರೋಗ್ಯ ಹಾಗೂ ತ್ವಚೆಯ ಕೋಮಲತೆಗೂ ಬಾದಾಮಿ ಉತ್ತಮವಾಗಿರುತ್ತದೆ. ಇನ್ನೇಕೆ ತಡ, ನಿತ್ಯ ನೆನೆಸಿಟ್ಟ ಬಾದಾಮಿ ಸೇವಿಸಿ, ನಂತರ ನಿಮ್ಮ ದೇಹದಲ್ಲುಂಟಾದ ಪರಿಣಾಮವನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.