ಬಂಗಡೆ ಮೀನನ್ನು ಸತತವಾಗಿ ತಿಂದರೆ ಏನಾಗತ್ತೇ ಗೊತ್ತಾ?? ತಿನ್ನುವ ಮೊದಲು ಒಮ್ಮೆ ಈ ಲೇಖನ ಓದಿ.

ನಮಸ್ಕಾರ ಸ್ನೇಹಿತರೇ ಕರಾವಳಿ ಭಾಗದ ಅಂದರೆ ದಕ್ಷಿಣ ಕನ್ನಡ ಭಾಗದಲ್ಲಿ ಮುಖ್ಯ ಆಹಾರವೇ ಮೀನು. ವರ್ಷಪೂರ್ತಿ ಕೆಲವು ದಿನಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ದಿನ ಮನೆಯಲ್ಲಿ ಮೀನನ್ನು ಆಹಾರವಾಗಿ ಸೇವಿಸಿಯೇ ಸೇವಿಸುತ್ತಾರೆ. ಕೆಲವರಿಗಂತೂ ಪ್ರತಿ ದಿನವೂ ಊಟಕ್ಕೆ ಮೀನು ಬೇಕೆ ಬೇಕು! ಅದರಲ್ಲೂ ಕರಾವಳಿಯಲ್ಲಿ ಸಿಗುವ ಬಂಗಡೆ ಮೀನು. ಆಹಾ ಅದರ ರುಚಿಯೇ ಬೇರೆ. ಸ್ನೇಹಿತರೆ ಬಂಗಡೆ ಮೀನು ತಿನ್ನಲು ರುಚಿ ಮಾತ್ರವಲ್ಲದೇ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತದೆ.

ಬಂಗಡೆ ಮೀನಿನಲ್ಲಿ ಒಮೆಗಾ 3 ಫ್ಯಾಟ್ ಅಂಶವಿರುತ್ತದೆ. ಇದು ದೇಹದ ಹಲವಾರು ಖಾಯಿಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುವಂಥದ್ದು. ರಕ್ತದ ಒತ್ತಡ ಹಾಗೂ ಹೃದ್ರೋಗಗಳನ್ನು ನಿಯಂತ್ರಿಸಬಹುದು. ಹಾಗೆಯೇ ದೇಹದಲ್ಲಿರುವ ಕೊಬ್ಬು ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಲು ಬಂಗಡೆ ಮೀನು ಒಳ್ಳೆಯದು. ಬಂಗಡೆ ಮೀನಿನಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಇದು ಹೃದಯದ ಸಮಸ್ಯೆಯನ್ನು ನಿವಾರಿಸಬಲ್ಲದು. ಅಲ್ಲದೇ ಪಾರ್ಶ್ವವಾಯು ಉಂಟಾಗದಂತೆಯೂ ಕೂಡ ತಡೆಯುತ್ತದೆ.

ಇನ್ನು ಮಧುಮೇಹ ಸಮಸ್ಯೆಯನ್ನೂ ಕೂಡ ಬಂಗಡೆ ಮೀನು ತಿನ್ನುವುದರಿಂದ ನಿಯಂತ್ರಣದಲ್ಲಿಡಬಹುದು. ಮೂಳೆಗಳಿಗೆ ಸಂಬಂಧಿಸಿದ ಅರ್ಥೈಟಿಸ್ ಸಮಸ್ಯೆಗೆ ಬಂಡಗೆ ಮೀನು ತಿನ್ನುವುದೇ ಅತ್ಯುತ್ತಮ ಪರಿಹಾರ. ಕೀಲುನೋವು, ಮಂಡಿ ನೋವು ಅಥವಾ ಕೈ ಕಾಲುಗಳ ಸೆಳೆತ ಸಾಮಾನ್ಯವಾಗಿ ವಯಸ್ಸಾದ ಮೇಲೆ ಕಾಣಿಸಿಕೊಳ್ಳುವ ಸಮಸ್ಯೆ. ನಿಮಗೂ ಮುಂದೆ ಇಂಥ ಸಮಸ್ಯೆ ಕಾಣಿಸಿಕೊಳ್ಳಬಾರದು ಅಂತ ಇದ್ರೆ ತಪ್ಪದೇ ಬಂಗಡೆ ಮೀನನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇವಿಸಿ. ಕರುಳಿನ ಕ್ಯಾನ್ಸರ್ ನಿಯಂತ್ರಿಸುವ ವಿಟಮಿನ್ ಡಿ ಪ್ರಮಾಣವೂ ಕೂಡ ಬಂಗಡೆ ಮೀನಿನಲ್ಲಿ ಅಧಿಕವಾಗಿಯೇ ಇದೆ. ಜೊತೆಗೆ ನೆನಪಿನ ಶಕ್ತಿ ಹೆಚ್ಚಾಗುವುದಕ್ಕೂ ಬಂಗಡೆ ಮೀನನ್ನು ಸೇವಿಸಬಹುದು. ಆರೋಗ್ಯಕ್ಕೆ ಇಷ್ಟೇಲ್ಲಾ ಉಪಯುಕ್ತವಾಗಿರುವ ಬಂಗಡೆ ಮೀನನ್ನು ತಪ್ಪದೇ ಆಗಾಗ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ.